newsfirstkannada.com

ಮೇಲ್ಸೇತುವೆಯಿಂದ ಬಸ್ ಪಲ್ಟಿ, ಐವರು ಸಾವು.. 38 ಪ್ರಯಾಣಿಕರು ಗಂಭೀರ

Share :

Published April 16, 2024 at 6:51am

    ಡ್ರೈವರ್ ವಿರುದ್ಧ ಮದ್ಯಪಾನ ಮಾಡಿದ ಆರೋಪ

    ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಬಸ್

    ಮೃತರ ಕುಟುಂಬಕ್ಕೆ 3 ಲಕ್ಷ ರೂಪಾಯಿ ಪರಿಹಾರ

ಹೆದ್ದಾರಿಯ ಮೇಲ್ಸೇತುವೆಯಿಂದ ಬಸ್ ಪಲ್ಟಿಯಾಗಿ ಐವರು ಮೃತಪಟ್ಟು 38ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಒಡಿಶಾದ ಜಾಜ್​ಪುರ ಜಿಲ್ಲೆಯಲ್ಲಿ ನಡೆದಿದೆ.

ಬಸ್​​ನಲ್ಲಿ ಮಹಿಳೆಯರು, ಮಕ್ಕಳು ಸೇರಿ ಸುಮಾರು 55 ಪ್ರಯಾಣಿಕರಿದ್ದರು. ಈ ಬಸ್ ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ಹಾಲ್ದಿಯಾಗೆ ತೆರಳುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ಬಸ್ ಬಾರಾಬತಿ ಚೌಕ್ ಬಳಿಯ ಮೇಲ್ಸೇತುವೆಯಿಂದ ಉರುಳಿ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ:RCB ಪ್ಲೇಯಿಂಗ್-11ನಲ್ಲಿ ಭಾರೀ ಬದಲಾವಣೆ; ಕಳೆದ 5 ಪಂದ್ಯಗಳಲ್ಲಿ SRHಗಿಂತ ಆರ್​ಸಿಬಿಯೇ ಹೆಚ್ಚು ಸ್ಟ್ರಾಂಗ್​..!

ನ್ಯಾಷನಲ್ ಹೈವೇ 16 ಬಳಿಯ ಬಾರ್ಬತಿಯಲ್ಲಿ ದುರ್ಘಟನೆ ನಡೆದಿದೆ. ಜಾಜ್​ಪುರ ಜಿಲ್ಲಾ ಆರೋಗ್ಯಾಧಿಕಾರಿಗಳು ಘಟನೆ ಬಗ್ಗೆ ಮಾತನಾಡಿ.. ಬಸ್​​ನ ಡ್ರೈವರ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು SCB ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯರು ಅಪಘಾತವನ್ನು ನೋಡಿದ್ದಾರೆ. ಡ್ರೈವರ್​​​ ಮದ್ಯಪಾನ ಸೇವನೆ ಮಾಡಿ ವಾಹನ ಚಲಾಯಿಸಿದ್ದಾನೆ ಎನ್ನುತ್ತಿದ್ದಾರೆ. ಈ ಬಗ್ಗೆಯೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದಿದ್ದಾರೆ.

ಬಸ್​ ನಿಲ್ದಾಣ ಸಮೀಪವೇ ಇತ್ತು. ಹೀಗಿದ್ದೂ ಆತ ಬಸ್​​ ಅನ್ನು ಅಜಾಗರೂಕತೆಯಿಂದ ಡ್ರೈವ್ ಮಾಡಿಕೊಂಡು ಹೋಗಿದ್ದಾನೆ. ಆತ ಡ್ರೈವ್ ಮಾಡುತ್ತಿದ್ದ ರೀತಿ ನೋಡಿದ್ರೆ ಮದ್ಯಪಾನ ಮಾಡಿದಂತೆ ಕಾಣುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮೃತರ ಕುಟುಂಬಕ್ಕೆ 3 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಣೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೇಲ್ಸೇತುವೆಯಿಂದ ಬಸ್ ಪಲ್ಟಿ, ಐವರು ಸಾವು.. 38 ಪ್ರಯಾಣಿಕರು ಗಂಭೀರ

https://newsfirstlive.com/wp-content/uploads/2024/04/ACCIDENT-4-1.jpg

Load More