ಅಭಿಷೇಕ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್.. ಶರವೇಗದ ಸೆಂಚುರಿ ಸಿಡಿಸಿದ ಯುವ ಬ್ಯಾಟರ್​

author-image
Bheemappa
Updated On
2ನೇ ಟಿ20 ಪಂದ್ಯದಲ್ಲಿ ಕೈ ಕೊಟ್ಟ ಅಭಿಷೇಕ್​ ಶರ್ಮಾ; ಟೀಮ್​ ಇಂಡಿಯಾದಿಂದ ಗೇಟ್​ಪಾಸ್​
Advertisment
  • ಅಭಿಷೇಕ್ ಶರ್ಮಾ ಬ್ಯಾಟಿಂಗ್ ನೋಡಿ ಪ್ಲೇಯರ್ಸ್ ಶಾಕ್
  • ಬಂದ ಬಾಲ್ ಅನ್ನು ಬಂದಾಗೆ ಬೌಂಡರಿ ಗೆರೆ ದಾಟಿಸಿದರು
  • ಕೇವಲ 9.3 ಓವರ್​ಗಳಲ್ಲೇ ಗೆಲುವು ಪಡೆದಿರುವ ಟೀಮ್

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು ಕೇವಲ 28 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಪಂಜಾಬ್ ಟೀಮ್ ಕೇವಲ 9.3 ಓವರ್​ಗಳಲ್ಲೇ ಗೆಲುವು ಪಡೆದಿದೆ.

ರಾಜ್​ಕೋಟ್​​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮೇಘಾಲಯ ಟೀಮ್ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 143 ರನ್ ಕೂಡಿ ಹಾಕಿತ್ತು. ಈ ಟಾರ್ಗೆಟ್ ಬೆನ್ನತ್ತಿದ ಪಂಜಾಬ್ ತಂಡ ಕೇವಲ 9.3 ಎಸೆತಗಳಲ್ಲೇ ಮೂರು ವಿಕೆಟ್ ಕಳೆದುಕೊಂಡು ಗೆಲುವು ಪಡೆಯಿತು. ಪಂಜಾಬ್ ಕ್ಯಾಪ್ಟನ್​ ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ನೂತನ ದಾಖಲೆ ನಿರ್ಮಿಸಿದರು.

ಇದನ್ನೂ ಓದಿ: IND vs AUS: ಸ್ಟಾರ್ಕ್​ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ​; ಕೇವಲ 180 ರನ್​ಗೆ ಸರ್ವಪತನ..!

publive-image

ಮೇಘಾಲಯ ವಿರುದ್ಧ ಬರೋಬ್ಬರಿ 365.52 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ ಅಭಿಷೇಕ್ ಕೇವಲ 28 ಎಸೆತಗಳಲ್ಲಿ 11 ಸಿಕ್ಸರ್ ಹಾಗೂ 8 ಬೌಂಡರಿ ಸಮೇತ 106 ರನ್​ ಬಾರಿಸಿದರು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮೇಘಾಲಯ 143 ರನ್​ಗಳ ಟಾರ್ಗೆಟ್ ನೀಡಿತ್ತು. ಈ ಟಾರ್ಗೆಟ್​ ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ಮುಂದೆ ಏನು ಅನಿಸಲಿಲ್ಲ.

ಟಿ20 ಇತಿಹಾಸದಲ್ಲೇ ಅತೀ ವೇಗದ ಶತಕ ಸಿಡಿಸುವ ಮೂಲಕ ಭಾರತೀಯ ಬ್ಯಾಟರ್​​ಗಳ ಪಟ್ಟಿಯಲ್ಲಿ ಅಭಿಷೇಕ್ ಮೊದಲ ಸ್ಥಾನದಲ್ಲಿದ್ದಾರೆ. ತ್ರಿಪುರ ವಿರುದ್ಧ ಪಂದ್ಯದಲ್ಲಿ ಗುಜರಾತ್ ತಂಡದ ಓಪನರ್ ಉರ್ವಿಲ್, ಕೇವಲ 28 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದರು. ಇವರು ದಾಖಲೆ ಬರೆದು ಒಂದು ವಾರದೊಳಗೆ ಅಭಿಷೇಕ್ ಶರ್ಮಾ ಸರಿಗಟ್ಟಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment