ಬುಲೆಟ್ ಕದ್ದು ಓಡುವಾಗ ಭೀಕರ ಅಪಘಾತ.. ಸಾರಿಗೆ ಬಸ್‌ಗೆ ಡಿಕ್ಕಿ; ಬೈಕ್ ಕಳ್ಳ ಸ್ಥಳದಲ್ಲೇ ಸಾವು

author-image
admin
Updated On
ಬುಲೆಟ್ ಕದ್ದು ಓಡುವಾಗ ಭೀಕರ ಅಪಘಾತ.. ಸಾರಿಗೆ ಬಸ್‌ಗೆ ಡಿಕ್ಕಿ; ಬೈಕ್ ಕಳ್ಳ ಸ್ಥಳದಲ್ಲೇ ಸಾವು
Advertisment
  • ಭೀಕರ ಅಪಘಾತದಲ್ಲಿ ಬುಲೆಟ್ ಬೈಕ್ ಕಳ್ಳ ಸ್ಥಳದಲ್ಲೇ ಸಾವು
  • ಮೂವರು ಬೈಕ್ ಕಳ್ಳರಿಂದ ಬೈಕ್ ಕಳ್ಳತನ ಮಾಡಿ ಎಸ್ಕೇಪ್!
  • ಮತ್ತೊಂದು ಬೈಕ್‌ನಲ್ಲಿ ಕಳ್ಳನ ಜೊತೆಯಲ್ಲೇ ಬರುತ್ತಿದ್ದ ಮತ್ತಿಬ್ಬರು

ಬುಲೆಟ್ ಬೈಕ್ ಕದ್ದು ಎಸ್ಕೇಪ್ ಆಗುತ್ತಿದ್ದ ಕಳ್ಳ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದಿರುವ ಭಯಾನಕ ಘಟನೆ ತಮಿಳುನಾಡಿನ ಕೆಲವರಪಲ್ಲಿ ಗ್ರಾಮದ ಬಳಿ ನಡೆದಿದೆ. ಭೀಕರ ಅಪಘಾತದಲ್ಲಿ ಬುಲೆಟ್ ಬೈಕ್ ಕಳ್ಳ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕರ್ನಾಟಕ, ತಮಿಳುನಾಡು ರಾಜ್ಯಗಳ ಗಡಿಭಾಗದಲ್ಲಿ ಇಂತಹದೊಂದು ಘಟನೆ ನಡೆದಿದೆ. 33 ವರ್ಷದ ಅಭಿನೇಶ್ ಪಾಡಿಯಂನ್ ಮೃತ ಬೈಕ್ ಕಳ್ಳ. ಅಭಿನೇಶ್ ಹೊಸೂರು ಸಮೀಪ ರಸ್ತೆ ಬದಿ ನಿಲ್ಲಿಸಿದ್ದ ಶೇಖರ್ ರೆಡ್ಡಿ ಎಂಬುವವರಿಗೆ ಸೇರಿದ ಬುಲೆಟ್ ಬೈಕ್ ಕದ್ದಿದ್ದ. ಮೂರು ಮಂದಿ ಬೈಕ್ ಕಳ್ಳರಿಂದ ಬುಲೆಟ್ ಬೈಕ್ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದರು.

publive-image

ಬುಲೆಟ್ ಬೈಕ್ ಕಳ್ಳತನ ಮಾಡಿ ಹೋಗುತ್ತಿದ್ದಾಗ ಕಳ್ಳರು ತಮಿಳುನಾಡು ಸರ್ಕಾರಿ ಬಸ್‌ಗೆ ಡಿಕ್ಕಿ ಹೊಡೆದಿದ್ದಾರೆ. ಬುಲೆಟ್‌ ಬೈಕ್ ಕಳ್ಳ ಬಸ್‌ಗೆ ಡಿಕ್ಕಿಯಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಹಿಂದೂಗಳಿಗೆ ಸಂಬಂಧಿಸಿದಂತೆ ಮೋದಿ ಸರ್ಕಾರಕ್ಕೆ ಮೋಹನ್ ಭಾಗವತ್ ದೊಡ್ಡ ಸಂದೇಶ 

ಮತ್ತೊಂದು ಬೈಕ್‌ನಲ್ಲಿ ಕಳ್ಳನ ಜೊತೆಯಲ್ಲೇ ಬರುತ್ತಿದ್ದ ಇಬ್ಬರು ಕಳ್ಳರನ್ನು ಸ್ಥಳೀಯರು ಹಿಡಿದು ನಲ್ಲೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾವನ್ನಪ್ಪಿದ ಬೈಕ್ ಕಳ್ಳನ ಮೃತದೇಹವನ್ನು ಹೊಸೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment