/newsfirstlive-kannada/media/post_attachments/wp-content/uploads/2023/06/abhishek-1.jpg)
ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಇಂದು ಅಂಬಿ ಪುತ್ರ ಅಭಿಷೇಕ್ ಅಂಬರೀಶ್​​​ ಮತ್ತು ಅವಿವಾ ಜೊತೆ ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್​ನಲ್ಲಿ ಅಭಿ-ಅವಿವಾ ಮದುವೆಗೆ ನಡೆಯುತ್ತಿದೆ. ಅರಮನೆ ಮೈದಾನದ ಚಾಮರವಜ್ರದಲ್ಲಿ ನವದಂಪತಿ ಹಸೆಮಣೆ ಏರಲಿದ್ದಾರೆ. ಇಂದು ಬೆಳಗ್ಗೆ 9.30 ರಿಂದ 10ಗಂಟೆಯ ಶುಭ ಮುಹೂರ್ತದಲ್ಲಿ ತನ್ನ ಹೃದಯ ಗೆಳತಿ ಅವಿವಾ ಬಿಡಪ ಅವರಿಗೆ ಮರಿ ರೆಬಲ್ ಸ್ಟಾರ್ ಮಾಂಗಲ್ಯಧಾರಣೆ ಮಾಡಲಿದ್ದಾರೆ. ಈ ಮದುವೆಯ ನಂತರ ಜೂನ್ 7ನೇ ತಾರೀಖು ತ್ರಿಪುರವಾಸಿನಿ ಗ್ರೌಂಡ್​ನಲ್ಲಿ ನವದಂಪತಿ ಅಭಿ-ಅವಿವಾ ಆರತಕ್ಷತೆ ನಡೆಯಲಿದೆ.
/newsfirstlive-kannada/media/post_attachments/wp-content/uploads/2023/06/ABHISHEK.jpg)
ಆರತಕ್ಷತೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಲು ಕುಟುಂಬ ಪ್ಲಾನ್ ಮಾಡಿಕೊಂಡಿದೆ. ಜೊತೆಗೆ ಸಂಗೀತ ಸಂಜೆ ಕೂಡ ಆಯೋಜನೆ ಮಾಡಲು ಅಂಬಿ-ಅವಿವಾ ಫ್ಯಾಮಿಲಿ ತೆರೆ ಮರೆಯ ಸಿದ್ಧತೆಯನ್ನ ಮಾಡಿಕೊಳ್ತಾ ಇದೆ ಎನ್ನಲಾಗಿದೆ.
ಇಂದು ನಡೆಯುವ ಮದುವೆ ಕಾರ್ಯಕ್ರಮಕ್ಕೆ ಕೇವಲ 1000 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸ್ಯಾಂಡಲ್​ವುಡ್​ ಕೆಲವು ಆತ್ಮೀಯ ಸೆಲೆಬ್ರಿಟಿಗಳು, ರಾಜಕಾರಣಿಗಳು ಹಾಗೂ ಅಂಬಿ ಮತ್ತು ಬಿಡಪ ಕುಟುಂಬದ ಬಂಧು ಮಿತ್ರರು ಮಾತ್ರ ಮದುವೆಯಲ್ಲಿ ಪಾಲ್ಗೊಂಡು ವಧು-ವರರಿಗೆ ಆಶೀರ್ವದಿಸಲಿದ್ದಾರೆ.
ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿಡಪ ಕಲ್ಯಾಣ ಮಹೋತ್ಸವ..#newsfirstkannada#kannadanews#abhishekambareesh#marriage#avivabidapa#Bangalore@sumalathaApic.twitter.com/WhKBoxtQdW
— NewsFirst Kannada (@NewsFirstKan) June 5, 2023
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ 'ಫಿಲ್ಮಿ ಫಸ್ಟ್' ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us