/newsfirstlive-kannada/media/post_attachments/wp-content/uploads/2025/04/Abhishek_Sharma_1.jpg)
ಐಪಿಎಲ್​ ಪಂದ್ಯಗಳಲ್ಲಿ ಸತತ ವಿಫಲ ಬ್ಯಾಟಿಂಗ್ ಮಾಡಿದ್ದ ಯಂಗ್ ಬ್ಯಾಟರ್​ ಅಭಿಷೇಕ್​ ಶರ್ಮಾ ಮತ್ತೊಮ್ಮೆ ಘರ್ಜನೆ ಮಾಡಿದ್ದು ಪಂಜಾಬ್​ ವಿರುದ್ಧ ಸಿಡಿಲಬ್ಬರದ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ದಾರೆ.
ಹೈದ್ರಾಬಾದ್​​ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರಂಭಿಕ ವಿಸ್ಫೋಟಕ ಬ್ಯಾಟ್ಸ್​ಮನ್​ ಅಭಿಷೇಕ್ ಶರ್ಮಾ ಭರ್ಜರಿ ಶತಕ ಸಿಡಿಸಿದ್ದಾರೆ. ಸತತ 5 ಪಂದ್ಯಗಳಿಂದ ಭಾರೀ ಮುಖಭಂಗಕ್ಕೆ ಒಳಗಾಗಿದ್ದ ಅಭಿಷೇಕ್ ಶರ್ಮಾ ಪಂಜಾಬ್​ ಕಿಂಗ್ಸ್​ ತಂಡದ ವಿರುದ್ಧ ಸಿಡಿದು ನಿಂತಿದ್ದಾರೆ.
/newsfirstlive-kannada/media/post_attachments/wp-content/uploads/2025/04/Abhishek_Sharma.jpg)
ಪಂಜಾಬ್ ಕಿಂಗ್ಸ್​ ತಂಡದ ಬೌಲರ್​ಗಳನ್ನು ಮನಬಂದಂತೆ ಬೆಂಡೆತ್ತಿ ಅಭಿಷೇಕ್ ಶರ್ಮಾ ತವರಿನನ ನೆಲದಲ್ಲಿ ಸೆಂಚುರಿ ಬಾರಿಸಿಯೇ ಬಿಟ್ಟರು. ಕೇವಲ 40 ಬಾಲ್​ಗಳನ್ನು ಎದುರಿಸಿದ ಅಭಿಷೇಕ್ ಶರ್ಮಾ, 11 ಬೌಂಡರಿ ಹಾಗೂ 6 ಬಿಗ್​ ಸಿಕ್ಸರ್​ಗಳಿಂದ ಶತಕ ಸಿಡಿಸಿದರು. ಟೂರ್ನಿ ಆರಂಭದಿಂದಲೂ ಕಳಪೆ ಬ್ಯಾಟಿಂಗ್ ಮಾಡಿದ್ದ ಅಭಿಷೇಕ್ ಈಗ ಟ್ರ್ಯಾಕ್​ಗೆ ಮರಳಿದ್ದಾರೆ. ಈ ಟೂರ್ನಿಯಲ್ಲಿ ಇಶನ್​ ಕಿಶನ್, ಪ್ರಿಯಾಂಶ್​ ಆರ್ಯ ಅವರ ಸೆಂಚುರಿ ಬಳಿಕ ಅಭಿಷೇಕ್ ಶರ್ಮಾರ 3ನೇ ಸೆಂಚುರಿ ಆಗಿದೆ.
ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಒಟ್ಟು 55 ಎಸೆತಗಳನ್ನು ಎದುರಿಸಿದ್ದು 14 ಬೌಂಡರಿ ಹಾಗೂ 10 ಆಕಾಶದೆತ್ತರದ ಸಿಕ್ಸರ್​ಗಳಿಂದ 141 ರನ್​ಗಳಿಸಿ ಔಟ್​ ಆದರು. ಅರ್ಷದೀಪ್ ಸಿಂಗ್ ಬೌಲಿಂಗ್​ನಲ್ಲಿ ಪ್ರವೀಣ್​ ದುವೆ ಅವರಿಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ದಾರಿ ಹಿಡಿದರು.
ಪಂಜಾಬ್​ ಕ್ಯಾಪ್ಟನ್​ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ತೆಗೆದುಕೊಂಡಿದ್ದರು. ಓಪನರ್ಸ್​ ಆದ ಪ್ರಿಯಾಂಶ್​ ಆರ್ಯ ಕೇವಲ 13 ಎಸೆತದಲ್ಲಿ 4 ಸಿಕ್ಸರ್​ ಇಂದ 36 ರನ್​ ಹೊಡೆದು ಔಟ್​ ಆದ್ರೆ, ಪ್ರಭಸಿಮ್ರನ್ ಸಿಂಗ್ ಕೇವಲ 23 ಬಾಲ್​ಗಳಲ್ಲಿ 7 ಬೌಂಡರಿಗಳಿಂದ 42 ರನ್​ಗೆ ಕ್ಯಾಚ್ ನೀಡಿ ಔಟ್ ಆದರು. ಶ್ರೇಯಸ್ ಅಯ್ಯರ್ 36 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್​ಗಳಿಂದ ಅಮೋಘವಾದ 82 ರನ್​ಗಳ ಕಾಣಿಕೆ ನೀಡಿದ್ದರು. ಹೀಗಾಗಿ ಪಂಜಾಬ್​ ಕಿಂಗ್ಸ್​ 246 ರನ್​ಗಳ ದೊಡ್ಡ ಮೊತ್ತದ ಟಾರ್ಗೆಟ್​ ಅನ್ನು ಸೆಟ್​ ಮಾಡಿತ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us