40 ಬಾಲ್‌ಗೆ 100 ಸಂಭ್ರಮ.. ಅಭಿಷೇಕ್ ಶರ್ಮಾ ಚೀಟಿಯಲ್ಲಿ ಬರೆದಿದ್ದೇನು? ಏನಿದರ ವಿಶೇಷ ಗೊತ್ತಾ?

author-image
admin
Updated On
40 ಬಾಲ್‌ಗೆ 100 ಸಂಭ್ರಮ.. ಅಭಿಷೇಕ್ ಶರ್ಮಾ ಚೀಟಿಯಲ್ಲಿ ಬರೆದಿದ್ದೇನು? ಏನಿದರ ವಿಶೇಷ ಗೊತ್ತಾ?
Advertisment
  • 44 ಬೌಂಡರಿ.. 30 ಸಿಕ್ಸರ್​.. ಮೈದಾನದಲ್ಲಿ ಬರೀ ರನ್‌ಗಳ ಅಭಿಷೇಕ
  • ಪಂಜಾಬ್ 245/6, ಸನ್ ರೈಸರ್ಸ್ 18.3 ಓವರ್​ಗಳಲ್ಲಿ 247/2
  • ಅಭಿಷೇಕ್ ಶತಕ ಸಿಡಿಸಿದ ಪವರ್​ಗೆ ಪಂಜಾಬ್ ಕಿಂಗ್ಸ್ ಸ್ಟನ್!

ಏನ್ ಬ್ಯಾಟಿಂಗ್ ಗುರು.. ಬೌಂಡರಿ, ಸಿಕ್ಸರ್​​​ಗಳ ಬೋರ್ಗೆರೆತ. ಬೌಲರ್​ಗಳ ಮಾರಣಹೋಮ. ಸಿಕ್ಸರ್ ಬೌಂಡರಿಗಳ ರನ್​ ಅಭಿಷೇಕ್​ದಲ್ಲಿ ಬರೋಬ್ಬರಿ ಸಿಡಿದಿದ್ದು 44 ಬೌಂಡರಿ. 30 ಸಿಕ್ಸರ್​ಗಳು. ಈ ಸ್ಫೋಟಕ ಬ್ಯಾಟಿಂಗ್​ಗೆ ಸನ್ ರೈಸರ್ಸ್​, 9 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತ್ತು.

ನಿನ್ನೆ ಹೈದರಾಬಾದ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಂಜಾಬ್​ಗೆ ಒಳ್ಳೆ ಆರಂಭವೇ ಸಿಕ್ಕಿತು. ಆರಂಭಿಕರಾದ ಪ್ರಭು ಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ ಮೊದಲ ವಿಕೆಟ್‌ಗೆ ಕೇವಲ 3 ಓವರ್​ಗಳಲ್ಲಿ 66 ರನ್‌ಗಳ ಕೊಳ್ಳೆ ಹೊಡೆದರು.

publive-image

ಪ್ರಿಯಾಂಶ್​ ಆರ್ಯ 13 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್​ಗಳ ಸಹಿತ 36 ರನ್ ಗಳಿಸಿ ಔಟಾದರೆ, ಪ್ರಭಸಿಮ್ರನ್ ಸಿಂಗ್ 23 ಎಸೆತಗಳಲ್ಲಿ ಬೌಂಡರಿ, 1 ಸಿಕ್ಸರ್​ ಸಹಿತ 42 ರನ್ ಗಳಿಸಿ ಔಟಾದರು. ನಂತರ ಬಂದ ಶ್ರೇಯಸ್ ಅಯ್ಯರ್, ಸನ್ ರೈಸರ್ಸ್ ಬೌಲರ್​ಗಳನ್ನ ಚೆಂಡಾಡಿದರು. ಅಷ್ಟ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸಿದ ಶ್ರೇಯಸ್ ಅಯ್ಯರ್, ನೆಹಾಲ್ ವಡೇರಾ ಜೊತೆಗೂಡಿ 73 ರನ್​ಗಳ ಜೊತೆಯಾಟವಾಡಿದ್ರು. ಆದ್ರೆ, 22 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 27 ಸಿಡಿಸಿ ನೆಹಾಲ್ ಔಟಾದರು.

publive-image

ಇನ್ನು, ಕೊನೆಯಲ್ಲಿ ಅಬ್ಬರಿಸಿದ ಮಾರ್ಕಸ್ ಸ್ಟೋಯ್ನಿಸ್ ಕೇವಲ 11 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್​ ಸಹಿತ ಅಜೇಯ 34 ರನ್​ಗಳಿಸಿ ತಂಡದ ಮೊತ್ತವನ್ನ 245ಕ್ಕೆ ಕೊಂಡೊಯ್ದರು.

246 ರನ್​​ಗಳ ಟಾರ್ಗೆಟ್ ಬೆನ್ನಟ್ಟಿದ್ದ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಅಕ್ಷರಶಃ ಬೌಲರ್​ಗಳ ಮಾರಣಹೋಮ ನಡೆಸಿದ ಈ ಜೋಡಿ, 6 ಓವರ್​ಗಳ ಮುಕ್ತಾಯಕ್ಕೆ ಬರೋಬ್ಬರಿ 83 ರನ್ ಕಲೆಹಾಕಿತು.

19 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದ ಅಭಿಷೇಕ್, ನಂತರ ಮತ್ತಷ್ಟು ಅಬ್ಬರಿಸಿದ್ರು. ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದ ಟ್ರಾವಿಸ್ ಹೆಡ್, 37 ಎಸೆತಗಳಲ್ಲಿ 66 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.

publive-image

40 ಎಸೆತಗಳಲ್ಲೇ ಶತಕ ಪೂರ್ಣಗೊಳಿಸಿದ ಅಭಿಷೇಕ್ ಶರ್ಮಾ, ಇದು ಆರೆಂಜ್ ಆರ್ಮಿಗಾಗಿ.. (This one is for the Orange Army) ಎಂದು ಬರೆದಿದ್ದ ಪತ್ರ ತೋರಿಸಿ, ಸಂಭ್ರಮಿಸಿದ ಪರಿ ವಿಶೇಷವಾಗಿತ್ತು. ಅಭಿಷೇಕ್ ಶರ್ಮಾ ಅವರು ಈ ಚೀಟಿಯನ್ನು ಕಳೆದ 6 ಪಂದ್ಯಗಳಿಂದ ತನ್ನ ಜೇಬಿನಲ್ಲೇ ಇಟ್ಟುಕೊಂಡಿದ್ದರಂತೆ. ಸತತ ಬ್ಯಾಟಿಂಗ್ ವೈಫಲ್ಯದಿಂದ ಕಂಗೆಟ್ಟಿದ್ದ ಅಭಿಷೇಕ್ ಶರ್ಮಾ ನಿನ್ನೆ ಜೇಬಿನಲ್ಲಿದ್ದ ಪತ್ರ ತೋರಿಸಿ ಸಂಭ್ರಮಿಸಿದ್ದಾರೆ.


">April 12, 2025

ಇದನ್ನೂ ಓದಿ: ಅಭಿಷೇಕ್ ಶರ್ಮಾ ಬೌಂಡರಿ, ಸಿಕ್ಸರ್ ಸುರಿಮಳೆ.. RCB ಆಟಗಾರನ ರೆಕಾರ್ಡ್‌ ಇದಕ್ಕಿಂತಲೂ ಗ್ರೇಟ್‌! 

55 ಎಸೆತಗಳಲ್ಲಿ 14 ಬೌಂಡರಿ, 10 ಸಿಕ್ಸರ್​ ಒಳಗೊಂಡ 141 ರನ್ ಚಚ್ಚಿದ ಅಭಿಷೇಕ್ ಶರ್ಮಾ, ಆರ್ಶ್​ದೀಪ್ ಸಿಂಗ್ ಓವರ್​ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.
ಕೊನೆ ಹಂತದಲ್ಲಿ ಕ್ಲಾಸೆನ್​ 21 ರನ್, ಇಶಾನ್ 9 ರನ್ ಗಳಿಸುವುದರೊಂದಿಗೆ ಗೆಲುವಿನ ದಡ ಸೇರಿಸಿದರು. ಆ ಮೂಲಕ ಸತತ ಸೋಲುಗಳಿಂದ ಬಳಲಿದ್ದ ಸನ್ ರೈಸರ್ಸ್, ಗೆಲುವಿನ ಟ್ರ್ಯಾಕ್​​ಗೆ ಮರಳಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment