KL ರಾಹುಲ್​ ಅವರ​ ದೊಡ್ಡ ಗುಣವನ್ನು ರಿವೀಲ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ನ ಯುವ ಆಟಗಾರ..!

author-image
Ganesh
Updated On
KL ರಾಹುಲ್​ ಅವರ​ ದೊಡ್ಡ ಗುಣವನ್ನು ರಿವೀಲ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ನ ಯುವ ಆಟಗಾರ..!
Advertisment
  • ನಿನ್ನೆ ಹೈದರಾಬಾದ್ ತಂಡದ ಜೊತೆ ಡೆಲ್ಲಿ ಸೆಣಸಾಟ..!
  • ಅಕ್ಸರ್ ಕ್ಯಾಪ್ಟನ್ಸಿ ಬಗ್ಗೆ ಅಭಿಷೇಕ್ ಪೊರೆಲ್ ಏನಂದ್ರು?
  • 18 ಎಸೆತದಲ್ಲಿ 34 ರನ್​ಗಳಿಸಿದ ಅಭಿಷೇಕ್ ಪೊರೆಲ್

ನಿನ್ನೆ ನಡೆದ ಡಬಲ್ ಹೆಡರ್​ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ. ಪಂದ್ಯದ ನಂತರ DC ಆಟಗಾರ ಅಭಿಷೇಕ್ ಪೊರೆಲ್, ತಮ್ಮ ಕ್ಯಾಪ್ಟನ್ ಅಕ್ಸರ್ ಪಟೇಲ್ ಹಾಗೂ ಹಿರಿಯ ಆಟಗಾರ ಕೆ.ಎಲ್.ರಾಹುಲ್ ಅವರ ನಡೆಯನ್ನು ಶ್ಲಾಘಿಸಿದರು.

ನಾನು ಅಕ್ಸರ್ ಅವರ ನಾಯಕತ್ವವನ್ನು ತುಂಬಾ ಆನಂದಿಸುತ್ತಿದ್ದೇನೆ. ಮೈದಾನದ ಹೊರಗೆ ತುಂಬಾ ತಮಾಷೆಯಾಗಿರುತ್ತಾರೆ. ಮೈದಾನದಲ್ಲಿಯೂ ಖುಷಿಯಿಂದ ಇರುತ್ತಾರೆ. ಅವರ ನಾಯಕತ್ವವು ಉತ್ತಮವಾಗಿದೆ ಎಂದು ಕೊಂಡಾಡಿದ್ದಾರೆ.

ಇನ್ನು, ಕೆಎಲ್ ರಾಹುಲ್ ಬಗ್ಗೆ ಮಾತನಾಡಿ.. ಪಂದ್ಯದ ಸಮಯದಲ್ಲಿ ಕೆ.ಎಲ್.ರಾಹುಲ್ ಅವರಿಂದ ನನಗೆ ತುಂಬಾ ಬೆಂಬಲ ಸಿಕ್ಕಿದೆ. ನಾನು ಅನಿಕೇತ್ ವರ್ಮಾರ ಕ್ಯಾಚ್ ಕೈಬಿಟ್ಟು ತಪ್ಪು ಮಾಡಿದೆ. ಇದರಿಂದ ಬೇಸರಗೊಂಡಿದ್ದೆ. ಆಗ ರಾಹುಲ್ ನನ್ನ ಬೆಂಬಲಕ್ಕೆ ನಿಂತರು. ನನಗೆ ಸಾಂತ್ವನ ಹೇಳಿದರು. ‘ಪರವಾಗಿಲ್ಲ, ಚಿಂತಿಸಬೇಡಿ’ ಎಂದರು.

ಇದನ್ನೂ ಓದಿ: 6, 6, 6, 6, 6; ಹೊಡಿಬಡಿ ಬ್ಯಾಟಿಂಗ್​, ರಾಣ ವೇಗದ ಅರ್ಧಶತಕ.. ಚೆನ್ನೈಗೆ ಬಿಗ್ ಟಾರ್ಗೆಟ್ ಕೊಟ್ಟ RR

ಅಲ್ಲದೇ ಬ್ಯಾಟಿಂಗ್ ವೇಳೆಯೂ ಸಹಾಯ ಮಾಡಿದರು. ಪಿಚ್​​ನ ಕಂಡೀಷನ್​​ ಮೊದಲೇ ತಿಳಿದುಕೊಂಡಿದ್ದ ಅವರು, ಪಿಚ್ ಹೇಗೆ ವರ್ತಿಸುತ್ತದೆ ಎಂದು ತಿಳಿಸಿದರು. ಅದರ ಆಧಾರದ ಮೇಲೆ ನನಗೆ ಆಡಲು ಹೇಳಿದರು. ಕೆಎಲ್ ರಾಹುಲ್​ರಿಂದ ನನಗೆ ತುಂಬಾ ಬೆಂಬಲ ಸಿಗ್ತಿದೆ. ಅವರು ನನ್ನ ಸಹೋದರನಂತೆ ಎಂದಿದ್ದಾರೆ.

ಮೊದಲ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಅನುಪಸ್ಥಿತಿಯಲ್ಲಿ ಪೊರೆಲ್ ವಿಕೆಟ್ ಕೀಪಿಂಗ್ ಮಾಡಿದ್ದರು. ನಿನ್ನೆಯ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಇದ್ದರೂ ಪೊರೆಲ್​ ಅವರನ್ನು ಪ್ಲೇಯಿಂಗ್ 11 ರಿಂದ ಹೊರಗೆ ಇಡಲಿಲ್ಲ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪೊರೆಲ್ 18 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿಯೊಂದಿಗೆ 34 ರನ್ ಗಳಿಸಿದರು.

ಇದನ್ನೂ ಓದಿ: ಚೆನ್ನೈಗೆ ಮಾಸ್ಟರ್​ ಸ್ಟ್ರೋಕ್​​ ಕೊಟ್ಟ RCB ಮಾಜಿ ಪ್ಲೇಯರ್ ಹಸರಂಗ​; ಮತ್ತೊಂದು ಮುಖಭಂಗ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment