ದೇಶಕ್ಕಾಗಿ ಆಡುವುದು ಗ್ರೇಟ್ ಫೀಲಿಂಗ್.. 37 ಎಸೆತದಲ್ಲಿ ಸೆಂಚುರಿ ಸಿಡಿಸಿ ಅಭಿಷೇಕ್ ಶರ್ಮಾ ಏನ್ ಹೇಳಿದರು?

author-image
Bheemappa
Updated On
ದೇಶಕ್ಕಾಗಿ ಆಡುವುದು ಗ್ರೇಟ್ ಫೀಲಿಂಗ್.. 37 ಎಸೆತದಲ್ಲಿ ಸೆಂಚುರಿ ಸಿಡಿಸಿ ಅಭಿಷೇಕ್ ಶರ್ಮಾ ಏನ್ ಹೇಳಿದರು?
Advertisment
  • ಪಂದ್ಯದಲ್ಲಿ ಭರ್ಜರಿ 13 ಸಿಕ್ಸರ್​ಗಳನ್ನು ಹೊಡೆದಿರುವ ಅಭಿಷೇಕ್
  • ಅಭಿಷೇಕ್ ಶರ್ಮಾ ವೇಗದ ಸೆಂಚುರಿ ಬಗ್ಗೆ ಇನ್ನೇನು ಹೇಳಿದರು.?
  • ಯುವರಾಜ್​ ಸಿಂಗ್​ಗೆ ತುಂಬಾ ಇಷ್ಟದ ಬ್ಯಾಟಿಂಗ್ ಶಾಟ್ ಇದು​

ಇಂಗ್ಲೆಂಡ್​ ಆಟಗಾರರಿಗೆ ಬಿಸಿ ಮುಟ್ಟಿಸಿರುವ ಸಿಡಿಲಮರಿ ಅಭಿಷೇಕ್ ಶರ್ಮಾ ಅತ್ಯದ್ಭುತವಾದ ಸೆಂಚುರಿ ಸಿಡಿಸಿದ್ದಾರೆ. ಪಂದ್ಯದ ವೇಳೆ ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ತಲೆ ಕೆಡಿಸಿಕೊಳ್ಳದೇ ತಮ್ಮ ಬ್ಯಾಟಿಂಗ್​ ತಾವು ಆಡಿದ್ದಾರೆ. ಇದರಿಂದಲೇ ಭಾರತ 150 ರನ್​ಗಳ ಅಂತರದಲ್ಲಿ ಅಮೋಘವಾಗ ಗೆಲುವು ಪಡೆದಿದೆ. ಪಂದ್ಯ ಮುಗಿದ ಬಳಿಕ ಅಭಿಷೇಕ್ ಶರ್ಮಾ ಮಾತನಾಡಿ, ಗುರು ಯುವಿಯನ್ನು ನೆನಪು ಮಾಡಿಕೊಂಡಿದ್ದಾರೆ.

ಪಂದ್ಯದ ನಂತರ ಅಭಿಷೇಕ್ ಶರ್ಮಾ ಪ್ಲೇಯರ್ ಆಫ್​ ದೀ ಮ್ಯಾಚ್ ಪ್ರಶಸ್ತಿ ಪಡೆದು ಮಾತನಾಡಿದ ಅವರು, ದೇಶಕ್ಕಾಗಿ ಆಡುವುದು ಎಂದರೆ ನನಗೆ ಗ್ರೇಟ್ ಫೀಲಿಂಗ್ ಇದೆ. ಮೊದಲ ಬಾಲ್ ಆಡುವಾಗಲೇ ಗೊತ್ತಾಯಿತು, ಇದು ನನ್ನ ದಿನವೆಂದು. ಹೀಗಾಗಿ ಬ್ಯಾಟಿಂಗ್ ಚೆನ್ನಾಗಿ ಮಾಡಿದೆ. ಕೋಚ್ ಗಂಭೀರ್ ಹಾಗೂ ಕ್ಯಾಪ್ಟನ್ ಸೂರ್ಯ ಕೂಡ ಇದನ್ನೇ ನಿರೀಕ್ಷೆ ಮಾಡಿದ್ದರು. ಅದಕ್ಕೆ ತಕ್ಕಂತೆ ಬ್ಯಾಟಿಂಗ್​ನಿಂದ ಟ್ರೀಟ್ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

publive-image

ಇದನ್ನೂ ಓದಿ: ಅಭಿಷೇಕ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್​ನಿಂದ ಬಂದ ದಾಖಲೆಗಳು ಯಾವ್ಯಾವು ಗೊತ್ತಾ?

ಪಂದ್ಯ ನಡೆಯುವಾಗ ಬೌಲರ್​ಗಳು 140 ರಿಂದ 150 ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರೇ ಯಾವುದೇ ಸಂಶಯವಿಲ್ಲದೇ ಯಾರೂ ಬೇಕಾದರೂ ಬ್ಯಾಟಿಂಗ್ ಮಾಡಬಹುದು. ಅದರಂತೆ ನನ್ನ ಆಟ ನಾನು ಆಡಿದೆ. ಯಾವಾಗ ವರ್ಲ್ಡ್​ ಕ್ಲಾಸ್​ ಬೌಲರ್ ಜೋಫ್ರಾ ಆರ್ಚರ್ ಓವರ್​ನಲ್ಲಿ ಸಿಕ್ಸ್​, ಫೋರ್ ಹೊಡೆದನೋ ಅವಾಗ ಕಾನ್ಫಡೆನ್ಸ್​ ಹೆಚ್ಚಾಯಿತು. ಅವೆಲ್ಲಾ ಸ್ಪೆಷಲ್ ಶಾಟ್ ಆಗಿದ್ದವು. ರಶೀದ್​​ ಓವರ್​ನಲ್ಲಿ ಸಿಕ್ಸರ್​ಗಳು ನನಗೆ ಹೆಚ್ಚು ಇಷ್ಟ ಆಗಿದ್ದವು ಎಂದು ಅಭಿಷೇಕ್ ಶರ್ಮಾ ಹೇಳಿದ್ದಾರೆ.

ಸ್ಟ್ರೇಟ್ ಡ್ರೈವ್ (straight drive) ಯುವರಾಜ್​ ಸಿಂಗ್ ಅವರಿಗೆ ತುಂಬಾ ಇಷ್ಟವಾದಂತ ಶಾಟ್​, ಹೀಗಾಗಿ ಪಂದ್ಯದಲ್ಲಿ ಸ್ಟ್ರೇಟ್ ಡ್ರೈವ್ ಕೂಡ ಮಾಡಿದೆ. ಇದರಿಂದ ನನಗೆ ತುಂಬಾ ಖುಷಿ ಆಗಿದೆ. 15 ರಿಂದ 20 ಓವರ್​ಗಳ ವರೆಗೆ ನಾನು ಬ್ಯಾಟ್ ಬೀಸಬೇಕು ಎಂದು ಯಾವಾಗಲೂ ಯುವರಾಜ್ ಸಿಂಗ್ ಬಯಸುತ್ತಾರೆ. ಅದನ್ನೂ ಮಾಡಿದೆ. ಇವತ್ತು ನನ್ನ ದಿನ ಅದನ್ನು ಚೆನ್ನಾಗಿ ಉಪಯೋಗಿಸಿಕೊಂಡೆ ಅಷ್ಟೇ ಎಂದು ಅಭಿ ಪಂದ್ಯದ ಕೊನೆಯಲ್ಲಿ ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment