/newsfirstlive-kannada/media/post_attachments/wp-content/uploads/2025/02/Abhishek_Sharma-1.jpg)
ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯನ್ನು 4-1 ರಿಂದ ಗೆದ್ದುಕೊಂಡು ಸಂಭ್ರಮಿಸಿದೆ. ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಅಭಿಷೇಕ್ ಶರ್ಮಾ ಹಲವು ದಾಖಲೆಗಳನ್ನು ಮಾಡಿದರು. ಕಡಿಮೆ ಬಾಲ್ನಲ್ಲಿ ಸೆಂಚುರಿ ಸಿಡಿಸಿದವರ ಭಾರತೀಯರ ಪೈಕಿ 2ನೇ ಪ್ಲೇಯರ್ ಆದ್ರೆ, ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ಸಿಕ್ಸ್ ಸಿಡಿಸಿದವರಲ್ಲಿ ಅಭಿಷೇಕ್ ಅಗ್ರಸ್ಥಾನ ಅಲಂಕರಿಸಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ಪಂದ್ಯ ರೋಮಾಂಚನವಾಗಿತ್ತು. ಅಭಿಷೇಕ್ ಶರ್ಮಾ ಬ್ಯಾಟಿಂಗ್ ನೋಡಿದ ಅಭಿಮಾನಿಗಳಿಗೆ ಮನರಂಜನೆ ದುಪ್ಪಟ್ಟು ಆಯಿತು. ಕೇವಲ 17 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ ಯುವ ಬ್ಯಾಟ್ಸ್ಮನ್, 37 ಎಸೆತಗಳಲ್ಲಿ ಶತಕ ಸಿಡಿಸಿ ಬ್ಯಾಟ್ ಮೇಲೆ ಎತ್ತಿ ಖುಷಿ ಪಟ್ಟರು. ಇಂಗ್ಲೆಂಡ್ ಆಟಗಾರರಂತೂ ಅಭಿ ಬ್ಯಾಟಿಂಗ್ಗೆ ದಂಗಾಗಿ ಹೋಗಿದ್ದರು. ಏಕೆಂದರೆ ಒಂದೊಂದು ಸಿಕ್ಸ್ ಇಂಗ್ಲೆಂಡ್ ಆಟಗಾರರಿಗೆ ಎದೆ ನಡುಗಿಸುತ್ತಿತ್ತು.
ಇದನ್ನೂ ಓದಿ:ಮನ್‌ಮುಲ್ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್.. BJP-JDSಗೆ ಸೋಲು
ಒಂದು ಇನ್ನಿಂಗ್ಸ್ನಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತದ ಬ್ಯಾಟ್ಸ್ಮನ್ಸ್
ಅಭಿಷೇಕ್ ಶರ್ಮಾ- 13 ಸಿಕ್ಸರ್‌ಗಳು (2025 ಇಂಗ್ಲೆಂಡ್)
ರೋಹಿತ್ ಶರ್ಮಾ- 10 ಸಿಕ್ಸರ್‌ಗಳು (2017 ಶ್ರೀಲಂಕಾ)
ಟಿ20 ಪಂದ್ಯದಲ್ಲಿ ಅತಿ ವೇಗದ ಸೆಂಚುರಿ ಸಿಡಿಸಿ ಭಾರತದ ಬ್ಯಾಟ್ಸ್ಮನ್ಗಳು
- 2017- ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ 35 ಎಸೆತಗಳಲ್ಲಿ ಶತಕ
- 2025- ಇಂಗ್ಲೆಂಡ್ ವಿರುದ್ಧ ಅಭಿಷೇಕ್ ಶರ್ಮಾ 37 ಬಾಲ್ಗಳಲ್ಲಿ ಸೆಂಚುರಿ
- 2024- ಬಾಂಗ್ಲಾದ ಜೊತೆ ಸಂಜು ಸ್ಯಾಮ್ಸನ್ 40 ಎಸೆತಗಳಲ್ಲಿ ಹಂಡ್ರೆಡ್
- 2024- ಆಫ್ರಿಕಾ ಜೊತೆ ತಿಲಕ್ ವರ್ಮಾ 41 ಎಸೆತಗಳಲ್ಲಿ ಶತಕ
- 2023- ಶ್ರೀಲಂಕಾ ವಿರುದ್ಧ ಸುರ್ಯಕುಮಾರ್ 45 ಎಸೆತಗಳಲ್ಲಿ ಸೆಂಚುರಿ
ಟಿ20 ಪಂದ್ಯದಲ್ಲಿ ಭಾರತದ ಪರ ಅತ್ಯಧಿಕ ವೈಯಕ್ತಿಕ
ಇದೀಗ ಅಭಿಷೇಕ್ ಶರ್ಮಾ ಇಂಗ್ಲೆಂಡ್ ಜೊತೆ 135 ರನ್ ಗಳಿಸಿದ್ದಾರೆ
ಶುಭಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧ 2023ರಲ್ಲಿ 126 ರನ್ ಗಳಿಸಿದ್ದರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ