newsfirstkannada.com

ರಿಲೀಸ್​ಗೆ ರೆಡಿಯಾದ ‘ಬ್ಯಾಡ್​​ ಮ್ಯಾನರ್ಸ್’​.. ದಾಸನ ಕೈಯಾರೆ ಟ್ರೇಲರ್​ ಲಾಂಚ್​ ಮಾಡಿಸಿದ ಅಂಬಿ ಪುತ್ರ

Share :

Published November 13, 2023 at 6:42am

Update November 13, 2023 at 6:52am

  ರೆಬಲ್​ ಸ್ಟಾರ್ ಅಂಬಿ ಪುತ್ರನ 2ನೇ ಸಿನಿಮಾ ಬ್ಯಾಡ್​ ಮ್ಯಾನರ್ಸ್

  ‘ಬ್ಯಾಡ್​ ಮ್ಯಾನರ್ಸ್‘ ಇದೇ 24ರಂದು ಬೆಳ್ಳಿತೆರೆಗೆ ಅಪ್ಪಳಿಸಲಿದೆ

  ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿಬರುತ್ತಿದೆ ಈ ಸಿನಿಮಾ

ದಿವಂಗತ ನಟ ರೆಬಲ್​ ಸ್ಟಾರ್ ಅಂಬಿ ಪುತ್ರನ 2ನೇ ಸಿನಿಮಾ ಬ್ಯಾಡ್​ ಮ್ಯಾನರ್ಸ್​ ಇದೇ 24ರಂದು ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಅದಕ್ಕೂ ಮುನ್ನ, ಟ್ರೇಲರ್​ ಮೂಲಕ ಪ್ರೇಕ್ಷಕರ ಕಣ್ಣ ಮುಂದೆ ಎಂಟ್ರಿಯಾಗಿದೆ. ನಟ ದರ್ಶನ್​ ಮತ್ತು ಸುಮಲತಾ ಒಟ್ಟಿಗೆ ಬ್ಯಾಡ್​ ಮಾನರ್ಸ್​ ಚಿತ್ರದ ಟ್ರೈಲರ್​ ಲಾಂಚ್​ ಮಾಡಿದ್ದು, ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಟ್ರೈಲರ್​ ರಿಲೀಸ್​ಗಾಗಿ ದರ್ಶನ್​-ಸುಮಲತಾ ಪೈಪೋಟಿ

ಅಭಿಷೇಕ್ ಅಂಬರೀಶ್ ನಟನೆಯ ‘ಬ್ಯಾಡ್ ಮ್ಯಾನರ್ಸ್‘ ಚಿತ್ರವು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ದುನಿಯಾ ಸೂರಿ ನಿರ್ದೇಶನ  ಮೂಡಿಬರುತ್ತಿರುವ ಈ ಸಿನಿಮಾ ಬಗ್ಗೆ ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಕಳೆದ ರಾತ್ರಿ ಮಾಗಡಿ ರಸ್ತೆಯ ಜಿಟಿ ಮಾಲ್​ನಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇನ್ನು ಟ್ರೈಲರ್​ ರಿಲೀಸ್ ವೇಳೆ, ನಟ ದರ್ಶನ್​ ಮತ್ತು ಸುಮಲತಾ ರಿಲೀಸ್​ ನಾನ್​ ಮಾಡ್ತೀನಿ, ನಾನ್​ ಮಾಡ್ತೀನಿ ಎಂದು ತಮಾಷೆಯಾಗಿ ಕಿತ್ತಾಡಿದ್ದು, ನೆರೆದಿದ್ದ ಪ್ರೇಕ್ಷಕರನ್ನು ಕೆಲಕಾಲ ಕನ್ಫ್ಯೂಸ್​ ಮಾಡ್ತು. ಬಳಿಕ ಇಬ್ಬರೂ ಜೊತೆಯಾಗಿ ಬ್ಯಾಡ್​ ಮಾನರ್ಸ್​ ಚಿತ್ರದ ಟ್ರೇಲರ್​ ಲಾಂಚ್​ ಮಾಡಿ, ಶುಭಕೋರಿದ್ರು.

ಅಭಿಷೇಕ್ ಅಂಬರೀಶ್​ಗೆ ಹೊಸ ಹೆಸರು ಕೊಟ್ಟ ದರ್ಶನ್

ಇನ್ನು ಚಿತ್ರದ ಟ್ರೇಲರ್​ ಲಾಂಚ್​ ಬಳಿಕ ಮಾತನಾಡಿದ ನಟ ದರ್ಶನ್ ಹಾಗೂ ಮರಿ ಟೈಗರ್​ ವಿನೋದ್​ ಪ್ರಭಾಕರ್​, ಅಭಿಷೇಕ್​ ಅಂಬರೀಶ್​ಗೆ ಹೊಸದೊಂದು ಹೆಸರು ಇಟ್ರು. ಒಟ್ಟಾರೆ ಸಿನಿಮಾ ಬಹಳ ಚೆನ್ನಾಗಿ ಮೂಡಿ ಬಂದಿದೆ ನಟ ದರ್ಶನ್​, ಚಿತ್ರಕ್ಕೆ ವಿಶ್​ ಮಾಡಿದ್ರು.

ಇನ್ನು ಅಭಿಷೇಕ್​ ತಾಯಿ ಸುಮಲತಾ ಅಂಬರೀಶ್​ ಮಾತನಾಡಿ, ನಟ ದರ್ಶನ್​ ನನ್ನ ದೊಡ್ಡ ಮಗ ಇದ್ದಂತೆ ಎಂದು ಹೇಳಿದ್ರು. ಅಂಬಿ ನಿಧನವಾದ ದಿನ ನವೆಂಬರ್​ 24ರಂದು ಮಗನ ಚಿತ್ರ ಬಿಡುಗಡೆಯಾಗ್ತಿದ್ದು, ಎಲ್ಲರೂ ಪ್ರೀತಿಯಿಂದ ಹರಸಿ ಹಾರೈಸಿ ಎಂದು ಕೇಳಿಕೊಂಡ್ರು.

ಒಟ್ಟಾರೆ ತಂದೆ ರೆಬಲ್​ ಸ್ಟಾರ್​ ಅಂಬರೀಷ್​ರಂತೆಯೇ ಪುತ್ರ ಅಭಿಷೇಕ್​ ಅಂಬರೀಶ್​ ಕೂಡ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಯಾಡ್​ ಮ್ಯಾನರ್ಸ್​ ಚಿತ್ರದ ಟ್ರೇಲರ್​ ಸೋಷಿಯಲ್​ ಮಿಡಿಯಾದಲ್ಲಿ ಸದ್ದು ಮಾಡ್ತಿದ್ದು, ರಿಲೀಸ್​ ಬಳಿಕ ಪ್ರೇಕ್ಷಕರು ಏನಂತಾರೆ ಅನ್ನೋ ಕುತೂಹಲ ಚಿತ್ರದ ತಂಡಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಿಲೀಸ್​ಗೆ ರೆಡಿಯಾದ ‘ಬ್ಯಾಡ್​​ ಮ್ಯಾನರ್ಸ್’​.. ದಾಸನ ಕೈಯಾರೆ ಟ್ರೇಲರ್​ ಲಾಂಚ್​ ಮಾಡಿಸಿದ ಅಂಬಿ ಪುತ್ರ

https://newsfirstlive.com/wp-content/uploads/2023/11/Bad-Manners.jpg

Load More