/newsfirstlive-kannada/media/post_attachments/wp-content/uploads/2025/05/ABHISHEK_SHARMA_NEW.jpg)
ಲಕ್ನೋ ಸೂಪರ್ ಜೈಂಟ್ಸ್​ ಹಾಗೂ ಸನ್​ರೈಸರ್ಸ್​ ಹೈದ್ರಾಬಾದ್​ ನಡುವಿನ ಪಂದ್ಯ ಅಭಿಷೇಕ್ ಶರ್ಮಾ ಮತ್ತು ಸ್ಪಿನ್ನರ್ ದಿಗ್ವೇಶ್ ರಾಥಿ ನಡುವಿನ ಗಲಾಟೆಗೆ ಸಾಕ್ಷಿ ಆದಂತೆ ಆಯಿತು. ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡುತ್ತಿದ್ದ ಅಭಿಷೇಕ್ ಶರ್ಮಾ ಅವರ ವಿಕೆಟ್​ ಪಡೆಯುತ್ತಿದ್ದಂತೆ ದಿಗ್ವೇಶ್ ರಾಥಿ ಅವರ ನೋಟ್​ ಬುಕ್​ ಸೆಲೆಬ್ರೆಷನ್​ ತೀವ್ರ ವಾಗ್ವಾದ ಉಂಟು ಮಾಡಿತು.
ಪಂದ್ಯದಲ್ಲಿ ಟಾಸ್ ಗೆದ್ದ ಹೈದ್ರಾಬಾದ್ ನಾಯಕ ಪ್ಯಾಟ್ ಕಮಿನ್ಸ್​ ಮೊದಲ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಬ್ಯಾಟಿಂಗ್​ಗೆ ಆಗಮಿಸಿದ ಲಕ್ನೋ ತಂಡ ಭರ್ಜರಿ ಓಪನಿಂಗ್ ಪಡೆಯಿತು. ಓಪನರ್ಸ್​ ಮಾರ್ಷ್​ ಹಾಗೂ ಮಾರ್ಕರಮ್ ಅವರ ಹಾಫ್​ಸೆಂಚುರಿಯಿಂದ ಲಕ್ನೋ ತಂಡ 7 ವಿಕೆಟ್​ಗೆ 206 ರನ್​ಗಳ ಟಾರ್ಗೆಟ್ ನೀಡಿತ್ತು.
ಈ ಗುರಿ ಹಿಂದೆ ಬಿದ್ದಿದ್ದ ಹೈದ್ರಾಬಾದ್​ ಆರಂಭದಲ್ಲೇ ಒಂದು ವಿಕೆಟ್​ ಕಳೆದುಕೊಂಡರೂ ಅಭಿಷೇಕ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. ಕೇವಲ 20 ಬಾಲ್​ಗಳಲ್ಲಿ 4 ಫೋರ್ ಹಾಗೂ 6 ಸಿಕ್ಸರ್​ ಸಮೇತ 59 ರನ್​ಗಳನ್ನು ಅಭಿಷೇಕ್ ಶರ್ಮಾ ಬಾರಿಸಿದ್ದರು. ಇವರ ವಿಕೆಟ್​ಗಾಗಿ ಲಕ್ನೋ ಬೌಲರ್ಸ್​ ಕಾಯುತ್ತಿದ್ದರು. ಆದರೆ 59 ರನ್​ಗಳಿಂದ ಬ್ಯಾಟಿಂಗ್ ಮುಂದುವರೆಸಿದ್ದ ಅಭಿಷೇಕ್ ಶರ್ಮಾ ದಿಗ್ವೇಶ್ ರಾಥಿ ಬೌಲಿಂಗ್​ನಲ್ಲಿ ಕ್ಯಾಚ್ ಕೊಟ್ಟರು.
ಇದನ್ನೂ ಓದಿ: ಸ್ಫೋಟಕ ಬ್ಯಾಟರ್​ ಅಭಿಷೇಕ್ ಶರ್ಮಾ ಜೊತೆ ರಾಥಿ ಗಲಾಟೆ.. ಔಟ್ ಆಗ್ತಿದ್ದಂತೆ ಹೀಗೆ ಮಾಡಬಹುದಾ?
/newsfirstlive-kannada/media/post_attachments/wp-content/uploads/2025/05/ABHISHEK_SHARMA_NEW_1.jpg)
ತಂಡದ 8ನೇ ಓವರ್​ ಮಾಡುತ್ತಿದ್ದ ದಿಗ್ವೇಶ್ ರಾಥಿಯ ಸ್ಪಿನ್​ ಬೌಲಿಂಗ್​ನ 3ನೇ ಎಸೆತದಲ್ಲಿ ಅಭಿಷೇಕ್ ಶರ್ಮಾ ಬಿಗ್​ ಶಾಟ್​ಗೆ ಮುಂದಾಗಿ ಕ್ಯಾಚ್ ಔಟ್ ಆದರು. ಈ ವೇಳೆ ಅಭಿಷೇಕ್ ಶರ್ಮಾ ಕಡೆ ಕೈ ತೋರಿಸಿ ಆಕ್ರೋಶವಾಗಿ ದಿಗ್ವೇಶ್ ರಾಥಿ ಸಂಭ್ರಮಿಸಿದರು. ಇದರಿಂದ ಕೋಪಗೊಂಡ ಅಭಿಷೇಕ್ ಶರ್ಮಾ ಪೆವಿಲಿಯನ್​ಗೆ ಹೋಗುವುದನ್ನು ಬಿಟ್ಟು ಜಗಳಕ್ಕೆ ನಿಂತರು. ಇಬ್ಬರ ನಡುವೆ ಬಿರುಸಿನ ಮಾತಿನ ಚಕಮಕಿ ನಡೆಯಿತು.
ತಕ್ಷಣ ಓಡೋಡಿ ಬಂದ ಅಂಪೈರ್​ಗಳು ಹಾಗೂ ಆವೇಶ್​ ಖಾನ್ ಸೇರಿದಂತೆ ಸಹ ಆಟಗಾರರು ಇಬ್ಬರ ಜಗಳ ಬಿಡಿಸಿದರು. ಪೆವಿಲಿಯನ್​ ಕಡೆಗೆ ಅಭಿಷೇಕ್ ಶರ್ಮಾ ಬರುವಾಗ ನಿನ್ನ ಕೂದಲು ಹಿಡಿದು ಹೊಡೆಯುತ್ತೇನೆ (ಬಾಲ್ ಪಕಡಿಕೇ ಮಾರುಂಗಾ) ಎನ್ನುವಂತೆ ಸನ್ನೆ ಮಾಡಿದ್ದಾರೆ. ಇದು ವಿಡಿಯೋದಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.
Abhishek Sharma : Rohit Sharma is my Idol🗿🥵🔥
pic.twitter.com/mSUafnFpqI— V. (@BelgianWaffle) May 19, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us