ಯುವಿಗೆ ಗುರುವಂದನೆ ಸಲ್ಲಿಸಿದ ಅಭಿ.. ಬೆನ್ನು ತಟ್ಟೋರೂ ಬೇಕು ಗುರು ಎಂದ ಕ್ರಿಕೆಟ್ ಜಗತ್ತು..!

author-image
Ganesh
Updated On
ಯುವಿಗೆ ಗುರುವಂದನೆ ಸಲ್ಲಿಸಿದ ಅಭಿ.. ಬೆನ್ನು ತಟ್ಟೋರೂ ಬೇಕು ಗುರು ಎಂದ ಕ್ರಿಕೆಟ್ ಜಗತ್ತು..!
Advertisment
  • ಅಭಿಷೇಕ್ ಅಬ್ಬರದ ಬ್ಯಾಟಿಂಗ್​ಗೆ ಗುಣಗಾನ
  • ಅಭಿಷೇಕ್ ಆಟಕ್ಕೆ ದಿಗ್ಗಜ ಆಟಗಾರರ ಬಹುಪರಾಕ್
  • ಶಿಷ್ಯನ ಕೊಂಡಾಡಿದ ಸಿಕ್ಸರ್ ಕಿಂಗ್ ಯುವರಾಜ್

ಏನ್ ಬ್ಯಾಟಿಂಗ್ ಗುರು. ವಾಖೆಂಡೆಯಲ್ಲಿ ಅಭಿಷೇಕ್ ಶರ್ಮಾರ ವೈಲೆಂಟ್​ ಆಟ ನೋಡಿದ್ಮೇಲೆ. ಕ್ರಿಕೆಟ್ ಪ್ರೇಮಿಗಳೇ ಅಲ್ಲ. ದಿಗ್ಗಜ ಆಟಗಾರರ ಬಾಯಲ್ಲೂ ಈ ಮಾತು ಬರ್ತಿದೆ. ಅಭಿಷೇಕ್ ಶರ್ಮಾ ಆಟದ ವೈಖರಿ ಹಂಗಿತ್ತು.  ಫಿಯರ್​ಲೆಸ್ ಬ್ಯಾಟಿಂಗ್​ನೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಹೊಸ ಹವಾ ಸೃಷ್ಟಿಸಿರುವ ಅಭಿಷೇಕ್​, ವಾಖೆಂಡೆಯಲ್ಲಿ ಇಂಗ್ಲೆಂಡ್ ಎದುರು ಚಂಡಮಾರುತದ ಬ್ಯಾಟಿಂಗ್​​ನಿಂದ ಮತ್ತೊಮ್ಮೆ ಮೋಡಿ ಮಾಡಿದ್ದಾರೆ.

ಸಿಕ್ಸರ್​ಗಳ ‘ಅಭಿಷೇಕ’ಕ್ಕೆ ವಿಶ್ವವೇ ಫಿದಾ

ಇಂಗ್ಲೆಂಡ್ ಎದುರಿನ ಕೊನೆ ಟಿ20ಯಲ್ಲಿ ನಡೆದಿದ್ದು, ಸಿಕ್ಸರ್​ಗಳ ಅಭಿಷೇಕ. ವಾಂಖೆಡೆಯ ಅಷ್ಟ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸಿದ ಪಂಜಾಬ್ ಪುತ್ತರ್, ಜಸ್ಟ್​ 37 ಎಸೆತಗಳಲ್ಲಿ 5 ಬೌಂಡರಿ, 10 ಭರ್ಜರಿ ಸಿಕ್ಸರ್​ ನೆರವಿನಿಂದ ಶತಕ ಪೂರೈಸಿ ಸಂಭ್ರಮಿಸಿದರು.
250 ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ ಅಭಿಷೇಕ್, 54 ಎಸೆತಗಳಲ್ಲಿ 7 ಬೌಂಡರಿ, 13 ಸಿಕ್ಸರ್‌ ಒಳಗೊಂಡ 135 ರನ್ ದಾಖಲಿಸಿ ಹಲವು ದಾಖಲೆಗಳನ್ನ ಬ್ರೇಕ್ ಮಾಡಿದರು. ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ, ಒಂದೇ ಪಂದ್ಯದಲ್ಲಿ ಅತಿ ಹೆಚ್ಚು 13 ಸಿಕ್ಸರ್‌ ಸಿಡಿಸಿದ ಆಟಗಾರ ಸೇರಿದಂತೆ ಸೆಕೆಂಡ್​ ಫಾಸ್ಟೆಸ್ಟ್​ ಹಂಡ್ರೆಡ್ ಎಂಬ ಗರಿಮೆ ಮುಡಿಗೇರಿಕೊಂಡ್ರು. ಸಾಲಿಡ್​ ಆಟವಾಡಿದ ಅಭಿಷೇಕ್​ನ ಸದ್ಯ ವಿಶ್ವವೇ ಕೊಂಡಾಡ್ತಿದೆ.

ಇದನ್ನೂ ಓದಿ: ಇನ್ಮುಂದೆ ಟೀಮ್​ ಇಂಡಿಯಾದಲ್ಲಿ ಕೊಹ್ಲಿ ಆಪ್ತನ ದರ್ಬಾರ್; ಕ್ಯಾಪ್ಟನ್ಸಿಗೆ ಮೇಜರ್​ ಟ್ವಿಸ್ಟ್​!

ಶಿಷ್ಯನ ಕೊಂಡಾಡಿದ ಯುವರಾಜ್

ಪಂಜಾಬ್ ಪುತ್ತರ್ ಅಭಿಷೇಕ್ ಬ್ಯಾಟಿಂಗ್ ವೈಖರಿಗೆ ಫ್ಯಾನ್ಸ್​ ಮಾತ್ರವಲ್ಲ. ದಿಗ್ಗಜ ಆಟಗಾರರೇ ಬಹುಪರಾಕ್ ಹೇಳ್ತಿದ್ದಾರೆ. ಗಾಡ್ ಆಫ್ ಕ್ರಿಕೆಟ್ ಸಚಿನ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಆರ್​.ಅಶ್ವಿನ್. ಕೆ.ಎಲ್.ರಾಹುಲ್, ಅಲಿಸ್ಟರ್ ಕುಕ್, ಮೈಕಲ್ ವಾನ್​ ಸೇರಿದಂತೆ ಹಲವರು ಕೊಂಡಾಡಿದ್ದಾರೆ. ಅದ್ರಲ್ಲೂ ಶಿಷ್ಯನ ಬ್ಯಾಟಿಂಗ್ ಬಗ್ಗೆ ಗುರು ಯುವರಾಜ್ ಸಿಂಗ್ ಶಬ್ಬಾಶ್​ಗಿರಿ ನೀಡಿದ್ದಾರೆ.

ಚೆನ್ನಾಗಿ ಆಡಿದ್ದೀರಿ ಅಭಿಷೇಕ್ ಶರ್ಮಾ.. ಇದೇ ಆಟ ನಾನು ನಿಮ್ಮಲ್ಲಿ ನೋಡಲು ಬಯಸುತ್ತೇನೆ. ನಿಮ್ಮ ಬಗ್ಗೆ ಹೆಮ್ಮೆಯಿದೆ-ಯುವರಾಜ್ ಸಿಂಗ್, ಮಾಜಿ ಕ್ರಿಕೆಟರ್

ನನ್ನ ಜೀವನದಲ್ಲಿ ಬಾರಿಸಿದಕ್ಕಿಂತ ಹೆಚ್ಚು ಸಿಕ್ಸರ್​ಗಳನ್ನು ಅಭಿಷೇಕ್ ಶರ್ಮಾ, ಎರಡು ಗಂಟೆಗಳಲ್ಲಿ ಬಾರಿಸಿದರು-ಅಲಿಸ್ಟರ್ ಕುಕ್, ಇಂಗ್ಲೆಂಡ್ ಮಾಜಿ ನಾಯಕ

ಅಭಿಷೇಕ್ ಶರ್ಮಾ ನನ್ನ ಫೇವರಿಟ್​ ಬ್ಯಾಟರ್​ಗಳಲ್ಲಿ ಒಬ್ಬರಾಗಿದ್ದಾರೆ-ಕೆವಿನ್ ಪೀಟರ್ಸನ್, ಇಂಗ್ಲೆಂಡ್ ಮಾಜಿ ನಾಯಕ

ಅಭಿಷೇಕ್ ಶರ್ಮಾ ರಾಕೆಟ್.. ನಂಬಲಾಗದ 37 ಎಸೆತಗಳ 100..-ಮೈಕಲ್ ವಾನ್, ಇಂಗ್ಲೆಂಡ್ ಮಾಜಿ ನಾಯಕ

ಎಂಥಹ ಇನ್ನಿಂಗ್ಸ್​ ಅಭಿಷೇಕ್ ಶರ್ಮಾ. ನಾನು ನೋಡಿದ ಅತ್ಯುತ್ತಮ T20 ಇನ್ನಿಂಗ್ಸ್‌ಗಳಲ್ಲಿ ಇದು ಒಂದಾಗಿದೆ. ಹೀಗೆ ಶೈನ್ ಆಗ್ತೀರಿ ಸಹೋದರ.. ಯುವಿ ಪಾ, ನೀವು ಆತನಿಗೆ ಅಸಾಧಾರಣ ತರಬೇತಿ ನೀಡಿದ್ದೀರಿ. ಅಭೀಷೇಕ್​ ಯಶಸ್ಸು ನೋಡಿ ನಾನು ಥ್ರಿಲ್ ಆಗಿದ್ದೇನೆ-ಸುರೇಶ್ ರೈನಾ, ಮಾಜಿ ಕ್ರಿಕೆಟರ್

ಸುರೇಶ್ ರೈನಾ ಹೇಳಿದಂತೆ ಅಭಿಷೇಕ್ ಶರ್ಮಾ ಯಶಸ್ಸಿನ ಹಿಂದಿರುವ ಗುರು ಯುವರಾಜ್​ ಸಿಂಗ್​. ಈತನ ಟ್ಯಾಲೆಂಟ್​ ಗುರುತಿಸಿ ಮಾರ್ಗದರ್ಶನ ನೀಡಿದ್ದು ಸಿಕ್ಸರ್​ ಕಿಂಗ್​ ಯುವರಾಜ್. ಈತನ ಆಟ ಪ್ರತಿ ಹಂತದಲ್ಲೂ ಯುವರಾಜ್​ ನೆನಪಾಗ್ತಾರೆ. ಅಬ್ಬರ ಶತಕ ಸಿಡಿಸಿದ ಬಳಿಕ ಅಭಿಷೇಕ್​ ಗುರುವಂದನೆ ಸಲ್ಲಿಸಿದ್ದಾರೆ. ಮೆಂಟರ್ ಯುವರಾಜ್ ಸಿಂಗ್​ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್​ ವಿರುದ್ಧ ಏಕದಿನ ಸರಣಿ; ಟೀಮ್​ ಇಂಡಿಯಾ ಆತಂಕ ಹೆಚ್ಚಿಸಿದ ಕೊಹ್ಲಿ; ಏನಾಯ್ತು?

ವಿಶ್ವ ಶ್ರೇಷ್ಟ​ ಬೌಲರ್ಸ್​ ಎದುರು ಕವರ್ಸ್ ಮೇಲೆ ಹೊಡೆದ ಶಾಟ್​ ಸ್ಪೆಷಲ್​. ಆದಿಲ್ ರಶೀದ್ ಎದುರು ಹೊಡೆದಿದ್ದು ನನಗೆ ಸ್ಪೆಷಲ್​. ಆ ಸ್ಪೆಷಲ್ ಶಾಟ್​ ಬಗ್ಗೆ ಯುವಿ ಪಾಜಿ ಹೇಳಿದ್ದರು. ಬಹುಶಃ ಯುವಿ ಪಾಜಿ ಇಂದು ಸಂತೋಷವಾಗಿರುತ್ತಾರೆ. ಯುವರಾಜ್​ ಯಾವಾಗಲೂ ನಾನು 15, 20 ನೇ ಓವರ್​​ವರೆಗೆ ಬ್ಯಾಟಿಂಗ್ ಮಾಡಬೇಕೆಂದು ಬಯಸಿದ್ದರು. ಗೌತಿ ಭಾಯ್ ಸಹ ಇದನ್ನೇ ಬಯಸಿದ್ದರು. ಇವತ್ತು ನನ್ನ ದಿನವಾಗಿತ್ತು. ಅದನ್ನು ಸರಿಯಾಗಿ ಇಫ್ಲಿಮೆಂಟ್ ಮಾಡಿದೆ ಎಂದು ಅಭಿಷೇಕ್ ಶರ್ಮಾ ಹೇಳಿದ್ದಾರೆ.

ಸಂಡೇ ಅಭಿಷೇಕ್ ಪಾಲಿಗೆ ಸೂಪರ್ ಸಂಡೇ ಆಗಿತ್ತು. ಅಭಿಷೇಕ್​ ಆಟದ ವೈಭವವೇ ಅದನ್ನ ಸಾರಿ ಸಾರಿ ಹೇಳ್ತಿತ್ತು. ಪಂಜಾಬ್​ ಪುತ್ತರ್​ ಆಟಕ್ಕೆ ಮೆಂಟರ್​ ಯುವರಾಜ್​ ಸಿಂಗ್​ ಮಾತ್ರವಲ್ಲ. ಇಡೀ ಭಾರತೀಯ ಕ್ರಿಕೆಟ್ ಲೋಕವೇ ಫುಲ್​ ಖುಷ್​ ಆಗಿದೆ. ಮುಂದೆಯೂ ಇದೇ ಅಬ್ಬರದಾಟ ಮುಂದುವರೆಯಲಿ. ಯುವರಾಜ್ ಗರಡಿಯಲ್ಲಿ ಪಳಗಿದ ಅಭಿಷೇಕ್, ಮತ್ತೊಬ್ಬ ಯವಿಯಾಗಲಿ ಅನ್ನೋದೇ ಎಲ್ಲರ ಆಶಯ.

ಇದನ್ನೂ ಓದಿ: ಒಂದೇ ವರ್ಷದಲ್ಲಿ ಐಪಿಎಲ್​​ನಿಂದ ಬರೋಬ್ಬರಿ 11,769 ಕೋಟಿ ರೂ. ಆದಾಯ; ಹೇಗೆ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment