/newsfirstlive-kannada/media/post_attachments/wp-content/uploads/2024/12/ABHISHEK-SHARMA-1.jpg)
ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಪಂಜಾಬ್ ನಾಯಕ ಅಭಿಷೇಕ್ ಶರ್ಮಾ ಸ್ಫೋಟಕ ಶತಕ ಸಿಡಿಸಿದ್ದಾರೆ. ಕೇವಲ 28 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಆ ಮೂಲಕ ಮುಂಬರುವ ಐಪಿಎಲ್ನಲ್ಲಿ ಧಮಾಕಾ ಸೃಷ್ಟಿಯಾಗೋದು ಪಕ್ಕಾ ಆಗಿದೆ.
ಮೇಘಾಲಯ ವಿರುದ್ಧ ಬರೋಬ್ಬರಿ 365.52 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ಅಭಿಷೇಕ್ 11 ಸಿಕ್ಸರ್ ಹಾಗೂ 8 ಬೌಂಡರಿ ಸಿಡಿಸಿದ್ದಾರೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೇಘಾಲಯ 143 ರನ್ಗಳ ಟಾರ್ಗೆಟ್ ನೀಡಿತ್ತು. ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕೇವಲ 9.3 ಓವರ್ಗಳಲ್ಲೇ ಚೇಸ್ ಮಾಡಿ ಪಂದ್ಯ ಗೆದ್ದು ಬೀಗಿದೆ.
ಆ ಮೂಲಕ ಅತೀ ಕಡಿಮೆ ಬಾಲ್ಗೆ ಶತಕ ಬಾರಿಸಿದ ಎರಡನೇ ಬ್ಯಾಟ್ಸ್ಮನ್ ಅನ್ನೋ ಹೆಗ್ಗಳಿಗೆ ಅಭಿಷೇಕ್ ಶರ್ಮಾ ಪಡೆದುಕೊಂಡಿದ್ದಾರೆ. ಈ ವರ್ಷ ನಡೆದ Estonia vs Cyprus ಪಂದ್ಯದಲ್ಲಿ ಇಸ್ಟೋರಿಯನ್ ಕ್ರಿಕೆಟರ್ ಸಾಹಿಲ್ ಚೌಹಾಣ್ 27 ಬಾಲ್ನಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದರು. ಅದೇ ರೀತಿ ಗುಜರಾತ್ vs ತ್ರಿಪುರಾ ಪಂದ್ಯದಲ್ಲಿ ಉರ್ವಿಲ್ ಪಟೇಲ್ 28 ಬಾಲ್ಗೆ ಶತಕ ಬಾರಿಸಿದ್ದರು. 28 ಬಾಲ್ನಲ್ಲಿ ಶತಕ ಬಾರಿಸಿದ ಅಭಿಷೇಕ್ಗೆ ಸಾಹಿಲ್ ದಾಖಲೆ ಮುರಿಯಲು ಸಾಧ್ಯವಾಗಿಲ್ಲ.
ಮಾರ್ಚ್ನಿಂದ ಐಪಿಎಲ್ ಹಬ್ಬ ಶುರುವಾಗಲಿದೆ. ಅಭಿಷೇಕ ಶರ್ಮಾ ಫಾರ್ಮ್ನಲ್ಲಿ ಕಾಣಿಸಿಕೊಂಡಿರೋದು ಎಸ್ಆರ್ಹೆಚ್ಗೆ ಪ್ಲಸ್ ಪಾಯಿಂಟ್ ಆಗಿದೆ. ಸನ್ರೈಸರ್ಸ್ ಹೈದರಾಬಾದ್ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ. ಇವರನ್ನು ಫ್ರಾಂಚೈಸಿ 14 ಕೋಟಿ ನೀಡಿ ರಿಟೈನ್ ಮಾಡಿಕೊಂಡಿದೆ.
ಇದನ್ನು ಓದಿ: IND vs AUS: ಸ್ಟಾರ್ಕ್ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ; ಕೇವಲ 180 ರನ್ಗೆ ಸರ್ವಪತನ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ