/newsfirstlive-kannada/media/post_attachments/wp-content/uploads/2025/04/Accor.jpg)
ದೇಶದಲ್ಲಿ ಹಾಸ್ಪಿಟಾಲಿಟಿ ಕ್ಷೇತ್ರವನ್ನು ಮತ್ತಷ್ಟು ಉನ್ನತ ದರ್ಜೆಗೆ ಕೊಂಡೊಯ್ಯಲು ಎರಡು ಪ್ರಮುಖ ದೈತ್ಯ ಸಂಸ್ಥೆಗಳು ಒಂದಾಗಿವೆ. ಅತಿಥಿಗಳಿಗೆ ಅದ್ಭುತ ಸತ್ಕಾರ ನೀಡುವ ಉದ್ದೇಶದಿಂದ ಗ್ಲೋಬಲ್ ಹಾಸ್ಪಿಟಾಲಿಟಿ ಕ್ಷೇತ್ರದ ಲೀಡರ್ ಅಕ್ಕೋರ್ (Accor) ಮತ್ತು ಟ್ರಾವೆಲ್ ಕಾನ್‌ಗ್ಲೊಮರೇಟ್ ಆಗಿರುವ ಇಂಟರ್ಗ್ಲೋಬ್ (InterGlobe) ಮಹತ್ವದ ಹೆಜ್ಜೆಯನ್ನಿಟ್ಟಿವೆ.
ಈ ಎರಡೂ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅತ್ಯಂತ ವೇಗವಾಗಿ ಹಾಸ್ಪಿಟಾಲಿಟಿ ಸಂಸ್ಥೆಯನ್ನು ಬೆಳೆಸಲು ಉದ್ದೇಶಿಸಲಾಗಿದೆ. ಜೊತೆಗೆ ಹಾಸ್ಪಿಟಾಲಿಟಿ ಮಾರುಕಟ್ಟೆಯನ್ನು ಗೆಲ್ಲುವ ಮಹತ್ವಾಕಾಂಕ್ಷೆಯನ್ನು ಹೊಂದಿವೆ. ಈ ಹೊಸ ಪ್ಲಾಟ್‌ಫಾರ್ಮ್ ಮೂಲಕ 2030ರೊಳಗೆ ಅಕ್ಕೋರ್ ಬ್ರ್ಯಾಂಡ್‌ಗಳಡಿ 300 ಹೋಟೆಲ್‌ಗಳನ್ನ ನಿರ್ಮಿಸುವ ಗುರಿ ಹೊಂದಲಾಗಿದೆ.
ಇದನ್ನೂ ಓದಿ: ಸಾಲ ಪಡೆದವರಿಗೆ RBI ಸಿಹಿ ಸುದ್ದಿ.. ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲದ EMI ಕಡಿಮೆ!
ಟ್ರೀಬೋ ಜೊತೆ ಪಾಲುದಾರಿಕೆ
ಟ್ರೀಬೋ (Treebo) ಭಾರತದ ಪ್ರಮುಖ ಬಜೆಟ್ ಬ್ರ್ಯಾಂಡಡ್ ಹೋಟೆಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದು. ಇದು ತನ್ನ ಟೆಕ್ ಆಧಾರಿತ ಕಾರ್ಯಗಳ ಮೂಲಕ 120 ನಗರಗಳಲ್ಲಿ 800ಕ್ಕೂ ಹೆಚ್ಚು ಹೋಟೆಲ್ಗಳನ್ನು ನಿರ್ವಹಿಸುತ್ತಿದೆ. ಈಗ ಅಕ್ಕೋರ್ ಮತ್ತು ಇಂಟರ್ಗ್ಲೋಬ್ ಸೇರಿ ಟ್ರೀಬೋದಲ್ಲಿ ಬೃಹತ್ ಹೂಡಿಕೆ ಮಾಡಲಾಗ್ತಿದೆ. ಜೊತೆಗೆ ಪ್ರಮುಖ ಷೇರು ಪಾಲುದಾರಿಕೆಯನ್ನೂ ಪಡೆಯಲಿದೆ.
ಹೊಸ ಒಪ್ಪಂದದ ಮೂಲಕ ಟ್ರೀಬೋ ಈಗ ಐಬಿಸ್ ಮತ್ತು ಮರ್ಕ್ಯೂರ್ ಬ್ರ್ಯಾಂಡ್‌ಗಳನ್ನು ಭಾರತದಲ್ಲಿ ಬೆಳೆಸಲು ಜವಾಬ್ದಾರಿ ತೆಗೆದುಕೊಳ್ಳುತ್ತಿದೆ. ಈಗಾಗಲೇ ಟ್ರೀಬೋ ಹತ್ತು ಹೊಸ ಮರ್ಕ್ಯೂರ್ ಹೋಟೆಲ್ಸ್‌ಗಾಗಿ ವಿವಿಧ ಪ್ರಾಪರ್ಟಿ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದು ಭಾರತದಲ್ಲಿನ ಬ್ರ್ಯಾಂಡ್ ವಿಸ್ತರಣೆಗೆ ದೊಡ್ಡ ಹೆಜ್ಜೆ ಎಂದು ಬಣ್ಣಿಸಲಾಗಿದೆ.
ಇದನ್ನೂ ಓದಿ: ಮಕ್ಕಳಿಗೆ ಇನ್ಸ್ಟಾಗ್ರಾಮ್ ನಿರ್ಬಂಧ.. Meta ಬಳಕೆ ಇನ್ಮೇಲೆ ಸುಲಭ ಇಲ್ಲ..
ಅಕ್ಕೋರ್‌ನ ಎಲ್ಲಾ ಬ್ರ್ಯಾಂಡ್ಗಳೂ ಟ್ರೀಬೋನ ತಂತ್ರಜ್ಞಾನ ಬಳಸಿಕೊಂಡು ಭಾರತದಲ್ಲಿರುವ ಅನೌಪಚಾರಿಕ (ಅನ್‌ಬ್ರ್ಯಾಂಡ್ಡ್) ಹೋಟೆಲ್ ಮಾರುಕಟ್ಟೆ ಮೇಲೆ ಹೊಡೆತ ನೀಡುತ್ತವೆ. ಟ್ರೀಬೋ ಮತ್ತು ಅಕ್ಕೋರ್ ಒಟ್ಟಿಗೆ ಭಾರತದಲ್ಲಿ 3ನೇ ಅತಿದೊಡ್ಡ ಹೋಟೆಲ್ ನೆಟ್‌ವರ್ಕ್ ಆಗಲಿದೆ.
ಈ ಬಗ್ಗೆ ಅಕ್ಕೊರ್ ಅಧ್ಯಕ್ಷ ಮತ್ತು ಸಿಇಓ ಸೆಬಾಸ್ಟಿಯನ್ ಬಝಿನ್ (Sebastien Bazin) ಮಾತನಾಡಿ.. ಈ ಪಾರ್ಟ್ನರ್ಶಿಪ್ ಭಾರತದ ನಮ್ಮ ಜೊತೆಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಇಂಟರ್ ಗ್ಲೋಬ್ ಮತ್ತು ಅಕ್ಕೋರ್ ಜೊತೆಗೂಡಿ ಹಾಸ್ಪಿಟಾಲಿಟಿ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯನ್ನು ಒಟ್ಟಿಗೆ ತರುವ ಮೂಲಕ ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿ ಆಗಲಿದೆ ಎಂದಿದ್ದಾರೆ.
ಇದನ್ನೂ ಓದಿ:ಬಿಲ್ ಗೇಟ್ಸ್ ಆಸ್ತಿಯಲ್ಲಿ 1% ಪಾಲು ಮಕ್ಕಳಿಗೆ, ಇನ್ನುಳಿದ 99% ಯಾರಿಗೆ ಸಿಗಲಿದೆ? ರತನ್ ಟಾಟಾ ಮಾದರಿಯೇ?
ಇಂಟರ್ ಗ್ಲೋಬ್ ಎಂಟರ್ಪ್ರೈಸಸ್ ಗ್ರೂಪ್ನ ಮ್ಯಾನೇಜಿಂಗ್ ಡೈರೆಕ್ಟರ್ ಮಾತನಾಡಿ.. ಇಂದು ನಾವು ಅಕ್ಕೊರ್ನೊಂದಿಗೆ ಪಾರ್ಟ್ನರ್ಶಿಪ್ಗೆ ಸಹಿ ಹಾಕಿದ್ದೇವೆ. ಈ ಮೂಲಕ ನಮ್ಮ ಎರಡು ದಶಕಗಳ ಸುದೀರ್ಘ ಬಾಂಧವ್ಯ ಇನ್ನಷ್ಟು ಬಲಗೊಂಡಿದೆ. ಒಟ್ಟಿಗೆ ಇಂಟರ್ ಗ್ಲೋಬ್ನ ಡೀಪ್ ಮಾರ್ಕೆಟ್ ಇನ್ಸೈಟ್, ಅಕ್ಕೊರ್ನ ವರ್ಲ್ಡ್ ಕ್ಲಾಸ್ ಸರ್ವಿಸ್, ಭಾರತದ ಡೈನಾಮಿಕ್ ಬೆಳವಣಿಗೆ ಮತ್ತು ಸದಾ ಬದಲಾಗುತ್ತಿರುವ ಪ್ರವಾಸೋದ್ಯಮ ದೃಷ್ಟಿಯಲ್ಲಿಟ್ಟುಕೊಂಡು ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ಒಳ್ಳೆಯ ಬದಲಾವಣೆ ತರುವ ನಿಟ್ಟಿನಲ್ಲಿ ಶ್ರಮಿಸಲಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಚಿನ್ನ ಖರೀದಿಸಲು ಶುಭ ಮುಹೂರ್ತ.. ಬಂದೇ ಬಿಟ್ಟಿದೆ ಅಕ್ಷಯ ತೃತೀಯ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ