/newsfirstlive-kannada/media/post_attachments/wp-content/uploads/2025/04/Abhishek_Sharma_2.jpg)
ತವರಿನ ಅಂಗಳದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದ್ರಾಬಾದ್ ಟೀಮ್ ಅತ್ಯಂತ ದೊಡ್ಡ ಗೆಲುವು ಸಾಧಿಸಿದೆ. ಬರೋಬ್ಬರಿ 246 ರನ್ಗಳನ್ನು ಟಾರ್ಗೆಟ್ ಮಾಡಿ ಜಯಭೇರಿ ಬಾರಿಸಿದೆ.
ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ತೆಗೆದುಕೊಂಡರು. ಪಂಜಾಬ್ ಪರ ಓಪನರ್ಸ್ ಆದ ಪ್ರಿಯಾಂಶ್ ಆರ್ಯ ಕೇವಲ 13 ಎಸೆತದಲ್ಲಿ 4 ಸಿಕ್ಸರ್ ಇಂದ 36 ರನ್ ಹೊಡೆದು ಔಟ್ ಆದ್ರೆ, ಪ್ರಭಸಿಮ್ರನ್ ಸಿಂಗ್ ಕೇವಲ 23 ಬಾಲ್ಗಳಲ್ಲಿ 7 ಬೌಂಡರಿಗಳಿಂದ 42 ರನ್ಗೆ ಕ್ಯಾಚ್ ನೀಡಿ ಔಟ್ ಆದರು.
ಬ್ಯಾಟಿಂಗ್ನಲ್ಲಿ ಘರ್ಜನೆ ಮಾಡಿದ ಶ್ರೇಯಸ್ ಕೇವಲ 23 ಎಸೆತಗಳಲ್ಲಿ 2 ಫೋರ್, 5 ಅಮೋಘ ಸಿಕ್ಸರ್ಗಳಿಂದ ಅರ್ಧಶತಕ ಪೂರೈಸಿದರು. ನೆಹಾಲ್ ವಧೇರಾ 27 ರನ್ಗೆ ಔಟ್ ಆದರು. ಕೊನೆಯಲ್ಲಿ ಘರ್ಜಿಸಿದ ಮಾರ್ಕಸ್ ಸ್ಟೊನಿಸ್ ಕೇವಲ 11 ಬಾಲ್ಗಳಲ್ಲಿ 34 ರನ್ ಚಚ್ಚಿದರು. ಕೊನೆ ಓವರ್ನಲ್ಲಿ ಮೊಹಮ್ಮದ್ ಶಮಿಗೆ ಮಾರ್ಕಸ್ ಸ್ಟೊನಿಸ್ ಸತತ 4 ಸಿಕ್ಸರ್ಗಳನ್ನು ಬಾರಿಸಿದರು. ಇದರಿಂದ ಪಂಜಾಬ್ ಕಿಂಗ್ಸ್ 246 ರನ್ಗಳ ದೊಡ್ಡ ಮೊತ್ತದ ಟಾರ್ಗೆಟ್ ಅನ್ನು ಸೆಟ್ ಮಾಡಿತ್ತು.
ಇದನ್ನೂ ಓದಿ:6, 6, 6, 6, 6, 6; ಅಭಿಷೇಕ್ ಶರ್ಮಾ ಸಿಡಿಲಬ್ಬರ.. ಸೆಂಚುರಿ ಸಿಡಿಸಿ ಪಂಜಾಬ್ಗೆ ಚಳಿ ಬಿಡಿಸಿದ ಯಂಗ್ ಬ್ಯಾಟರ್
ಈ ಗುರಿ ಬೆನ್ನು ಹತ್ತಿದ್ದ ಹೈದ್ರಾಬಾದ್ ಆರಂಭದಲ್ಲೇ ಬಿಗ್ ಓಪನಿಂಗ್ ಪಡೆದುಕೊಂಡಿತು. ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಅವರ ಜೊತೆಯಾಟ 171 ರನ್ ವರೆಗೆ ಇತ್ತು. ಈ ವೇಳೆ ಹೆಡ್ 66 ರನ್ಗೆ ಮ್ಯಾಕ್ಸ್ವೆಲ್ಗೆ ಕ್ಯಾಚ್ ಕೊಟ್ಟರು. ಆದರೆ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದ ಅಭಿಷೇಕ್ ಶರ್ಮಾ 11 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ಗಳಿಂದ ಶತಕ ಸಿಡಿಸಿದರು. ಒಟ್ಟು 55 ಎಸೆತ ಎದುರಿಸಿ 14 ಬೌಂಡರಿ, 10 ಆಕಾಶದೆತ್ತರದ ಸಿಕ್ಸರ್ಗಳಿಂದ 141 ರನ್ಗಳಿಸಿ ಆಡುವಾಗ ಅರ್ಷದೀಪ್ ಸಿಂಗ್ ಬೌಲಿಂಗ್ನಲ್ಲಿ ಔಟ್ ಆದರು.
ಹೆನ್ರಿಚ್ ಕ್ಲಾಸಿನ್ 21 ಹಾಗೂ ಇಶನ್ ಕಿಶನ್ 9 ರನ್ಗಳಿಂದ ಹೈದ್ರಾಬಾದ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ 2ನೇ ಅತ್ಯಂತ ದೊಡ್ಡ ಚೇಸಿಂಗ್ ಆಗಿದೆ. ಈವರೆಗೂ 246 ರನ್ಗಳ ಟಾರ್ಗೆಟ್ ಮಾಡಿದ ಟೀಮ್ ಎಸ್ಆರ್ಹೆಚ್ ಆಗಿದೆ. ಇದಕ್ಕೂ ಮೊದಲು ಅಂದರೆ 2024ರ ಐಪಿಎಲ್ನಲ್ಲಿ ಕೆಕೆಆರ್ ವಿರುದ್ಧ ಪಂಜಾಬ್ ತಂಡ 262 ರನ್ಗಳನ್ನು ಚೇಸ್ ಮಾಡಿ ಗೆಲುವು ಸಾಧಿಸಿತ್ತು. ಅದರಂತೆ ಇದು ಐಪಿಎಲ್ನಲ್ಲಿ 2ನೇ ದೊಡ್ಡ ಗೆಲುವು ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ