newsfirstkannada.com

ಅಭಿಷೇಕ್ ವೆಡ್ಸ್​​ ಅವಿವಾ ಲಗ್ನ ಪತ್ರಿಕೆ ವೈರಲ್​; ಮೋದಿ ಕೊಟ್ಟ ಆಮಂತ್ರಣ ಪತ್ರಿಕೆಯಲ್ಲಿ ಏನೇನಿತ್ತು ಗೊತ್ತಾ?

Share :

Published May 29, 2023 at 9:07am

  ಅಭಿಷೇಕ್ ವೆಡ್ಸ್​​ ಅವಿವಾ ಲಗ್ನ ಪತ್ರಿಕೆ ವೈರಲ್

  ಮೋದಿ ಕೊಟ್ಟ ಆಮಂತ್ರಣ ಪತ್ರಿಕೆಯಲ್ಲಿ ಏನೇನಿತ್ತು ಗೊತ್ತಾ?

  ಲವ್​ ವಿಥ್​ ಆ್ಯರೇಜ್​ ಮ್ಯಾರೇಜ್​ ಆಗಲು ಹೊರಟ ಅಭಿಷೇಕ್

ನಟ ಅಭಿಷೇಕ್ ಅಂಬರೀಶ್ ಅವರ ಮದುವೆಯ ಆಮಂತ್ರಣ ಪತ್ರಿಕೆ ವೈರಲ್​ ಆಗಿದೆ. ವಿಶೇಷ ಅತಿಥಿಗಳಿಗಾಗಿ ಸಿದ್ಧಪಡಿಸಿಲಾದ ಸ್ಪೆಷಲ್ ಆಮಂತ್ರಣ ಪತ್ರಿಕೆ ಇದಾಗಿದ್ದು, ಇತ್ತೀಚೆಗೆ ಸಂಸದೆ ಸುಮಲತಾ ಮತ್ತು ಅಭಿಷೇಕ್​ ಇದೇ ಲಗ್ನ ಪತ್ರಿಕೆಯನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕೊಟ್ಟು ಮದುವೆಗೆ ಆಹ್ವಾನಿಸಿದ್ದರು. ಇದೀಗ ಈ ವಿಶೇಷ ಆಮಂತ್ರಣ ಪತ್ರಿಕೆಯಲ್ಲಿ ಏನೇನಿದೆ ಎಂದು ಕೂಡ ದೃಶ್ಯದ ಮೂಲಕ ವೈರಲ್​ ಆಗಿದೆ.

ಜೂನ್​ನಲ್ಲಿ ಮದುವೆ

ಜೂನ್​ 5ನೇ ತಾರೀಖು ಸೋಮವಾರದಂದು ಅಭಿಷೇಕ್​​ ಅಂಬರೀಶ್​ ಮಾಡೆಲ್​ ಅವಿವಾ ಬಿಡಪ ಅವರನ್ನು ವಿವಾಹವಾಗುತ್ತಿದ್ದಾರೆ. ಸಮಯ 9:30 10:30ರವರೆಗಿನ ಕರ್ಕಾಟಕ ಲಗ್ನದಲ್ಲಿ ಅವಿವಾ ಜೊತೆಗೆ ಅಭಿಷೇಕ್​ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬೆಂಗಳೂರಿನ ಸಿ.ಡಿ ಜಯಮಹಲ್​ ಮುಖ್ಯ ರಸ್ತೆ ಬಳಿ ಇರುವ ಮಾಣಿಕ್ಯ ಚಾಮರ ವಜ್ರ ಮಂಟಪದಲ್ಲಿ ಇವರ ಮದುವೆ ನಡೆಯಲಿದೆ.

ಲಗ್ನ ಪತ್ರಿಕೆಯಲ್ಲಿ ಏನೇನಿದೆ?

ಅಭಿಷೇಕ್ ವೆಡ್ಸ್​​ ಅವಿವಾ ಲಗ್ನ ಪತ್ರಿಕೆ ಡ್ರೈ ಫುಡ್ಸ್​ ಕೂಡ ಇಡಲಾಗಿದೆ. ಗೋಡಂಬಿ, ಒಣದ್ರಾಕ್ಷಿ, ಬಾದಾಮಿಯನ್ನು ದೃಶ್ಯದಲ್ಲಿ ಕಾಣಬಹುದಾಗಿದೆ. ಸದ್ಯ ಇದು ದುಬಾರಿಯ ಆಮಂತ್ರಣ ಪತ್ರಿಕೆ ಎಂಬುದು ಮೇಲ್ನೋಟಕ್ಕೆ ಕಾಣಿಸಿದೆ.

ಕಳೆದ ವರ್ಷ ನಿಶ್ಚಿತಾರ್ಥ 

ಇನ್ನು ಕಳೆದ ವರ್ಷ ಡಿಸೆಂಬರ್​ 22ರಂದು ಅಭಿಷೇಕ್​ ಅಂಬರೀಶ್​ ಅವರು ಅವಿವಾ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡರು. ನಗರದ ಖಾಸಗಿ ಹೋಟೆಲ್​ ಒಂದರಲ್ಲಿ ಜರುಗಿದ ನಿಶ್ಚಿತಾರ್ಥ ಸಮಾರಂಭದಲ್ಲಿ ಎರಡು ಕುಟುಂಬಗಳು ಭಾಗಿಯಾಗಿದ್ದವು.

ಲವ್​ ವಿಥ್​ ಆ್ಯರೇಜ್​ ಮ್ಯಾರೇಜ್​

ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ­ಜೋಡಿ ತಮ್ಮ ಪ್ರೀತಿ ವಿಷಯವನ್ನ ಎರಡು ಮನೆಯವರಿಗೆ ತಿಳಿಸಿ ಮದುವೆಗೆ ಒಪ್ಪಿಗೆ ಪಡೆದುಕೊಂಡಿದ್ದರು. ಈ ನಿಶ್ಚಿತಾರ್ಥ ಸಮಾರಂಭಕ್ಕೆ ರಾಕಿಂಗ್​ ಸ್ಟಾರ್ ಯಶ್​ ಹಾಗೂ ರಾಧಿಕಾ ಪಂಡಿತ್​ ಸಮಾರಂಭಕ್ಕೆ ಬಂದು ಶುಭ ಹಾರೈಸಿದ್ದರು. ಜೊತೆಗೆ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​, ಸಚಿವರಾದ ಆರ್​. ಅಶೋಕ್​, ಅಶ್ವತ್ಥ ನಾರಾಯಣ್​, ಗುರುಕಿರಣ್ ದಂಪತಿ, ಸುಧಾಕರ್​ ಸೇರಿದಂತೆ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿ ಆಗಿದ್ದರು.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

ಅಭಿಷೇಕ್ ವೆಡ್ಸ್​​ ಅವಿವಾ ಲಗ್ನ ಪತ್ರಿಕೆ ವೈರಲ್​; ಮೋದಿ ಕೊಟ್ಟ ಆಮಂತ್ರಣ ಪತ್ರಿಕೆಯಲ್ಲಿ ಏನೇನಿತ್ತು ಗೊತ್ತಾ?

https://newsfirstlive.com/wp-content/uploads/2023/05/Abhishek-with-aviva.jpg

Load More