/newsfirstlive-kannada/media/post_attachments/wp-content/uploads/2024/08/ACCIDENT-NELAMANGALA.jpg)
ಬೆಂಗಳೂರು: ಬೆಂಗಳೂರು- ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಮೂವರು ಕಟ್ಟಡ ಕಾರ್ಮಿಕರು ಸ್ಥಳದಲ್ಲಿಯೇ ಸಾವೀಗಾಡದ ದಾರುಣ ಘಟನೆ ನೆಲಮಂಗಲ ತಾಲೂಕಿನ ಕುಲವನಹಳ್ಳಿ ಗೇಟ್ ಬಳಿ ನಡೆದಿದೆ.
ಇದನ್ನೂ ಓದಿ:ಪ್ರಿಯಕರನ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಹೆಂಡತಿಯಿಂದ ಗಂಡನ ಕೊಲೆ; ಆಮೇಲೇನಾಯ್ತು?
ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಘಟನೆ ನಡೆದಿದೆ. 407 ಟೆಂಪೋ ರಸ್ತೆ ದಾಟುವಾಗ ವೇಗವಾಗಿ ಬಂದ ಕ್ಯಾಂಟರ್​ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟೆಂಪೋದಲ್ಲಿದ್ದ ಕಾರ್ಮಿಕರು ಹಾಗೂ ವಸ್ತುಗಳಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಐವರ ಸ್ಥಿತಿ ಚಿಂತಾಜನಕವಾಗಿದೆ. ಕ್ಯಾಂಟರ್​ನಲ್ಲಿದ್ದ ಎಲ್ಲಾ ಕಾರ್ಮಿಕರು ಉತ್ತರ ಕರ್ನಾಟಕದ ಮೂಲದವರೆಂದು ತಿಳಿದು ಬಂದಿದೆ.
/newsfirstlive-kannada/media/post_attachments/wp-content/uploads/2024/08/ACCIDENT-NELAMANGALA-1.jpg)
ಇದನ್ನೂ ಓದಿ:ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್​-ಆಟೋ ಮಧ್ಯೆ ಭೀಕರ ಅಪಘಾತ.. ತಾಯಿ ಮಕ್ಕಳು ಸಾವು, ಮೂವರು ಗಂಭೀರ
ವೀಕೆಂಡ್ ಹಿನ್ನೆಲೆ ಹೆದ್ದಾರಿಯಲ್ಲಿ ನಡೆದ ಈ ಘಟನೆ ಟ್ರಾಫಿಕ್ ಜಾಮ್​ಗೆ ಕಾರಣವಾಗಿ ಹೋಗಿತ್ತು. ಸ್ಥಳದಲ್ಲಿ ನೂರಾರು ಜನರು ಸೇರಿದ್ದರಿಂದ ಟ್ರಾಫಿಕ್ ಕಿರಿಕಿರಿ ಉಂಟಾಗಿತ್ತು. ಕೊನೆಗೆ ಕ್ರೇನ್ ಮುಖಾಂತರ ವಾಹನಗಳನ್ನು ತೆರುವುಗೊಳಿಸಿದ ನೆಲಮಂಗಲದ ಸಂಚಾರಿ ಪೊಲೀಸರು, ಉಳಿದ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಸದ್ಯ ಭೀಕರ ಅಪಘಾತದ ಪ್ರಕರಣ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ,
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us