newsfirstkannada.com

VIDEO: ಅಮ್ಮ ನಾನು IAS ಓದ್ತೀನಿ​ ಅಂತ ಯಾವಾಗ್ಲೂ ಹೇಳುತ್ತಿದ್ಳು.. ಮಗಳ ನೆನೆದು ತಾಯಿ ಕಣ್ಣೀರು

Share :

07-09-2023

    ಬಸ್‌ ಚಾಲಕನ ನಿಯಂತ್ರಣ ತಪ್ಪಿ ನಡೆದ ಭೀಕರ ದುರಂತ

    ಮುದ್ದಾದ ಮಗಳನ್ನು ಕಳೆದುಕೊಂಡ ತಾಯಿ ಲಲಿತಾ ಆಕ್ರಂದನ

    ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ತುಳಸಿ

ಚಿಕ್ಕಮಗಳೂರು: ನಿಲ್ದಾಣದ ಬಳಿ ನಿಂತಿದ್ದ ಶಾಲಾ ಮಕ್ಕಳ ಮೇಲೆ ಖಾಸಗಿ ಬಸ್ ಹರಿದ ಘಟನೆ ತರೀಕೆರೆ ತಾಲೂಕಿನ ಸೀತಾಪುರ ಕಾವಲ್ ದುಗ್ಲಾಪುರ ಗೇಟ್​ನಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ತರೀಕೆರೆ ತಾಲೂಕಿನ ಕಾವಲ್ ದುಗ್ಲಾಪುರಟ್​ನಲ್ಲಿ ಶಾಲಾ ಮಕ್ಕಳು ಬಸ್​ಗಾಗಿ ಕಾಯುತ್ತಿದ್ದರು. ಈ ವೇಳೆ ಸ್ಪೀಡಾಗಿ ಬಂದ ಖಾಸಗಿ ಬಸ್​ ವಿದ್ಯಾರ್ಥಿನಿಗಳ ಮೇಲೆ ಹರಿದುಬಿಟ್ಟಿದೆ. ಪರಿಣಾಮ ತುಳಸಿ (15) ಎಂಬ ವಿದ್ಯಾರ್ಥಿಗಳಿಗೆ ಮೃತಪಟ್ಟಿದ್ದಾಳೆ.

ಇದನ್ನು ಓದಿ: BREAKING: ನೋಡ ನೋಡ್ತಿದ್ದಂತೆ ಶಾಲಾ ಮಕ್ಕಳಿಗೆ ಗುದ್ದಿದ ಬಸ್; ಓರ್ವ ವಿದ್ಯಾರ್ಥಿನಿ ಸಾವು, ಹಲವರಿಗೆ ಗಾಯ

ಇನ್ನು, ಪುಟ್ಟ ಮಗಳನ್ನು ಕಳೆದುಕೊಂಡಿದ್ದಕ್ಕೆ ಇಡೀ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ​ಬಾಯ್​ ಮಾಡಿ ಹೊರಟವಳು ಬಾರದ ಲೋಕಕ್ಕೆ ಹೋಗಿ ಬಿಟ್ಟಳು. ಹೆದರಿಕೆ ಆಗ್ತಿದೆ ಅಮ್ಮಾ ನೀರು ಕೊಡಿ ಅಂತಾ ಅಂತಾ ಇದ್ದಳು. ದಾರಿಯುದ್ಧಕ್ಕೂ ಮಾತಾಡುತ್ತಲೇ ಬಂದಳು. ಆದರೆ ಈಗ ನನ್ನ ಮಗಳು ಇಲ್ಲ. ನಾನು ಐಎಎಸ್​​ ಆಗ್ತೀನಿ ಅಂತ ಯಾವಾಗಲೂ ಹೇಳುತ್ತಿದ್ದಳು. ನಾನೇ ನಮ್ ಸ್ಕೂಲ್​ಗೆ ಫಸ್ಟ್​​ ಅಮ್ಮಾ ಅಂತ ಹೇಳ್ತಾ ಇದ್ದಳು. ಈಗ ನನ್ನ ಬಿಟ್ಟು ತುಳಸಿ ಹೋಗಿ ಬಿಟ್ಟಳು ಎಂದು ಮೃತ ಪುತ್ರಿಯನ್ನು ನೆನೆದು ತಾಯಿ ಲಲಿತಾ ಕಣ್ಣೀರಿಡುತ್ತಿದ್ದಾರೆ.

ಈ ಭೀಕರ ಅಪಘಾತ ನಡೆದಿದ್ದೇಗೆ..?

ಅತಿವೇಗ ಅಪಾಯಕ್ಕೆ ಆಹ್ವಾನ ಅಂತಾ ಎಷ್ಟೇ ಹೇಳಿದ್ರೂ ಕೆಲವರು ಕೇಳುವುದಿಲ್ಲ. ಅತೀ ವೇಗದಿಂದ​ತಮ್ಮ ಪ್ರಾಣಕ್ಕೂ ಪರರ ಜೀವಕ್ಕೂ ಕುತ್ತು ತಂದು ಕೊಳ್ಳುತ್ತಾರೆ. ಹೀಗೆ ಇದೀಗ ಚಿಕ್ಕಮಗಳೂರಲ್ಲೂ ಆಗಿರೋದು ಅದೇ. ಖಾಸಗಿ ಬಸ್​​ ಚಾಲಕನ ನಿಯಂತ್ರಣ ತಪ್ಪಿ ಈ ಭೀಕರ ದುರ್ಘಟನೆ ಸಂಭವಿಸಿದೆ. ಈ ಅಪಘಾತದಲ್ಲಿ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಮತ್ತೋರ್ವ ವಿದ್ಯಾರ್ಥಿನಿಗೆ ಗಂಭೀರವಾಗಿ ಗಾಯಗಳಾಗಿವೆ. ಏಕಾಏಕಿ ಬಸ್​ ಡಿಕ್ಕಿ ಹೊಡೆದ ರಬಸಕ್ಕೆ ಮನೆಯ ಮುಂಭಾಗದ ಛಾವಣಿ ಸಂಪೂರ್ಣ ಜಖಂಗೊಂಡಿದೆ. ಚಾಲಕನ ಈ ರೀತಿಯ ವರ್ತನೆಗೆ ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಬಸ್​ನ ಗಾಜುಗಳನ್ನ ಪುಡಿಪುಡಿ ಮಾಡ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಅಮ್ಮ ನಾನು IAS ಓದ್ತೀನಿ​ ಅಂತ ಯಾವಾಗ್ಲೂ ಹೇಳುತ್ತಿದ್ಳು.. ಮಗಳ ನೆನೆದು ತಾಯಿ ಕಣ್ಣೀರು

https://newsfirstlive.com/wp-content/uploads/2023/09/accidenr.jpg

Load More