/newsfirstlive-kannada/media/post_attachments/wp-content/uploads/2024/09/aviva.jpg)
ಕೆಲವು ದಿನಗಳಿಂದ ಯಂಗ್​ ರೆಬೆಲ್​​ ಸ್ಟಾರ್​ ಅಭಿಷೇಕ್​ ಅಂಬರೀಶ್ ತಂದೆಯಾಗುತ್ತಿದ್ದಾರೆ ಎಂಬೆಲ್ಲಾ ಸುದ್ದಿ ವೈರಲ್​ ಆಗಿತ್ತು. ಅಭಿಷೇಕ್​ ಅಂಬರೀಶ್​​​ ಅವರ ಮನೆಯಲ್ಲಿ ಸಂಭ್ರಮದ ಮನೆ ಮಾಡಿದೆ. ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ದಂಪತಿ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ ಎಂಬೆಲ್ಲಾ ಸುದ್ದಿ ಹರಿದಾಡುತ್ತಿತ್ತು.
/newsfirstlive-kannada/media/post_attachments/wp-content/uploads/2024/09/aviva2.jpg)
ಇತ್ತೀಚೆಗೆ ಅವಿವಾ-ಅಭಿಷೇಕ್ ವಿದೇಶದಲ್ಲಿ ಟ್ರಿಪ್ ಹೋಗಿದ್ದ ವೀಡಿಯೋವನ್ನ ಶೇರ್ ಮಾಡಿದ್ದರು. ಆ ವೀಡಿಯೋದಲ್ಲೂ ಅವಿವಾ ಸೆಲ್ಫಿ ಹೊರತಾಗಿ ಹೊಟ್ಟೆ ಭಾಗವನ್ನ ಕಾಣಿಸಿರಲಿಲ್ಲ. ಹೀಗಾಗಿ ಅವಿವಾ ಗರ್ಭಿಣಿ ಅನ್ನೋ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.
/newsfirstlive-kannada/media/post_attachments/wp-content/uploads/2024/08/Abishek-Ambareesh1.jpg)
ಆದರೆ ಇದೀಗ ಅಭಿಷೇಕ್ ಪತ್ನಿ ಅವಿವಾ ಬಿದಪ್ಪ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ ಅವಿವಾ ಅವರು ಗುಲಾಬಿ ಬಣ್ಣದ ರೇಷ್ಮೆ ಸೀರೆಯುಟ್ಟು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದೇ ಫೋಟೋಗೆ ಸಾಕಷ್ಟು ಮಂದಿ ಕಾಮೆಂಟ್ಸ್​ ಹಾಕಿದ್ದಾರೆ. ನೋಡಿ ಆ ಗ್ಲೋ ಹೇಗಿದೆ. ಕ್ಯೂಟ್​ ಬ್ಯೂಟಿ ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ. ಸದ್ಯದಲ್ಲೇ ಸುಮಲತಾ ಅಂಬರೀಶ್ ಕುಟುಂಬಕ್ಕೆ ಮತ್ತೊಂದು ಹೊಸ ಅತಿಥಿಯನ್ನು ಆಗಮನವಾಗಲಿದೆ ಎಂದು ಹೇಳಾಗುತ್ತಿದೆ.
View this post on Instagram
ಆದರೆ ಈ ಬಗ್ಗೆ ಅವರ ಕುಟುಂಬ ಅಧಿಕೃತವಾಗದ ಮಾಹಿತಿಯನ್ನು ಇನ್ನೂ ಹಂಚಿಕೊಂಡಿಲ್ಲ. ಈ ಇಬ್ಬರ ಮದುವೆಯು ಕಳೆದ ವರ್ಷ ಜೂನ್ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಅವಿವಾ ಬಿದ್ದಪ್ಪ, ಮಾಡೆಲ್ ಹಾಗೂ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಅವಿವಾ ತಂದೆ ಕೂಡ ದೊಡ್ಡ ಬ್ಯುಸಿನೆಸ್ ಮ್ಯಾನ್. ಮುಂದಿನ ದಿನಗಳಲ್ಲಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡ್ತಾರಾ ಅಂತ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us