6,6,6,6,6,6,4,4; ಕೇವಲ 16 ಬಾಲ್​ನಲ್ಲಿ 50 ರನ್​ ಚಚ್ಚಿದ ಅಭಿಶೇಕ್​ ಶರ್ಮಾ!

author-image
Ganesh Nachikethu
Updated On
6,6,6,6,6,6,4,4; ಕೇವಲ 16 ಬಾಲ್​ನಲ್ಲಿ 50 ರನ್​ ಚಚ್ಚಿದ ಅಭಿಶೇಕ್​ ಶರ್ಮಾ!
Advertisment
  • ಇಂದು ಸನ್​ರೈಸರ್ಸ್​ ಹೈದರಾಬಾದ್​​, ಮುಂಬೈ ಇಂಡಿಯನ್ಸ್​​ ಮಧ್ಯೆ ಮ್ಯಾಚ್​​
  • ಐಪಿಎಲ್​ ಇತಿಹಾಸದಲ್ಲೇ ದಾಖಲೆ ಬರೆದ ಯಂಗ್​ ಪ್ಲೇಯರ್​ ಅಭಿಶೇಕ್​​..!
  • ಕೇವಲ 16 ಬಾಲ್​ನಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿ ದಾಖಲೆ ಬರೆದರು

ಸದ್ಯ ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಹೈವೋಲ್ಟೇಜ್​​ ಪಂದ್ಯದಲ್ಲಿ ಅಭಿಶೇಕ್​ ಶರ್ಮಾ ಫಾಸ್ಟೆಸ್ಟ್​ ಫಿಫ್ಟಿ ಬಾರಿಸಿದ್ದಾರೆ.

ಮುಂಬೈ ಇಂಡಿಯನ್ಸ್​ ಬೌಲರ್​ಗಳ ಬೆಂಡೆತ್ತಿದ ಅಭಿಶೇಕ್​​​ ಶರ್ಮಾ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 16 ಬಾಲ್​ನಲ್ಲಿ 6 ಸಿಕ್ಸರ್​​, 2 ಫೋರ್​​ ಸಮೇತ 50 ರನ್​​ ಸಿಡಿಸಿ ದಾಖಲೆ ಬರೆದರು. ಈ ಮೂಲಕ ಅಭಿಶೇಕ್​​ 2024ರ ಐಪಿಎಲ್​ ಇತಿಹಾಸದಲ್ಲೇ ಹೊಸ ಇತಿಹಾಸ ನಿರ್ಮಿಸಿದ್ರು.

ಇನ್ನು, ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಸನ್​ರೈಸರ್ಸ್​ ಹೈದರಾಬಾದ್​​​ ಮೊದಲು ಬ್ಯಾಟಿಂಗ್​ ಮಾಡುತ್ತಿದೆ.

ಇದನ್ನೂ ಓದಿ: ಟಾಸ್​ ಗೆದ್ದ ಹಾರ್ದಿಕ್​ ಮತ್ತೆ ತಪ್ಪು ಮಾಡಿದ್ರಾ? ಪಾಂಡ್ಯಗೆ ಇಂದು ಅಸಲಿ ಅಗ್ನಿಪರೀಕ್ಷೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment