ಗುರುವನ್ನೇ ಮೀರಿಸೋ ಫಿಯರ್​​ಲೆಸ್ ಬ್ಯಾಟಿಂಗ್.. ಯುವಿ ಗರಡಿಯ ಅಭಿಷೇಕ್​ಗೆ ಭಯವೇ ಇಲ್ವಾ?

author-image
Bheemappa
Updated On
ಗುರುವನ್ನೇ ಮೀರಿಸೋ ಫಿಯರ್​​ಲೆಸ್ ಬ್ಯಾಟಿಂಗ್.. ಯುವಿ ಗರಡಿಯ ಅಭಿಷೇಕ್​ಗೆ ಭಯವೇ ಇಲ್ವಾ?
Advertisment
  • ಕ್ರಿಕೆಟ್​ ಕಾಶಿಯಲ್ಲಿ ಆರಂಭದಿಂದ ಅಂತ್ಯದವರೆಗೆ ನಿರ್ಭೀತಿ​ ಆಟ
  • ಕ್ರೀಸ್​ಗೆ ಅಭಿಷೇಕ್ ಬಂದರೆ ಸಿಂಗಲ್ ರನ್​ ತೆಗೆಯುವುದೇ ಇಲ್ಲ!
  • ಕ್ಯಾಚ್ ಮಿಸ್​ ಇಂದ ಲೈಫ್ ಸಿಕ್ಕಿತೆಂದು ಸ್ಲೋ ಬ್ಯಾಟಿಂಗ್ ಮಾಡಲ್ಲ

ಇಂಡೋ- ಇಂಗ್ಲೆಂಡ್​ ಟಿ20 ಸರಣಿಯಲ್ಲಿ ಟೀಮ್​ ಇಂಡಿಯಾ ಪವರ್​​ಫುಲ್​ ಸ್ಟಾರ್ಟ್​ ಮಾಡಿದೆ. ಈಡನ್​ ಗಾರ್ಡನ್​ನಲ್ಲಿ ಆಂಗ್ಲರನ್ನ ಬಗ್ಗು ಬಡಿದು ಗೆಲುವಿನ ಶುಭಾರಂಭ ಮಾಡಿದೆ. ಬೌಂಡರಿ-ಸಿಕ್ಸರ್​ಗಳ ಸುರಿಮಳೆಯ ನಿರೀಕ್ಷೆ ಇಟ್ಟುಕೊಂಡಿದ್ದ ಫ್ಯಾನ್ಸ್​ಗೆ​, ಫಸ್ಟ್​ ಹಾಫ್​ನಲ್ಲಿ ಅಂದುಕೊಂಡ ಎಂಟರ್​​ಟೈನ್​ಮೆಂಟ್​ ಸಿಗ್ಲಿಲ್ಲ. ಆದ್ರೆ, ಸೆಕೆಂಡ್​ ಹಾಫ್​ನಲ್ಲಿ ಪೈಸಾ ವಸೂಲ್​ ಎಂಟರ್​​ಟೈನ್​ಮೆಂಟ್​ ಸಿಕ್ಕಿತು. ಯುವ ಆಟಗಾರ ಅಭಿಷೇಕ್​ ಶರ್ಮಾ ಅಬ್ಬರಿಸ್ತಾ ಇದ್ರೆ, ಎಲ್ಲರಿಗೂ ಸಿಕ್ಸರ್​ ಕಿಂಗ್​ ಯುವರಾಜ್​ ನೆನಪಾದರು.

ಈಡನ್​ ಗಾರ್ಡನ್ಸ್​​ನಲ್ಲಿ ಬೌಂಡರಿ-ಸಿಕ್ಸರ್​​ಗಳ ಸುರಿಮಳೆಯೇ ಸುರಿಯಿತು. 24 ವರ್ಷದ ಯುವ ಆಟಗಾರ ಫಿಯರ್​​ಲೆಸ್​ ಆಟದಿಂದ ಆರ್ಭಟಿಸುತ್ತಿದ್ರೆ ವಿಶ್ವ ಕ್ರಿಕೆಟ್​ ಕಂಡ ಶ್ರೇಷ್ಠ ಬೌಲರ್​ಗಳಾದ ಜೋಫ್ರಾ ಆರ್ಚರ್​​, ಮಾರ್ಕ್​ವುಡ್​ ಬೆಸ್ತು ಬಿದ್ರು. ಭಾರತದ ಕ್ರಿಕೆಟ್​ ಕಾಶಿಯಲ್ಲಿ ಪಂಜಾಬ್​ ಪುತ್ತರ್​ ಅಭಿಷೇಕ್​​ ಶರ್ಮಾ ಆರ್ಭಟ ಜೋರಾಗಿತ್ತು.

publive-image

ತನ್ನ ನಡೆಯಿಂದಲೇ ಗಮನ ಸೆಳೆದ ಅಭಿಷೇಕ್​.!

ಆರಂಭದಿಂದ ಅಂತ್ಯದವರೆಗೆ ಅಭಿಷೇಕ್​ ನಿರ್ಭೀತ ಆಟವಾಡಿದರು. ಫಿಯರ್​ಲೆಸ್​ ಆ್ಯಟಿಟ್ಯೂಡ್​​ ಹೇಗಿತ್ತು ಅನ್ನೋದಕ್ಕೆ ಪಂದ್ಯದ ಒಂದು ಘಟನೆಯೇ ಸಾಕ್ಷಿ. ಇಂಡಿಯಾ ಇನ್ನಿಂಗ್ಸ್​ನ 7.3ನೇ ಓವರ್​ನಲ್ಲಿ ಅಭಿಷೇಕ್​​ ಮಿಸ್​ ಹಿಟ್​ ಮಾಡಿದರು. ಆದ್ರೆ, ಅದೃಷ್ಟವಶಾತ್​ ಕ್ಯಾಚ್​ ಡ್ರಾಪ್​ ಆಯ್ತು. ಆಗ ಅದೃಷ್ಟದ ಅವಕಾಶ ಸಿಕ್ಕಿತು, ಎಚ್ಚರಿಕೆಯ ಆಟದ ಮೊರೆ ಹೋಗ್ತಾರೆ ಅನ್ನೋದು ಆ ಕ್ಷಣಕ್ಕೆ ಎಲ್ಲರ ಗೆಸ್​ ಆಗಿತ್ತು. ಆದ್ರೆ, ಅಭಿಷೇಕ್ ಮರು ಎಸೆತದಲ್ಲೇ ಬೌಂಡರಿ ಚಚ್ಚಿದ್ರು. ಇಷ್ಟೇ ಅಲ್ಲ, ಆ​ ನಂತರದ 2 ಎಸೆತಗಳನ್ನೂ ಸಿಕ್ಸರ್​ಗಟ್ಟಿದ್ರು.

20 ಎಸೆತಕ್ಕೆ ಅರ್ಧಶತಕ.. ಗುರುವಿಗೆ ತಕ್ಕ ಶಿಷ್ಯ​.!

ಬೌಂಡರಿ, ಸಿಕ್ಸರ್​ಗಳಲ್ಲೇ ರನ್​ಡೀಲ್​ ಮಾಡಿದ ಅಭಿಷೇಕ್​ ಶರ್ಮಾ, ಜಸ್ಟ್​​ 20 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದ್ರು. ಈ ಮೂಲಕ ಗುರುವಿಗೆ ತಕ್ಕ ಶಿಷ್ಯ ಅನ್ನೋದನ್ನ ಬ್ಯಾಟಿಂಗ್​ನಿಂದಲೇ ನಿರೂಪಿಸಿದ್ರು. ಬ್ಯಾಟಿಂಗ್​​​ ವೇಳೆ ಅಭಿಷೇಕ್​ ಶರ್ಮಾರಲ್ಲಿದ್ದ ಆ್ಯಟಿಟ್ಯೂಡ್​, ಅಗ್ರೆಸ್ಸಿವ್​ನೆಸ್​, ಶಾಟ್​ ಸೆಲೆಕ್ಷನ್​ ಪ್ರತಿಯೊಂದೂ ಕೂಡ ಗುರು ಯುವರಾಜ್​ ಸಿಂಗ್​ರನ್ನೇ ನೆನಪಿಸಿದವು.

ಇದೊಂದು ಇನ್ನಿಂಗ್ಸ್​ ಮಾತ್ರವಲ್ಲ, ಈ ಹಿಂದೆ ಜಿಂಬಾಬ್ವೆ ಪ್ರವಾಸದಲ್ಲೂ ಇಂತದ್ದೇ ಫಿಯರ್​​ಲೆಸ್​ ಆಟದಿಂದ ಗಮನ ಸೆಳೆದಿದ್ದರು. ಪ್ರವಾಸದ ಮೊದಲ ಪಂದ್ಯದಲ್ಲಿ ಅಭಿಷೇಕ್ ಡಕೌಟ್ ಆಗಿದ್ದರು. ಆದ್ರೆ, ಆ ಸರಣಿಯ 2ನೇ ಪಂದ್ಯದಲ್ಲಿ ಮೊದಲ ಎಸೆತವನ್ನೇ ಸಿಕ್ಸರ್ ಸಿಡಿಸಿದರು. 33 ಎಸೆತಕ್ಕೆ ಹಾಫ್​ ಸೆಂಚುರಿ ಚಚ್ಚಿದ್ದ ಅಭಿಷೇಕ್,​ ನಂತರದ 13 ಎಸೆತಗಳಲ್ಲೇ ಶತಕ ಪೂರೈಸಿ ಸಂಭ್ರಮಿಸಿದರು. ಅದೂ ಕೂಡ, ಹ್ಯಾಟ್ರಿಕ್​​ ಸಿಕ್ಸರ್​ ಸಿಡಿಸಿ ಸೆಂಚುರಿ ಪೂರೈಸಿದರು. ಹೀಗೆ ಆಡೋದಕ್ಕೆ ಎಂಟೆದೆ ಗುಂಡಿಗೆನೇ ಬೇಕು ಬಿಡಿ. ಅಂದ್ಹಾಗೆ, ಅಭಿಷೇಕ್​ಗೆ ಈ ಫಿಯರ್​​ಲೆಸ್​ ಆ್ಯಟಿಟ್ಯೂಡ್​, ಬ್ರೇವ್​ ಕ್ಯಾರೆಕ್ಟರ್​ ಬಂದಿದ್ದು, ಗುರು ಯುವರಾಜ್​ ​ಸಿಂಗ್​ರಿಂದ.

ಸಿಕ್ಸ್​​ ಹಿಟ್ಟಿಂಗ್​ ಹಿಂದೆ ಸಿಕ್ಸರ್​ ಕಿಂಗ್​ ಶ್ರಮ.!

ತನ್ನ ರಣಾರ್ಭಟ ಬ್ಯಾಟಿಂಗ್​ನಿಂದ ಗಮನ ಸೆಳೆದಿರುವ ಈ ಯಂಗ್​ ಟೈಗರ್​​ ಅಭಿಷೇಕ್​ ಶರ್ಮಾ, ಬೆಳೆದಿದ್ದು ಸಿಕ್ಸರ್​ ಕಿಂಗ್​ ಯುವರಾಜ್​ ಸಿಂಗ್​ ಗರಡಿಯಲ್ಲಿ. ಟೀಮ್​ ಇಂಡಿಯಾದ ಕಂಡ ಬೆಸ್ಟ್​ ಆಲ್​​ರೌಂಡರ್​, ವೈಟ್​ಬಾಲ್​ ಫಾರ್ಮೆಟ್​​ನ ರಿಯಲ್​ ಮ್ಯಾಚ್​ ವಿನ್ನರ್ ಯುವರಾಜ್​ ಸಿಂಗ್​, ತಮ್ಮಂತೇ ಮೋಡಿ ಮಾಡೋ ಶಿಷ್ಯನನ್ನ ತಯಾರಿ ಮಾಡಿದ್ದಾರೆ. ಇವರಿಬ್ಬರಲ್ಲಿ ಸ್ವಲ್ಪಾನೂ ಚೇಂಜ್​ ಇಲ್ಲ.. ಆಟ, ಆ್ಯಟಿಟ್ಯೂಡ್​ ಎರಡೂ ಥೇಟ್​ ಯುವಿಯಂತೆ.

ಇದನ್ನೂ ಓದಿRCB ಆಟಗಾರರು T20 ಪಂದ್ಯದಲ್ಲಿ ಫ್ಲಾಪ್​ ಶೋ.. ಫ್ರಾಂಚೈಸಿಗೆ ಸಂಕಷ್ಟ ಕಾದಿದೆಯಾ?

publive-image

ಯುವರಾಜನ ಗರಡಿಯ ಪ್ರತಿಭೆ ಅಭಿಷೇಕ್

ಅಭಿಷೇಕ್​​ ಕ್ರಿಕೆಟ್​ ಅಂಗಳಕ್ಕೆ ಕಾಲಿಡೋ ಮೊದಲು ಫಾಲೋ ಮಾಡಿದ್ದು, ಆ ಬಳಿಕ ಕ್ರಿಕೆಟ್​ ಕಣಕ್ಕೆ ಧುಮುಕಿದ ಮೇಲೆ ಗುರುವಾಗಿ ಸಿಕ್ಕಿದ್ದು ಎರಡೂ ಯುವರಾಜ್​ ಸಿಂಗ್​.! ಯುವರಾಜ್​ ಸಿಂಗ್​ ಗರಡಿಯಲ್ಲಿ ಪಾಠ ಕಲಿತು, ಬೆಳೆದು ಬಂದಿರುವ ಹುಡುಗ ಅಭಿಷೇಕ್. ಆರಂಭದಿಂದ ತಿದ್ದಿ, ತೀಡಿ, ಕ್ರಿಕೆಟ್​ ಪಟ್ಟುಗಳನ್ನ ಕಲಿಸಿ ಗುರು ಯುವರಾಜ್​ ಸಿಂಗ್, ಅಭಿಷೇಕ್​ರನ್ನ ಬೆಳೆಸಿದ್ದಾರೆ. ಯುವರಾಜ್​ ಕಲಿಸಿದ ಪಾಠವನ್ನ ಎಷ್ಟು ಶ್ರದ್ಧೆ, ಶಿಸ್ತಿನಿಂದ ಅಭಿಷೇಕ್ ಕಲಿತಿದ್ದಾರೆ ಅನ್ನೋದನ್ನ ಆಡ್ತಿರೋ ಆಟವೇ ಹೇಳ್ತಿದೆ.

ಐಪಿಎಲ್​ ಟೂರ್ನಿಯಲ್ಲಿ ಅಭಿಷೇಕ್​ ಶರ್ಮಾ ಆರ್ಭಟಿಸಿದಾಗ ಎಲ್ಲರೂ ಅಚ್ಚರಿ ಪಟ್ಟಿದ್ದರು. ಆದ್ರೆ, ಆ ಬಳಿಕ ಟೀಮ್​ ಇಂಡಿಯಾಗೆ ಸೆಲೆಕ್ಟ್​ ಆದಾಗ, ಇಂಟರ್​​ನ್ಯಾಷನಲ್​ ಲೆವೆಲ್​ನಲ್ಲಿ ಇದೇ ಆಟವಾಡ್ತಾರಾ ಎಂಬ ಅನುಮಾನ ಹಲವರಲ್ಲಿತ್ತು. ಭಾರತ ತಂಡದ ಪರ ಆಡಿರೋ 12 ಟಿ20 ಇನ್ನಿಂಗ್ಸ್​​ಗಳಲ್ಲಿ ಅನುಮಾನಕ್ಕೆ ಅಭಿಷೇಕ್​ ಆನ್ಸರ್​ ಕೊಟ್ಟಿದ್ದಾರೆ. ಗುರು ಯುವರಾಜ್​ ಸಿಂಗ್​​​ ಹೆಸರು ಉಳಿಸಿದ್ದಲ್ಲದೇ, ಭವಿಷ್ಯದ ಭರವಸೆಯನ್ನೂ ಹುಟ್ಟು ಹಾಕಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment