/newsfirstlive-kannada/media/post_attachments/wp-content/uploads/2025/02/mahakumbh-Bidar-Accident.jpg)
ಉತ್ತರ ಪ್ರದೇಶದ ಮಿರಾಜ್‌ಪುರ್ ಬಳಿ ಕ್ರೂಸರ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಪ್ರಯಾಗ್‌ರಾಜ್ ಮಹಾಕುಂಭಮೇಳಕ್ಕೆ ತೆರಳಿದ್ದವರಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೀದರ್ ಜಿಲ್ಲೆಯ ಲಾಡಗೇರಿ ಬಡಾವಣೆಯ 12 ನಿವಾಸಿಗಳು ಕ್ರೂಸರ್‌ನಲ್ಲಿ ಪ್ರಯಾಗ್‌ರಾಜ್ ಮಹಾಕುಂಭಮೇಳಕ್ಕೆ ತೆರಳಿದ್ದರು. ಪ್ರಯಾಗ್‌ರಾಜ್ ಮುಗಿಸಿ ಕಾಶಿ ಕಡೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮೃತಪಟ್ಟ ಐವರು ಒಂದೇ ಕುಟುಂಬದವರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ತನ್ನ ಚಟಕ್ಕಾಗಿ ಅಮ್ಮನ ಮಾಂಗಲ್ಯ ಸರದ ಮೇಲೆ ಪುತ್ರನ ಕಣ್ಣು.. ಹೆತ್ತ ತಾಯಿಗೇ ಚೂರಿ ಚುಚ್ಚಿಬಿಟ್ಟ ಪಾಪಿ
ಲಕ್ಷ್ಮೀ (56), ನೀಲಮ್ಮ (55), ಸಂತೋಷ್‌ಕುಮಾರ್ (42), ಸುನೀತಾ (42) ಮೃತ ದುರ್ದೈವಿಗಳು. ಉಳಿದ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಳೆದ ಫೆಬ್ರವರಿ 19ರಂದು ಬೀದರ್‌ನಿಂದ ಚಾಲಕ ಸೇರಿ 14 ಜನ ಕ್ರೂಸರ್‌ನಲ್ಲಿ ಪ್ರಯಾಗ್‌ರಾಜ್‌ಗೆ ತೆರಳಿದ್ದರು. ಪ್ರಯಾಗ್‌ರಾಜ್, ಕಾಶಿ ಪ್ರವಾಸ ಮುಗಿಸಿ ಅಯೋಧ್ಯೆ ಕಡೆಗೆ ತೆರಳುತ್ತಿದ್ದರು. ವಾರಣಾಸಿ ಬಳಿಯ ಮಿರಾಜ್‌ಪುರ್ ನಗರದ ಬಳಿ ಕ್ರೂಸರ್ ವಾಹನ ಲಾರಿಗೆ ಡಿಕ್ಕಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ