/newsfirstlive-kannada/media/post_attachments/wp-content/uploads/2025/03/YOGI-ADITYANATH-1.jpg)
ಬಾಲಿವುಡ್ನಲ್ಲಿ ಚಾವಾ ಸಿನಿಮಾ ಬಂದದ್ದೇ ಬಂದದ್ದು ಔರಂಗಜೇಬನ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ. ಮೊಘಲ್ ದೊರೆಯನ್ನು ಇನ್ನಿಲ್ಲದಂತೆ ವಿರೋಧಿಸಲಾಗ್ತಿದೆ. ಈ ನಡುವೆ ಅದೇ ರಾಜನನ್ನೇ ಸಮಾಜವಾದಿ ಶಾಸಕ ಹೊಗಳಿದ್ದು ಭಾರೀ ಟೀಕೆಗೆ ಗುರಿಯಾಗಿದೆ. ಖುದ್ದು ಸಿಎಂ ಯೋಗಿ ನಮ್ಮಲ್ಲಿಗೆ ಕಳಿಸಿ ನಾವು ಉಪಚಾರ ಮಾಡ್ತೀವಿ ಅಂತಿದ್ದಾರೆ.
ಅಬು ಅಸಿಮ್ ಅಜ್ಮಿ.. ಮಹಾರಾಷ್ಟ್ರದ ಸಮಾಜವಾದಿ ಶಾಸಕ ಸದ್ಯ ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿದ್ದಾರೆ. ಬಾಲಿವುಡ್ನಲ್ಲಿ ಚಾವಾ ಸಿನಿಮಾ ಬಂದ ಬಳಿಕ ಮೊಘಲ್ ರಾಜ ಔರಂಗಜೇಬ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ. ಅದರಲ್ಲೂ ಆತನ ಕ್ರೂರತ್ವದ ಬಗ್ಗೆ ಮಹಾರಾಷ್ಟ್ರದಲ್ಲಿ ಈ ಆಕ್ರೋಶ ಕಟ್ಟೆಯೊಡೆದಿದೆ. ಇಂತ ಸಂದರ್ಭದಲ್ಲಿ ಶಾಸಕ ಅಬು ಅಜ್ಮಿ ಔರಂಗಜೇಬನನ್ನು ಹೊಗಳಿ ತೀವ್ರ ಟೀಕೆಗೊಳಗಾಗಿದ್ದಾರೆ.
ಇದನ್ನೂ ಓದಿ: ಬುಡುಬುಡಿಕೆ ವೇಷದಲ್ಲಿ ಕಿರುತೆರೆ ಸ್ಟಾರ್ ನಟಿ ದಿಢೀರ್ ಪ್ರತ್ಯಕ್ಷ.. ಈಕೆ ಯಾರು?
ಮಹಾರಾಷ್ಟ್ರ ರಾಜಕೀಯದಲ್ಲಿ ಔರಂಗಜೇಬ್ ಜಟಾಪಟಿ ತಾರಕಕ್ಕೇರಿದೆ. ಔರಂಗಜೇಬ್ ಹಿಂದೂ ವಿರೋಧಿಯಾಗಿರಲಿಲ್ಲ. ಹಿಂದೂ ದೇಗುಲ ಕಟ್ಟಿಸಿದ ಮಹಾನ್ ಚಕ್ರವರ್ತಿ ಎಂದು ಅಜ್ಮಿ ಹಾಡಿ ಹೊಗಳಿದ್ದರು. ಈ ಹೊಗಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ತಮ್ಮ ಹೇಳಿಕೆ ತೀವ್ರ ವಿವಾದದ ಸ್ವರೂಪ ಪಡೆದ ಬಳಿಕ ನನ್ನ ಹೇಳಿಕೆಗಳನ್ನು ತಿರುಚಲಾಗಿದೆ. ಔರಂಗಜೇಬನ ಬಗ್ಗೆ ನಾನು ಹೇಳಿದ್ದೆಲ್ಲವೂ ಇತಿಹಾಸದಲ್ಲಿದ್ದು. ಶಿವಾಜಿ ಮಹಾರಾಜ, ಸಂಭಾಜಿ ಮಹಾರಾಜ ಅಥವಾ ಯಾವುದೇ ಐತಿಹಾಸಿಕ ಪುರುಷರನ್ನು ಅವಹೇಳನ ಮಾಡಿಲ್ಲ. ನನ್ನ ಹೇಳಿಕೆಯಿಂದ ನೋವಾಗಿದ್ದರೆ ಹೇಳಿಕೆ ವಾಪಸ್ ಪಡೆಯುತ್ತೇನೆ ಅಂತ ಹೇಳಿದ್ದಾರೆ. ಇಷ್ಟಾದ್ರೂ ವಿವಾದದ ಕಿಡಿ ತಣ್ಣಗಾಗಿಲ್ಲ.
ಸಮಾಜವಾದಿ ಶಾಸಕ ಅಬು ಅಸಿಮ್ ಅಜ್ಮಿ ಅಮಾನತು
ಔರಂಗಜೇಬ್ ಹೊಗಳಿದ್ದ ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿಯನ್ನು ಮಹಾರಾಷ್ಟ್ರ ವಿಧಾನಸಭೆಯಿಂದ ಅಧಿವೇಶನ ಅಂತ್ಯವಾಗುವವರೆಗೆ ಅಮಾನತು ಮಾಡಲಾಗಿದೆ. ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿದೆ. ವಿಧಾನಸಭೆ ಅಧಿವೇಶನ ಮಾರ್ಚ್ 26ರ ವರೆಗೆ ನಡೆಯಲಿದೆ. ಅಲ್ಲಿವರೆಗೂ ಅಬು ಅಜ್ನಿ ಅಮಾನತಿನಲ್ಲಿರಲಿದ್ದಾರೆ.
ನಮ್ಮಲ್ಲಿಗೆ ಕಳಿಸಿ ಸರಿಯಾದ ಉಪಚಾರ ಮಾಡ್ತೇವೆಂದ ಯೋಗಿ
ಇನ್ನು ಅಬು ಅಜ್ಮಿ ವಿರುದ್ಧ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಕೂಡ ತೀವ್ರವಾಗಿ ಕಿಡಿಕಾರಿದ್ದಾರೆ. ಸಮಾಜವಾದಿ ಪಕ್ಷದಿಂದ ಆತನನ್ನು ಕಿತ್ತೆಸೆದು ಉತ್ತರ ಪ್ರದೇಶಕ್ಕೆ ಕಳಿಸಿ. ನಾವು ಉತ್ತಮ ಉಪಚಾರ ಮಾಡುತ್ತೇವೆ ಅಂತ ಗುಡುಗಿದ್ದಾರೆ. ಅಲ್ಲದೇ ಇಂತಹವರು ದೇಶದಲ್ಲಿರಲು ಯೋಗ್ಯನೇ ಅಲ್ಲ ಅಂತ ವಾಗ್ದಾಳಿ ನಡೆಸಿದ್ರು.
ಸಮಾಜವಾದಿ ಪಕ್ಷದ ನಾಯಕ, ಆ ಪಾಪಿಯನ್ನು ಪಕ್ಷದಿಂದ ತೆಗೆದು ಹಾಕಿ. ಅವರನ್ನು ನಮ್ಮ ರಾಜ್ಯಕ್ಕೆ ಕಳಿಸಿಕೊಡಿ. ಅವರಿಗೆ ಸೂಕ್ತ ವಾದ ಉಪಚಾರ ಮಾಡುತ್ತೇವೆ. ಔರಂಗಜೇಬನನ್ನು ತಮ್ಮ ನಾಯಕ ಅಂತ ತಿಳಿದವನು ಭಾರತದಲ್ಲಿರಲು ಯೋಗ್ಯನಾ? ಎಂದು ಸಿಎಂ ಯೋಗಿ ಆದಿತ್ಯನಾಥ್ ಪ್ರಶ್ನೆ ಮಾಡಿದ್ದಾರೆ.
ಹಿಂದುಗಳ ವಿರೋಧಿ ಮತ್ತು ಕ್ರೂರ ಆಡಳಿತಗಾರ ಎಂದೇ ಇತಿಹಾಸದಲ್ಲಿ ಕುಖ್ಯಾತಿಯಾಗಿರುವ ಔರಂಗಜೇಬನನ್ನು ಎಸ್ಪಿ ಶಾಸಕ ಹೊಗಳಿದ್ದಾರೆಂದು ಮಹಾರಾಷ್ಟ್ರದಲ್ಲಿ ಭಾರೀ ಕೋಲಾಹಲವೇ ಸೃಷ್ಟಿಯಾಗಿದೆ. ಸದ್ಯಕ್ಕೆ ಶಾಸಕನನ್ನು ಅಮಾನತು ಮಾಡುವ ಮೂಲಕ ಇದಕ್ಕೆ ತಣ್ಣೀರೆರಚುವ ಕೆಲಸ ಮಾಡಲಾಗಿದೆ. ಆದ್ರೆ ಸದ್ಯಕ್ಕೆ ಈ ಆಕ್ರೋಶ ತಣ್ಣಗಾಗುವ ಲಕ್ಷಣ ಕಾಣಿಸ್ತಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ