/newsfirstlive-kannada/media/post_attachments/wp-content/uploads/2025/07/sarojadevi15.jpg)
ಸ್ಯಾಂಡಲ್ವುಡ್ನಲ್ಲಿ ಅಭಿನಯ ಸರಸ್ವತಿ ಎಂದು ಬಿರುದು ಪಡೆದುಕೊಂಡಿದ್ದರೆ, ಕಾಲಿವುಡ್ನಲ್ಲಿ ಕನ್ನಡದ ಗಿಳಿ ಎಂದು ಬಿರುದು ಬಂದಿತ್ತು. 1955ರಲ್ಲಿ ತನ್ನ 17ನೇ ವಯಸ್ಸಿಗೆ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ‘ಮಹಾಕವಿ ಕಾಳಿದಾಸ’ ಸರೋಜಾ ದೇವಿ ಅಭಿನಯದ ಮೊದಲ ಚಿತ್ರವಾಗಿದೆ.
1958ರಲ್ಲಿ ತಮಿಳಿನಲ್ಲಿ ಬಹುಬೇಡಿಕೆ ನಟಿಯಾಗಿದ್ದರು. ಅವರಿಗೆ ‘ನಾಡೋಡಿ ಮಾನಾನ್’ ಸಿನಿಮಾ ತಮಿಳಿನಲ್ಲಿ ಸಕ್ಸಸ್ ತಂದುಕೊಟ್ಟಿತ್ತು. 1959ರಲ್ಲಿ ‘ಪಾಂಡುರಂಗ ಮಾಹಾತ್ಯಂ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 1970 ವರೆಗೂ ತೆಲಗು ಇಂಡಸ್ಟ್ರೀಯಲ್ಲಿ ಯಶಸ್ವಿ ನಟಿಯಾಗಿದ್ದರು. 1967ರಲ್ಲಿ ಮದುವೆಯಾದ ಬಳಿಕವೂ 1974ರವೆಗೂ ತಮಿಳಿನಲ್ಲಿ ಬೇಡಿಕೆ ನಟಿಯಾಗಿದ್ದರು. 1980ರವೆಗೂ ಕನ್ನಡ ಮತ್ತು ತೆಲುಗಿನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ಸರೋಜಾ ದೇವಿ, 1959ರಿಂದ ಬಾಲಿವುಡ್ನಲ್ಲೂ ತನ್ನ ಛಾಪು ಮೂಡಿಸಿದ್ದರು. 161 ಸಿನಿಮಾಗಳಲ್ಲಿ ಲೀಡ್ ರೋಲ್ನಲ್ಲಿ ನಟಿಸಿರೋ ಅಭಿನಯ ಸರಸ್ವತಿಯಾಗಿದ್ದರು.
ಇದನ್ನೂ ಓದಿ:Breaking: ಸ್ಯಾಂಡಲ್ವುಡ್ನ ಅಭಿನಯ ಸರಸ್ವತಿ ಬಿ.ಸರೋಜಾದೇವಿ ಇನ್ನಿಲ್ಲ
ಸರೋಜಾದೇವಿ ವೃತ್ತಿ ಜೀವನ..
‘ಮಹಾಕವಿ ಕಾಳಿದಾಸ’ ಸಿನಿಮಾ ಹಿರಿಯ ನಟಿ ಸರೋಜಾ ದೇವಿ ಅವರ ಅಭಿನಯದ ಮೊದಲ ಚಿತ್ರವಾಗಿದೆ. ನಟಿ ಸರೋಜಾ ದೇವಿ ಅಭಿನಯದ ಮೊದಲ ಸಿನಿಮಾವೇ ಯಶಸ್ವಿಯಾಗಿತ್ತು. ಮೊದಲ ಸಿನಿಮಾದಲ್ಲಿ ಪೋಷಕ ನಟಿಯಾಗಿ ಅಭಿನಯ ಮಾಡಿದ್ದರು. ಅವರ ನಟನೆಯ ಮೊದಲ ಸಿನಿಮಾ ರಾಷ್ಟ್ರ ಪ್ರಶಸ್ತಿಗೆ ಭಾಜನಾವಾಗಿತ್ತು. ಕನ್ನಡದ ಅತ್ಯುತಮ ಕಲಾತ್ಮಕ ಚಿತ್ರವೆಂದು ರಾಷ್ಟ್ರಪ್ರಶಸ್ತಿ ಲಭಿಸಿತ್ತು. ನಂತರ 1957ರಲ್ಲಿ ತಮಿಳಿನ ತಂಗಮಲೈ ರಾಗಾಸಿಯಮ್ ಚಿತ್ರದಲ್ಲಿ ಅಭಿನಯಿಸಿದ್ದರು. ಆ ಸಿನಿಮಾದಲ್ಲಿ ಸರೋಜಾ ದೇವಿ ಅವರು ಡ್ಯಾನ್ಸರ್ ಆಗಿ ಅಭಿನಯಿಸಿದ್ದರು. ಸರೋಜಾ ದೇವಿ ನಟನೆಗೆ ಮೆಚ್ಚಿ ಎಂ.ಜಿ.ರಾಮಚಂದ್ರನ್ ಅವರು ಲೀಡ್ ರೋಲ್ಗೆ ಆಫರ್ ನೀಡಿದ್ದರು. 1958ರಲ್ಲಿ ‘ನಾಡೋಡಿ ಮನಾನ್’ ಸಿನಿಮಾಗೆ ನಾಯಕ ನಟಿಯಾಗಿ ಆಯ್ಕೆಯಾದರು. 1959ರಲ್ಲಿ ಹಿಂದಿ ಪೈಗಂ ಸಿನಿಮಾಗೆ ಸರೋಜಾ ದೇವಿ ಸಹಿ ಹಾಕಿದ್ದರು.
ಸರೋಜಾದೇವಿ ನಟನೆಯ ಸಿನಿಮಾಗಳು..
ಕಿತ್ತೂರುರಾಣಿ ಚೆನ್ನಮ್ಮ, ಅಮರಶಿಲ್ಪಿ ಜಕಣಾಚಾರಿ, ಕಥಾಸಾಗರ, ಬಬ್ರುವಾಹನ, ಭಾಗ್ಯವಂತರು, ಆಷಾಡಭೂತಿ, ಶ್ರೀರಾಮಪೂಜಾ, ಕಚ ದೇವಯಾನಿ, ರತ್ನಗಿರಿ ರಹಸ್ಯ, ಕೋಕಿಲವಾಣಿ, ಸ್ಕೂಲ್‌ಮಾಸ್ಟರ್, ಪಂಚರತ್ನ, ಲಕ್ಷ್ಮೀಸರಸ್ವತಿ, ಚಿಂತಾಮಣಿ, ಭೂಕೈಲಾಸ, ಅಣ್ಣತಂಗಿ, ಜಗಜ್ಯೋತಿ ಬಸವೇಶ್ವರ, ಕಿತ್ತೂರುಚೆನ್ನಮ್ಮ, ದೇವಸುಂದರಿ, ಗೃಹಿಣಿ, ವಿಜಯನಗರದ ವೀರಪುತ್ರ, ಮಲ್ಲಮ್ಮನ ಪವಾಡ, ಶ್ರೀಕೃಷ್ಣರುಕ್ಮಿಣಿ ಸತ್ಯಭಾಮ, ಪೂರ್ಣಿಮಾ, ಪಾಪಪುಣ್ಯ, ಸಹಧರ್ಮಿಣಿ, ಶ್ರೀನಿವಾಸಕಲ್ಯಾಣ, ಚಾಮುಂಡೇಶ್ವರಿ ಮಹಿಮೆ, ಚಿರಂಜೀವಿ, ಶನಿಪ್ರಭಾವ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿ ಸರೋಜಾ ದೇವಿ ನಟಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ