/newsfirstlive-kannada/media/post_attachments/wp-content/uploads/2025/03/Ambareesh-Abhishek.jpg)
ರೆಬೆಲ್ ಸ್ಟಾರ್ ಅಂಬರೀಶ್ ಮೊಮ್ಮಗನ ನಾಮಕರಣ ಶಾಸ್ತ್ರ ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ.
ಅಭಿಷೇಕ್ ಅಂಬರೀಶ್ ಅವರು ತಮ್ಮ ಮಗನಿಗೆ ಅಪ್ಪನ ಹೆಸರಿಟ್ಟಿದ್ದಾರೆ. ಅಭಿಷೇಕ್ ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ನಾಮಕರಣ ಮಾಡಲಾಗಿದೆ.
/newsfirstlive-kannada/media/post_attachments/wp-content/uploads/2025/03/Abhishek-Ambareesh.jpg)
ರೆಬೆಲ್ ಸ್ಟಾರ್ ಅಂಬರೀಶ್ ಅವರ ಮೂಲ ಹೆಸರು ಅಮರನಾಥ್ ಅನ್ನೋದಾಗಿತ್ತು. ಈ ಹಿನ್ನೆಲೆಯಲ್ಲಿ ಅಭಿಷೇಕ್ ಅಂಬರೀಶ್ ಅವರು ತಮ್ಮ ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ಹೆಸರಿಟ್ಟಿದ್ದಾರೆ.
ಇದನ್ನೂ ಓದಿ: ನನಗೇನು ಹೆಂಡತಿ, ಮಕ್ಕಳು ಇಲ್ವಾ? ನಟ ಸೃಜನ್ ಲೋಕೇಶ್ ಫುಲ್ ಗರಂ; ಕಾರಣವೇನು? VIDEO
ಖಾಸಗಿ ಹೋಟೆಲ್‌ನಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಸುಮಲತಾ ಮೊಮ್ಮಗನಿಗೆ ನಾಮಕರಣ ಶಾಸ್ತ್ರ ನೆರವೇರಿದೆ. ಆಪ್ತವಲಯದವರು ಹಾಗೂ ಕುಟುಂಬಸ್ಥರಿಗೆ ಮಾತ್ರ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು.
2024ರ ನವೆಂಬರ್ 12ರಂದು ಅಭಿಷೇಕ್-ಅವಿವಾಗೆ ಗಂಡು ಮಗು ಜನಿಸಿತ್ತು. ಅ ಅನ್ನೋ ಹೆಸರಿನಲ್ಲೇ ಮಗುವಿಗೆ ಹೆಸರಿಡೋ ಪ್ಲಾನ್ ಕುಟುಂಬಸ್ಥರಲ್ಲಿ ಇತ್ತು. ಅಂಬರೀಶ್ ಅವರ ಹೆಸರಿಡೋ ಬಗ್ಗೆಯೂ ಚರ್ಚಿಸಿದ್ದ ಕುಟುಂಬಸ್ಥರು ಅಂತಿಮವಾಗಿ ರಾಣಾ ಅಮರ್ ಅಂಬರೀಶ್ ಎಂದು ನಾಮಕರಣ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us