/newsfirstlive-kannada/media/post_attachments/wp-content/uploads/2025/05/ABHISHEK_SHARMA-3.jpg)
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ತವರು ಮೈದಾನದಲ್ಲಿ ಮುಗ್ಗರಿಸಿದ ಎಲ್‌ಎಸ್‌ಜಿ, ಪ್ಲೇಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಪಂದ್ಯದ ವೇಳೆ ಅಭಿಷೇಕ್ ಶರ್ಮಾ ಹಾಗೂ ಸ್ಪಿನ್ನರ್ ದಿಗ್ವೇಶ್ ರಾಥಿ ನಡುವೆ ನಡೆದ ಗಲಾಟೆ ಸದ್ಯಕ್ಕೆ ಐಪಿಎಲ್​ನಲ್ಲಿ ಹಾಟ್ ಟಾಪಿಕ್ ಆಗಿದೆ.
ಲಕ್ನೋದ ಏಕನಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 206 ರನ್​ಗಳ ಟಾರ್ಗೆಟ್ ಪಡೆದಿದ್ದ ಹೈದ್ರಾಬಾದ್ ತಂಡ ಆರಂಭದಲ್ಲೇ ಕುಸಿತ ಕಂಡರೂ ಸ್ಫೋಟಕ ಬ್ಯಾಟರ್​ ಅಭಿಷೇಕ್ ಶರ್ಮಾರ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆದಿತ್ತು. ಸಂಕಷ್ಟದಲ್ಲಿದ್ದ ತಂಡವನ್ನು ಮೇಲೆತ್ತಿದ್ದ ಅಭಿಷೇಕ್ ಶರ್ಮಾ ಕೇವಲ 20 ಬಾಲ್​ಗಳಲ್ಲಿ 4 ಫೋರ್ ಹಾಗೂ 6 ಸಿಕ್ಸರ್​ ಸಮೇತ 59 ರನ್​ಗಳನ್ನು ಬಾರಿಸಿದ್ದರು.
/newsfirstlive-kannada/media/post_attachments/wp-content/uploads/2025/05/ABHISHEK_SHARMA_1-2.jpg)
ಈ ವೇಳೆ ಅಭಿಷೇಕ್ ಶರ್ಮಾ ಅಬ್ಬರದ ಬ್ಯಾಟಿಂಗ್ ಮಾಡುವಾಗ ಲಕ್ನೋ ಪರ ಸ್ಪಿನ್ನರ್ ದಿಗ್ವೇಶ್ ರಾಥಿ ತಂಡದ 8ನೇ ಓವರ್​ ಮಾಡುತ್ತಿದ್ದರು. ದಿಗ್ವೇಶ್ ರಾಥಿಯ ಸ್ಪಿನ್​ ಬೌಲಿಂಗ್​ನ 3ನೇ ಎಸೆತದಲ್ಲಿ ಅಭಿಷೇಕ್ ಶರ್ಮಾ ಕ್ಯಾಚ್ ಔಟ್ ಆದರು. ಈ ವೇಳೆ ಅಭಿಷೇಕ್ ಶರ್ಮಾ ಕಡೆ ಕೈ ತೋರಿಸಿ ಕೋಪದಲ್ಲೇ ದಿಗ್ವೇಶ್ ರಾಥಿ ಸೆಲೆಬ್ರೆಷನ್ ಮಾಡಿದರು. ಇದಕ್ಕೆ ತಕ್ಷಣ ರಿಯಾಕ್ಟ್ ಆದ ಅಭಿಷೇಕ್ ಶರ್ಮಾ ಮಾತಿನ ಸಮರಕ್ಕೆ ಇಳಿದರು.
ಇಬ್ಬರು ಆಟಗಾರರು ಕೈಕೈ ಮಿಲಾಯಿಸುವ, ನೂಕಾಡುವ ಮಟ್ಟಕ್ಕೆ ಹೋಗಿದ್ದರು. ಆದರೆ ಇದಕ್ಕೆ ಅಂಪೈರ್​ಗಳು ಹಾಗೂ ಸಹ ಆಟಗಾರರು ಅವಕಾಶ ಮಾಡಿಕೊಡಲಿಲ್ಲ. ಇಬ್ಬರನ್ನೂ ದೂರ ಹೋಗುವಂತೆ ಸೂಚಿಸಿ ಇಬ್ಬರ ಕೋಪವನ್ನು ಮೈದಾನದಲ್ಲೇ ಶಮನ ಮಾಡಿದರು. ಸದ್ಯ ಅಭಿಷೇಕ್ ಹಾಗೂ ದಿಗ್ವೇಶ್ ರಾಥಿ ನಡುವೆ ಜಗಳದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Lit Abhishek Sharma 🗿🥵🔥 pic.twitter.com/zyBhiQxByJ
— Antara (@AntaraonX)
Lit Abhishek Sharma 🗿🥵🔥 pic.twitter.com/zyBhiQxByJ
— Naga durga (@AntaraonX) May 19, 2025
">May 19, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us