newsfirstkannada.com

ಮಂಡ್ಯ ಪೂರ್ತಿ ಬೀಗರ ಊಟದ ಸುವಾಸನೆ; ಈ ದೃಶ್ಯ ಕಂಡ್ರೆ ಬಾಯಿ ಚಪ್ಪರಿಸೋದು ಗ್ಯಾರಂಟಿ

Share :

16-06-2023

    ಅಭಿ-ಅವಿವಾ ಬೀಗರ ಔತಣಕೂಟಕ್ಕೆ ಕ್ಷಣಗಣನೆ..

    ಘಮ ಘಮ ಬರುತ್ತಿದೆ ಮಂಡ್ಯ ಗೌಡ್ರ ಬೀಗರ ಅಡುಗೆ

    ಚಿಕನ್​, ಮಟನ್​, ಮುದ್ದೆ.. ಖಾದ್ಯಗಳೆಷ್ಟಿವೆ ಗೊತ್ತಾ?

ಮಂಡ್ಯ: ಅಭಿ-ಅವಿವಾ ಮದುವೆಯಾಗಿ ಒಂದು ವಾರ ಕಳೆದಿದೆ. ಅಂಬಿ ಕುಟುಂಬದ ಆಸೆಯಂತೆ ಇಂದು ಬೀಗರ ಊಟದ ವ್ಯವಸ್ಥೆ ಮಾಡಲಾಗಿದೆ. ಮಂಡ್ಯದ ಗೆಜ್ಜಲಗೆರೆ ಬಳಿ 15 ಎಕರೆ ಪ್ರದೇಶದಲ್ಲಿ ಕುಳಿತು ಊಟ ಮಾಡುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.

ಈಗಾಗಲೇ ಮಂಡ್ಯದಾದ್ಯಂತ ಬೀಗರ ಊಟದ ಸುವಾಸನೆ ಆಕ್ರಮಿಸಿಕೊಂಡಿದೆ. ಜನರಿಗಾಗಿ ಬಗೆ ಬಗೆಯ ಖಾದ್ಯಗಳು ರೆಡಿಯಾಗಿವೆ. ಬಿಸಿ ಬಿಸಿ ಮತ್ತು ರುಚಿ ರುಚಿಯಾದ ಆಡುಗೆಯನ್ನ ಭಟ್ರು ತಯಾರಿಸಿದ್ದಾರೆ. ಫ್ಯಾನ್ಸ್​ಗಾಗಿ ರಾಗಿ ಮುದ್ದೆ, ಬೋಟಿ ಗೊಜ್ಜು, ಮಟನ್ ಬಿರಿಯಾನಿ, ಎರಡು ತರಹದ ಚಿಕನ್ ಖಾದ್ಯ, ಮೊಟ್ಟೆ, ಅನ್ನ, ನಾಟಿಕೋಳಿ ಸಾರು, ರಸಂ, ಬೀಡ, ಐಕ್ರೀಂ, ಬಾಳೆ ಹಣ್ಣು ಸೇರಿದಂತೆ ಬಗೆ ಬಗೆಯ ಅಡುಗೆ ರೆಡಿಯಾಗಿದೆ.

ಅಂದಹಾಗೆಯೇ ಗೆಜ್ಜಲಗೆರೆ ಬಳಿ 15 ಎಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್ ಹಾಕಿ ಟೇಬಲ್ ಹಾಗೂ ಆಸನ ವ್ಯವಸ್ಥೆ ಕಲ್ಫಿಸಲಾಗಿದೆ. ಒಂದೇ ಬಾರಿ ನಾಲ್ಕೂವರೆ ಸಾವಿರ ಜನರು ಕೂತು ಊಟ ಮಾಡುವಂತೆ ಸಿದ್ಧತೆ ಮಾಡಿದ್ದಾರೆ. ಮಂಡ್ಯದ ಪ್ರಖ್ಯಾತ ಬಾಣಸಿಗರ ತಂಡದಿಂದ ಅಡುಗೆ ತಯಾರಿಸಿದ್ದಾರೆ. 11.30 ರ ಸುಮಾರಿಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ.

ಈಗಾಗಲೇ ಕೆಲವು ಆಹಾರಗಳು ರೆಡಿಯಾಗಿದ್ದು, ಕೆಲವು ದೃಶ್ಯಗಳು ಇಲ್ಲಿವೆ

ತರಕಾರಿ ಕತ್ತರಿಸುತ್ತಿರುವ ದೃಶ್ಯ

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಮಂಡ್ಯ ಪೂರ್ತಿ ಬೀಗರ ಊಟದ ಸುವಾಸನೆ; ಈ ದೃಶ್ಯ ಕಂಡ್ರೆ ಬಾಯಿ ಚಪ್ಪರಿಸೋದು ಗ್ಯಾರಂಟಿ

https://newsfirstlive.com/wp-content/uploads/2023/06/Food.jpg

Load More