/newsfirstlive-kannada/media/post_attachments/wp-content/uploads/2025/07/sarojadevi6.jpg)
ಸ್ಯಾಂಡಲ್​ವುಡ್​ ಹಿರಿಯ ನಟಿ, ಅಭಿನಯ ಸರಸ್ವತಿ ಬಿ.ಸರೋಜಾ ದೇವಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸರೋಜಾದೇವಿ, ಮಲ್ಲೇಶ್ವರಂನ ಮಣಿಪಾಲ್​ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 87 ವರ್ಷಗಳಾಗಿತ್ತು.
ಇದನ್ನೂ ಓದಿ: ಒಟ್ಟಿಗೆ ಬೆಳೆದ ಸ್ಟಾರ್ ಜೋಡಿ ಇದು! ಸೈನಾ – ಕಶ್ಯಪ್ ಲವ್ ಸ್ಟೋರಿ ಶುರುವಾಗಿದ್ದು ಹೇಗೆ..?
ಭಾರತದ ಸಿನಿ ಜಗತ್ತಿನಲ್ಲಿ ಅತ್ಯಂತ ಯಶಸ್ವಿ ನಟಿಯಾಗಿದ್ದ ಸರೋಜಾದೇವಿ, ಚರ್ತುಭಾಷಾ ನಟಿ ಎಂದೇ ಹೆಸರು ವಾಸಿಯಾಗಿದ್ದರು. ಸರೋಜಾ ದೇವಿ ಅವರ ಜನ್ಮನಾಮ ರಾಧಾದೇವಿ ಎಂದಾಗಿತ್ತು.
ಬೈರಪ್ಪ ಗೌಡ- ರುದ್ರಮ್ಮ ದಂಪತಿಗೆ 1938 ಜನವರಿ 7ರಂದು ಬೆಂಗಳೂರಿನಲ್ಲಿ ಸರೋಜಾದೇವಿ ಮಗಳಾಗಿ ಜನಿಸಿದ್ದರು. ತಂದೆ ಪೊಲೀಸ್​ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸರೋಜಾ ದೇವಿ ಬೈರಪ್ಪ ದಂಪತಿಗೆ ನಾಲ್ಕನೇ ಮಗಳಾಗಿದ್ದರು.
ಸರೋಜಾ ದೇವಿಯನ್ನು ಅವರನ್ನು ತಾತ ದತ್ತು ನೀಡಲು ಮುಂದಾಗಿದ್ದರು. ಆದ್ರೆ ತಂದೆ ಬೈರಪ್ಪ ಅವ್ರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಸರೋಜಾ ದೇವಿಗೆ ಡ್ಯಾನ್ಸ್​ ಕಲಿಯೋದಕ್ಕೆ ಉತ್ತೇಜಿಸಿದ್ದರು.
ನಟನೆಯನ್ನ ವೃತ್ತಿಯಾಗಿಸಿಕೊಳ್ಳಲು ಸಪೋರ್ಟ್​ ಮಾಡಿದ್ದು ತಂದೆಯರು. ತಾಯಿ ರುದ್ರಮ್ಮ ಸಿನಿಮಾದಲ್ಲಿ ಸ್ವಿಮ್ಮಿಂಗ್​ ಸೂಟ್​ ಮತ್ತು ಸ್ಲೀವ್​ ಲೇಸ್​ ಧರಿಸಿದಂತೆ ತಾಕೀತು ಮಾಡಿದ್ದರು. ತಾಯಿಯ ಮಾತನ್ನ ಪಾಲಿಸಿದ ಸರೋಜಾ ದೇವಿ ಯಾವತ್ತೂ ಸಿನಿಮಾದಲ್ಲಿ ಅಂತಾ ಡ್ರೇಸ್​ಗಳನ್ನ ಹಾಕಿರಲಿಲ್ಲ.
13ನೇ ವಯಸ್ಸಿನಲ್ಲೇ ಸರೋಜಾ ದೇವಿಗೆ ಸಿನಿಮಾ ಆಫರ್​ ಬಂದಿತ್ತು. ಬಿ.ಆರ್​.ಕೃಷ್ಣಮೂರ್ತಿ ಮೊದಲು ದೇವಿಯನ್ನ ಹಾಡು ಹೇಳುವಾಗ ನೋಡಿದ್ದರು. ನಂತರ ಅವೇ ಮೊದಲು ಸಿನಿಮಾ ಆಫರ್​ ಮಾಡಿದ್ದರು.
ಆದ್ರೆ ಸರೋಜಾ ದೇವಿ ಸಿನಿಮಾ ಆಫರ್​ರನ್ನ ತಿರಸ್ಕರಿಸಿದ್ದರು. ನಂತರದ ದಿನಗಳಲ್ಲಿ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ನಟನೆ ಮಾಡಿದರು. 60 ವರ್ಷದಲ್ಲಿ ಸುಮಾರು 200 ಚಿತ್ರಗಳಲ್ಲಿ ಅಭಿನಯಿಸಿದ್ದರು. ಆ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಅಭಿನಯ ಸರಸ್ವತಿ ಎಂದು ಬಿರುದು ಪಡೆದುಕೊಂಡರು.
ಸ್ಯಾಂಡಲ್​ವುಡ್​ನಲ್ಲಿ ಅಭಿನಯ ಸರಸ್ವತಿ ಎಂದು ಬಿರುದು ಪಡೆದುಕೊಂಡಿದ್ದರೆ, ಕಾಲಿವುಡ್​​ನಲ್ಲಿ ಕನ್ನಡದ ಗಿಳಿ ಎಂದು ಬಿರುದು ಬಂದಿತ್ತು. 1955ರಲ್ಲಿ ತನ್ನ 17ನೇ ವಯಸ್ಸಿಗೆ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು.
‘ಮಹಾಕವಿ ಕಾಳಿದಾಸ’ ಸರೋಜಾ ದೇವಿ ಅಭಿನಯದ ಮೊದಲ ಚಿತ್ರವಾಗಿದೆ. 1958ರಲ್ಲಿ ತಮಿಳಿನಲ್ಲಿ ಬಹುಬೇಡಿಕೆ ನಟಿಯಾಗಿದರು. ಅವರಿಗೆ ‘ನಾಡೋಡಿ ಮಾನಾನ್’​ ಸಿನಿಮಾ ತಮಿಳಿನಲ್ಲಿ ಸಕ್ಸಸ್​ ತಂದುಕೊಟ್ಟ ಸಿನಿಮಾ. 1959ರಲ್ಲಿ ‘ಪಾಂಡುರಂಗ ಮಾಹಾತ್ಯಂ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದರು.
1970ವರೆಗೂ ತೆಲಗು ಇಂಡಸ್ಟ್ರೀಯಲ್ಲಿ ಯಶಸ್ವಿ ನಟಿಯಾಗಿದ್ದರು. 1967ರಲ್ಲಿ ಮದುವೆಯಾದ ಬಳಿಕವೂ 1974ರವೆಗೂ ತಮಿಳಿನಲ್ಲಿ ಬೇಡಿಕೆ ನಟಿಯಾಗಿದ್ದರು.
1980ರವೆಗೂ ಕನ್ನಡ ಮತ್ತು ತೆಲುಗಿನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ಸರೋಜಾ ದೇವಿ, 1959ರಿಂದ ಬಾಲಿವುಡ್​ನಲ್ಲೂ ತನ್ನ ಛಾಪು ಮೂಡಿಸಿದ್ದರು. 161 ಸಿನಿಮಾಗಳಲ್ಲಿ ಲೀಡ್​ ರೋಲ್​ನಲ್ಲಿ ನಟಿಸಿರೋ ಅಭಿನಯ ಸರಸ್ವತಿಯಾಗಿದ್ದರು.
ಕಿತ್ತೂರುರಾಣಿ ಚೆನ್ನಮ್ಮ, ಅಮರಶಿಲ್ಪಿ ಜಕಣಾಚಾರಿ, ಕಥಾಸಾಗರ, ಬಬ್ರುವಾಹನ, ಭಾಗ್ಯವಂತರು, ಆಷಾಡಭೂತಿ, ಶ್ರೀರಾಮಪೂಜಾ, ಕಚ ದೇವಯಾನಿ, ರತ್ನಗಿರಿ ರಹಸ್ಯ, ಕೋಕಿಲವಾಣಿ, ಸ್ಕೂಲ್‌ಮಾಸ್ಟರ್, ಪಂಚರತ್ನ, ಲಕ್ಷ್ಮೀಸರಸ್ವತಿ, ಚಿಂತಾಮಣಿ, ಭೂಕೈಲಾಸ, ಅಣ್ಣತಂಗಿ, ಜಗಜ್ಯೋತಿ ಬಸವೇಶ್ವರ, ಕಿತ್ತೂರುಚೆನ್ನಮ್ಮ, ದೇವಸುಂದರಿ, ಗೃಹಿಣಿ, ವಿಜಯನಗರದ ವೀರಪುತ್ರ, ಮಲ್ಲಮ್ಮನ ಪವಾಡ, ಶ್ರೀಕೃಷ್ಣರುಕ್ಮಿಣಿ ಸತ್ಯಭಾಮ, ಪೂರ್ಣಿಮಾ, ಪಾಪಪುಣ್ಯ, ಸಹಧರ್ಮಿಣಿ, ಶ್ರೀನಿವಾಸಕಲ್ಯಾಣ, ಚಾಮುಂಡೇಶ್ವರಿ ಮಹಿಮೆ, ಚಿರಂಜೀವಿ, ಶನಿಪ್ರಭಾವ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿ ಸರೋಜಾ ದೇವಿ ನಟಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ