newsfirstkannada.com

ಕೋಟಿ ದಾನ ಮಾಡ್ತೀನಿ ಎಂದ ವಿಜಯ್​; ‘ನಿನ್ನ ಸಿನಿಮಾದಿಂದ 8 ಕೋಟಿ ಹೋಗಿದೆ’ ಎಂದ ಡಿಸ್ಟ್ರಿಬ್ಯೂಟರ್ಸ್​

Share :

Published September 6, 2023 at 3:33pm

Update September 6, 2023 at 3:35pm

    ನಟ ವಿಜಯ್​ ದೇವರಕೊಂಡ, ಸ್ಯಾಮ್​ ಅಭಿನಯದ ಖುಷಿ ಸಿನಿಮಾ

    ಖುಷಿ ಸಕ್ಸಸ್​​ ಬೆನ್ನಲ್ಲೇ 1 ಕೋಟಿ ಡೊನೇಟ್​ ಮಾಡ್ತೀನಿ ಎಂದ ನಟ

    ನಿನ್ನ ಸಿನಿಮಾದಿಂದ 8 ಕೋಟಿ ಹೋಗಿದೆ ಎಂದ ಡಿಸ್ಟ್ರಿಬ್ಯೂಟರ್​ಗಳು

ನಟ ವಿಜಯ್​ ದೇವರಕೊಂಡ, ಸೌತ್​​ ಸ್ಟಾರ್​ ಹೀರೋಯಿನ್​​​ ಸಮಂತಾ ಅಭಿನಯದ ಖುಷಿ ಸಿನಿಮಾ ಡೀಸೆಂಟ್​ ಹಿಟ್​ ಆಗಿದೆ. ರಿಲೀಸ್​ ಆದ ಕೇವಲ 4 ದಿನಕ್ಕೆ ಬರೋಬ್ಬರಿ 75 ಕೋಟಿಗೂ ಹೆಚ್ಚು ರೂ. ಕಲೆಕ್ಷನ್​ ಮಾಡಿದೆ. ಈ ಮಧ್ಯೆ ನಟ ವಿಜಯ್​ ದೇವರಕೊಂಡ ಮಹತ್ವದ ಅನೌನ್ಸ್​ಮೆಂಟ್​​ ಒಂದು ಮಾಡಿದ್ದಾರೆ. ನನ್ನ ಖುಷಿ ಸಿನಿಮಾದ ಸಂಭಾವನೆಯಲ್ಲಿ 1 ಕೋಟಿ ಬಡವರಿಗೆ ದಾನ ಮಾಡುವುದಾಗಿ ಘೋಷಿಸಿದ್ದಾರೆ.

ಇನ್ನು, ವಿಜಯ್​​​ ದೇವರಕೊಂಡ ಹೀಗೆ ಘೋಷಣೆ ಮಾಡಿದ ಬೆನ್ನಲ್ಲೇ ಅಭಿಷೇಕ್​ ಪಿಚ್ಚರ್ಸ್​​ ಟ್ವೀಟ್​​ವೊಂದು ಮಾಡಿದೆ. ಟ್ವೀಟ್​ನಲ್ಲಿ ವಿಜಯ್​ ಅವರೇ ವರ್ಲ್ಡ್​​ ಫೇಮಸ್​ ಲವರ್​ ಸಿನಿಮಾದಿಂದ ಸುಮಾರು 8 ಕೋಟಿ ಕಳೆದುಕೊಂಡಿದ್ದೇವೆ. ನೀವೀಗ 1 ಕೋಟಿ ಬಡವರಿಗೆ ಡೊನೇಟ್​ ಮಾಡುತ್ತಿದ್ದೀರಿ. ಅದೇ ಒಳ್ಳೇ ಮನಸ್ಸಿನಿಂದ ಸಂಕಷ್ಟದಲ್ಲಿರೋ ಡಿಸ್ಟ್ರಿಬ್ಯೂಟರ್ಸ್​​ ಮತ್ತು ಎಕ್ಸಿಬೀಟರ್ಸ್​​ ಕುಟುಂಬಗಳಿಗೆ ಸಹಾಯ ಮಾಡಿ ಎಂದು ಬರೆದುಕೊಂಡಿದೆ. ಈ ಟ್ವೀಟ್​ (X) ಭಾರೀ ವೈರಲ್​ ಆಗಿದೆ.

ಸದ್ಯ ಅನೌನ್ಸ್​ ಮಾಡಿದಂತೆಯೇ ವಿಜಯ್​ ಲಿಂಕ್​ವೊಂದು ಶೇರ್​ ಮಾಡಿದ್ದಾರೆ. ಲಿಂಕ್​​ ಬಳಸಿ ಫಾರ್ಮ್​​​ ಫಿಲ್​​ ಮಾಡಿದ ಕುಟುಂಬಗಳಿಗೆ 1 ಕೋಟಿ ರೂ. ದಾನ ಮಾಡಲಾಗುತ್ತಿದೆ. ಈ ದುಡ್ಡು ರೆಂಟ್​, ಮಕ್ಕಳ ಫೀಸ್​​, ಮೆಡಿಕಲ್​ ಎಮರ್ಜೆನ್ಸಿ ಸೇರಿದಂತೆ ಯಾವುದಕ್ಕೆ ಬೇಕಾದ್ರೂ ಬಳಸಬಹುದು ಎಂದು ವಿಜಯ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಟಿ ದಾನ ಮಾಡ್ತೀನಿ ಎಂದ ವಿಜಯ್​; ‘ನಿನ್ನ ಸಿನಿಮಾದಿಂದ 8 ಕೋಟಿ ಹೋಗಿದೆ’ ಎಂದ ಡಿಸ್ಟ್ರಿಬ್ಯೂಟರ್ಸ್​

https://newsfirstlive.com/wp-content/uploads/2023/09/KUSHI.jpg

Load More