/newsfirstlive-kannada/media/post_attachments/wp-content/uploads/2025/03/ABHINAYA_NEW.jpg)
ತನ್ನ ಅತ್ಯುತ್ತಮವಾದ ನಟನೆಯಿಂದಲೇ ದಕ್ಷಿಣ ಭಾರತದ ಸಿನಿಮಾಗಳಿಂದ ಚಿರಪರಿಚಿತರಾಗಿರುವ ವಿಶೇಷ ಚೇತನ ನಟಿ ಅಭಿನಯ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಭಿನಯ ಅವರು ಯಾರನ್ನೂ ವರಿಸಲಿದ್ದಾರೆ ಎನ್ನುವ ಕೂತುಹಲ ಎಲ್ಲರಲ್ಲೂ ಇತ್ತು. ಕೊನೆಗೂ ಇದಕ್ಕೆ ಬ್ರೇಕ್ ಬಿದ್ದಿದೆ.
ಕನ್ನಡದ ಹುಡುಗರು ಸಿನಿಮಾದ ಪುನೀತ್ ರಾಜ್‍ಕುಮಾರ್ ಅವರ ತಂಗಿ ಪಾತ್ರದಲ್ಲಿ ನಟಿಸಿದ್ದ ಕಾಲಿವುಡ್​ನ ಖ್ಯಾತ ನಟಿ ಅಭಿನಯ ಅವರು ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ. ತಮ್ಮ ಬಹುಕಾಲದ ಗೆಳೆಯ ವೇಗೇಶನಾ ಕಾರ್ತಿಕ್ ಜೊತೆ ನಿಶ್ಚಿತಾರ್ಥವನ್ನು ಅದ್ಧೂರಿಯಾಗಿ ಮಾಡಿಕೊಂಡಿದ್ದಾರೆ. ವೇಗೇಶನಾ ಕಾರ್ತಿಕ್ ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಾಲ್ಯದ ಸ್ನೇಹಿತನ ಜೊತೆ ಸಂಬಂಧದಲ್ಲಿ ಇರುವುದಾಗಿ ಅಭಿನಯ ಹೇಳಿಕೊಂಡಿದ್ದರು. 15 ವರ್ಷದಿಂದ ಪರಿಚಯ ಇದೆ ಎಂದಿದ್ದರು. ಅವರು ಕಾರ್ತಿಕ್ ಎನ್ನುವುದು ಈಗ ಎಲ್ಲರಿಗೂ ಗೊತ್ತಾಗಿದೆ.
20 ದಿನಗಳ ಬಳಿಕ ಎಂಗೇಜ್​ಮೆಂಟ್​ನ ಫೋಟೋಗಳನ್ನು ತಮ್ಮ ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಇದೇ ಮಾರ್ಚ್ 9ರಂದು ನಮ್ಮ ನಿಶ್ಚಿತಾರ್ಥ ನಡೆಯಿತು ಎಂದು ಅಭಿನಯ ಬರೆದುಕೊಂಡಿದ್ದಾರೆ. ಭಾವಿ ಪತಿಯ ಜೊತೆಗಿನ ಬ್ಯೂಟಿಫುಲ್ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋಗಳಿಗೆ ಅಭಿಮಾನಿಗಳು, ಆಪ್ತರು ಲೈಕ್ಸ್, ಕಮೆಂಟ್ಸ್ ಮಾಡಿ ಅಭಿನಂದನೆ ತಿಳಿಸುತ್ತಿದ್ದಾರೆ.
ಇದನ್ನೂ ಓದಿ: 1ನೇ ತರಗತಿಗೆ ಮಕ್ಕಳನ್ನ ಸೇರಿಸಲು ವಯಸ್ಸಿನ ಸಮಸ್ಯೆ ಪರಿಹರಿಸದ ಸಚಿವ ಮಧು ಬಂಗಾರಪ್ಪ
/newsfirstlive-kannada/media/post_attachments/wp-content/uploads/2025/03/ABHINAYA.jpg)
ಅಭಿನಯಗೆ ಮಾತು ಬರಲ್ಲ, ಕಿವಿನೂ ಕೇಳಲ್ಲ. ಆದರೆ ನಟನೆಯಲ್ಲಿ ಮಾತ್ರ ಅದ್ಭುತ ಪ್ರತಿಭೆ. ಕನ್ನಡ, ತಮಿಳು, ತೆಲುಗು, ಮಲಯಾಳಂನ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡಿ ಖ್ಯಾತಿ ಪಡೆದಿದ್ದಾರೆ. ತಮಿಳು ಸಿನಿಮಾಗಳಲ್ಲಿ ನಾಯಕಿ ಆಗಿಯೂ ನಟಿಸಿದ್ದಾರೆ. ಅಭಿನಯ ಹಾಗೂ ನಟ ವಿಶಾಲ್ ಮಧ್ಯೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂದು ಗುಲ್ಲಾಗಿತ್ತು. ಇದಾದ ಮೇಲೆ ಹೈದರಾಬಾದ್ ಮೂಲದ ಉದ್ಯಮಿಯ ಕೈ ಹಿಡಿಯುತ್ತಾರೆ ಎನ್ನಲಾಗಿತ್ತು. ಆದರೆ ಈ ಪ್ರಶ್ನೆಗಳಿಗೆಲ್ಲಾ ಈಗ ಉತ್ತರ ಸಿಕ್ಕಿದೆ.
ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ ಹುಡುಗರು ಸಿನಿಮಾದಲ್ಲಿ ತಂಗಿಯಾಗಿ ಬಣ್ಣ ಹಚ್ಚಿದ್ದರು. ಬಳಿಕ ಕಿಚ್ಚು, ಆಟೋ ರಾಮಣ್ಣ ಎನ್ನುವ ಸಿನಿಮಾಗಳಲ್ಲಿ ನಟಿಸಿದ್ದರು. ಚೆನ್ನೈನಲ್ಲಿ ಹುಟ್ಟಿ ಬೆಳೆದ ಅಭಿನಯ, ಕೆಲ ತೆಲುಗು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದರು. ಬಳಿಕ ನಾಡೋಡಿಗಳ್ ಸಿನಿಮಾದಲ್ಲಿ ಹೀರೋನ ತಂಗಿಯಾಗಿ ನಟಿಸಿದ್ದರು. ತೆಲುಗಿನಲ್ಲಿ ಡಮರುಕಂ, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು, ಧಮ್ಮು, ಥನಿ ಒರುವನ್, ಸೀತಾ ರಾಮಂ, ವೀರಂ, ಪೂಜೈ, ಧ್ರುವ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯ ನಟಿಸಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us