newsfirstkannada.com

ಕೊಹ್ಲಿ ಬೆಸ್ಟ್​ ಬ್ಯಾಟ್ಸ್​​ಮನ್ ಅಲ್ವಾ, ಅಶ್ವಿನ್​​​ ಬೆಸ್ಟ್​ ಬೌಲರ್​​ ಅಲ್ವಾ?; ಹರ್ಭಜನ್‌ ಸಿಂಗ್‌ ಪ್ರಕಾರ ಫೈವ್​​ ಬೆಸ್ಟ್​​​ ಕ್ರಿಕೆಟರ್‌ಗಳ್ಯಾರು?

Share :

Published July 5, 2023 at 2:11pm

Update July 5, 2023 at 2:28pm

  ವಿರಾಟ್ ಕೊಹ್ಲಿ ಟೆಸ್ಟ್​ ಸಾಮ್ರಾಜ್ಯ ನಿಧಾನವಾಗಿ ಅಧಃಪತನ ಕಾಣ್ತಿದೆಯಾ?

  ಅಶ್ವಿನ್​​​ ಬೆರಳಿನಿಂದಲೇ ಬ್ಯಾಟ್ಸ್​​ಮನ್​ಗಳನ್ನ ಕಟ್ಟಿಹಾಕುವ ಮಹಾಚತುರ

  ಹರ್ಭಜನ್ ಸಿಂಗ್ ಹೇಳಿದ 'ಪಂಚ ಪಾಂಡವರು' ಬೆಸ್ಟ್​​​​ ಕ್ರಿಕೆಟರ್ಸ್​ ಅಂತೆ

ದಿ ಗ್ರೇಟ್​ ವಿರಾಟ್ ಕೊಹ್ಲಿ ಟೆಸ್ಟ್​ ಸಾಮ್ರಾಜ್ಯ ನಿಧಾನವಾಗಿ ಅಧಃಪತನ ಕಾಣ್ತಿದೆಯಾ? ದ ರೂಲರ್​ ಆಫ್​​ ಕ್ರಿಕೆಟರ್ ಈಗ ಟೆಸ್ಟ್​​​ ಬೆಸ್ಟ್ ಬ್ಯಾಟ್ಸ್​​ಮನ್ ಅಲ್ವಾ? ರನ್​ ಮೆಷಿನ್ ವೈಟ್​​ ಕ್ರಿಕೆಟ್​​​​ ಕಥೆ ಮುಗಿದೇ ಬಿಟ್ಟಿತಾ? ಇಂತಹ ಅನೇಕ ಪ್ರಶ್ನೆಗಳು ಕಾಡೋಕೆ ಶುರುವಾಗಿವೆ. ವಿರಾಟ್ ಕೊಹ್ಲಿ ಹಾಗೂ ಆರ್​​​​. ಅಶ್ವಿನ್ ಟೀಂ ಇಂಡಿಯಾದ ಎರಡು ಮುತ್ತುರತ್ನಗಳು. ಓರ್ವ ಬ್ಯಾಟಿಂಗ್ ದಿಗ್ಗಜ, ಮತ್ತೋರ್ವ ಸ್ಪಿನ್ ಮಾಂತ್ರಿಕ. ಕಿಂಗ್ ಕೊಹ್ಲಿಗೆ ಬ್ಯಾಟಿಂಗ್​​ನಲ್ಲಿ ಬೌಲರ್​​ಗಳಿಗೆ ನರಕ ದರ್ಶನ ತೋರಿಸಿದ್ರೆ, ಅಶ್ವಿನ್​​​ ಬೆರಳಿನಿಂದಲೇ ಬ್ಯಾಟ್ಸ್​​ಮನ್​ಗಳನ್ನ ಕಟ್ಟಿಹಾಕುವ ಮಹಾಚತುರ.

ವಿರಾಟ್ ಕೊಹ್ಲಿ ಬೆಸ್ಟ್​ ಟೆಸ್ಟ್​ ಬ್ಯಾಟ್ಸ್​​ಮನ್ ಅಲ್ವಾ..?
ಸ್ಪಿನ್ ಮಾಂತ್ರಿಕ ಅಶ್ವಿನ್​​​ ಬೆಸ್ಟ್​ ಬೌಲರ್​​ ಅಲ್ವಾ..?
ದಿಗ್ಗಜ ಕಿಂಗ್ ಕೊಹ್ಲಿ-ಅಶ್ವಿನ್​ ಟೆಸ್ಟ್​ ಕಥೆ ಮುಗೀತಾ..?

ಆಡು ಮುಟ್ಟದ ಸೊಪ್ಪಿಲ್ಲ ಅನ್ನೋ ಮಾತು ಎಷ್ಟು ಸತ್ಯನೋ ಕಿಂಗ್ ಕೊಹ್ಲಿ ಟೆಸ್ಟ್​​ನಲ್ಲಿ ಉಡೀಸ್ ಮಾಡದ ದಾಖಲೆಗಳಿಲ್ಲ. 15 ವರ್ಷಗಳ ಕರಿಯರ್​​ನಲ್ಲಿ 28 ಶತಕ ಸಿಡಿಸಿ ದಿ ಬೆಸ್ಟ್​​​​ ಬ್ಯಾಟ್ಸ್​​​ಮನ್​​​ ಅನ್ನೋ ಹೆಗ್ಗಳಿಕೆ ಸಂಪಾದಿಸಿದ್ದಾರೆ. ಇನ್ನು ಕೇರಂ ಸ್ಪೆಷಲಿಸ್ಟ್​​​​ ಇದೇ ಲಿಸ್ಟ್​​ಗೆ ಸೇರುವ ಮತ್ತೊರ್ವ ಲೆಜೆಂಡ್​​. 474 ವಿಕೆಟ್​​​​ ಬೇಟೆನೇ ಆ್ಯಶ್​​​​ ದಿ ಬೆಸ್ಟ್​ ಬೌಲರ್​ ಅನ್ನೋದನ್ನ ಸಾರಿ ಹೇಳುತ್ತೆ.

ಇಡೀ ಜಗತ್ತೇ ಕೊಹ್ಲಿ ಹಾಗೂ ಅಶ್ವಿನ್​ರನ್ನ ದಿ ಬೆಸ್ಟ್​​​ ಪ್ಲೇಯರ್ಸ್​ ಎಂದು ಒಪ್ಪಿಕೊಂಡಿದೆ. ಇಬ್ಬರು ದಿಗ್ಗಜರು ಅದಕ್ಕೆ ಅರ್ಹರು ಕೂಡ. ಆದರೆ ವಿಶ್ವವೇ ಇವರನ್ನ ಬೆಸ್ಟ್​​​​ ಪ್ಲೇಯರ್ಸ್​ ಎಂದು ಕೊಂಡಾಡ್ತಿರುವಾಗ, ಮಾಜಿ ಆಟಗಾರ ಹರ್ಭಜನ್ ಸಿಂಗ್ ಮಾತ್ರ ಕೊಹ್ಲಿ ಹಾಗೂ ಅಶ್ವಿನ್​ ಬೆಸ್ಟ್​​​​​​ ಪ್ಲೇಯರ್​​ಗಳಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಹೌದು, ಪ್ರಸಕ್ತ ಐದು ಬೆಸ್ಟ್​​ ಕ್ರಿಕೆಟರ್ಸ್​ ಲಿಸ್ಟ್​​ನಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್​ ಭಜ್ಜಿ, ಕೊಹ್ಲಿ-ಅಶ್ವಿನ್​ಗೆ ಸ್ಥಾನ ನೀಡದೇ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಇವರಿಬ್ಬರನ್ನು ಬಿಟ್ಟು ಭಾರತ ತಂಡದ ಮತ್ತಿಬ್ಬರನ್ನ ಹೆಸರಿಸಿದ್ದಾರೆ. ಹಾಗಾದ್ರೆ ದೂಸ್ರ ಖ್ಯಾತಿಯ ಹರ್ಭಜನ್ ಸಿಂಗ್​​​ ಪ್ರಕಾರ ಐವರು ಬೆಸ್ಟ್​ ಟೆಸ್ಟ್​ ಕ್ರಿಕೆಟರ್ಸ್​ ಯಾರು ಅನ್ನೋದನ್ನ ತೋರಿಸ್ತೀವಿ ನೋಡಿ.

‘ಪಂಚ ಪಾಂಡವರು’ ಬೆಸ್ಟ್​​​​ ಕ್ರಿಕೆಟರ್ಸ್​ ಏಕೆ..?

ನಥಾನ್​ ಲಯಾನ್​​, ಸ್ಟೀವ್ ಸ್ಮಿತ್​​, ರಿಷಬ್​​ ಪಂತ್, ರವೀಂದ್ರ ಜಡೇಜಾ ಹಾಗೂ ಬೆನ್ ಸ್ಟೋಕ್ಸ್​​​. ಈ ಪಂಚ ಪಾಂಡವರೇ ಭಜ್ಜಿ ಹೆಸರಿಸಿರುವ ಟೆಸ್ಟ್​​​ ಕ್ರಿಕೆಟ್​​ನ ಪ್ರಸಕ್ತ ಐವರು ಬೆಸ್ಟ್​ ಪ್ಲೇಯರ್ಸ್​. ಯಾಕಂದ್ರೆ ಬರೀ ಸ್ಕಿಲ್​​​ನಿಂದಷ್ಟೇ ಇವರು ಬೆಸ್ಟ್​ ಪ್ಲೇಯರ್ಸ್​ ಆಗಿಲ್ಲ. ಬದಲಿಗೆ ಗೇಮ್ ಚೇಂಜರ್ಸ್​ ಹಾಗೂ ಮ್ಯಾಚ್ ವಿನ್ನರ್ಸ್​. ಸಾಲದೆಂಬಂತೆ ಬಿಗ್​​ ಒಕೇಶನ್​​​ ಪ್ಲೇಯರ್ಸ್​ ಕೂಡ ಹೌದು. ಹೀಗಾಗಿನೇ ಕೊಹ್ಲಿ-ಅಶ್ವಿನ್​ರನ್ನ ಈ ಲಿಸ್ಟ್​​ನಿಂದ ಕಡೆಗಣಿಸಲಾಗಿದೆ.

ಕೊಹ್ಲಿ-ಅಶ್ವಿನ್​​ ಯಾಕೆ ಬೆಸ್ಟ್​​​ ಕ್ರಿಕೆಟರ್ಸ್​ ಅಲ್ಲ..?

ಭಜ್ಜಿ ಅವರ ಟಾಪ್​​​​-5 ಬೆಸ್ಟ್​ ಟೆಸ್ಟ್​ ಕ್ರಿಕೆಟರ್ಸ್​ ನೇಮ್​ ನೋಡಿ ನಿಮಗೆ ಸರ್​ಪ್ರೈಸ್ ಆಗಿರಬಹುದು. ಆದರೆ ಅವರ ಆಯ್ಕೆ ಸರಿಯಾಗಿದೆ. ಕೊಹ್ಲಿ ಮಾಡ್ರನ್ ಕ್ರಿಕೆಟ್​ ದೊರೆ ಆಗಿರಬಹುದು. ಆದರೆ ಕಳೆದ ಮೂರು ವರ್ಷಗಳಿಂದ ವೈಟ್​ ಜರ್ಸಿಯಲ್ಲಿ ಹಳೇ ಖದರ್ ಮಾಯವಾಗಿದೆ. ಱಂಕಿಂಗ್​​ನಲ್ಲಿ ಭಾರಿ ಕುಸಿತ ಕಂಡಿದ್ದಾರೆ. 2019 ರ ನವಂಬರ್‌ನಿಂದ ಇಲ್ಲಿ ತನಕ ಬರೀ ಒಂದು ಶತಕವನ್ನಷ್ಟೇ ಬಾರಿಸಿದ್ದಾರೆ. ಬಿಗ್​​ ಒಕೇಶನ್​ಗಳಲ್ಲಿ ತಂಡಕ್ಕೆ ನೆರವಾಗ್ತಿಲ್ಲ. 2021 ಹಾಗೂ 2023 ರ WTC ಫೈನಲ್​​ ಫೇಲ್ಯೂರ್ ಇದಕ್ಕೆ ಸಾಕ್ಷಿ..

ಇನ್ನು ಆರ್.​ ಅಶ್ವಿನ್​ ದರ್ಬಾರ್​​ ತವರಿಗೆ ಮಾತ್ರ ಸೀಮಿತವಾಗಿದೆ. ವಿದೇಶಿ ನೆಲದಲ್ಲಿ ಆಡಲು ಚಾನ್ಸಸ್​ ಸಿಗ್ತಿಲ್ಲ. ರವೀಂದ್ರ ಜಡೇಜಾ ಇವರನ್ನ ಓವರ್ ಟೇಕ್ ಮಾಡ್ತಿದ್ದಾರೆ. ಬ್ಯಾಟಿಂಗ್​ ಹಾಗೂ ಬೌಲಿಂಗ್​​​ನಲ್ಲಿ ಜಡ್ಡು ಪರ್ಫಾಮೆನ್ಸ್ ಅದ್ಭುತವಾಗಿದೆ. ಆಲ್​ರೌಂಡರ್ ಅಂತಾ ಬಂದ್ರೆ ಜಡೇಜಾ ಮುಂಚೂಣಿಯಲ್ಲಿದ್ದು, ವರ್ಚಸ್ಸು ಹೆಚ್ಚಿದೆ. ಹೀಗಾಗಿ ಭಜ್ಜಿ ಅವರ ಲಿಸ್ಟ್​​​ನಲ್ಲಿ ಜಡ್ಡು ಅಶ್ವಿನ್​ರನ್ನ ಹಿಂದಿಕ್ಕಿದ್ದಾರೆ.

ಟೆಸ್ಟ್​​ ಒಂದನ್ನ ಬಿಟ್ರೆ ಏಕದಿನ ಹಾಗೂ ಟಿ20 ಯಲ್ಲಿ ಕಿಂಗ್ ಕೊಹ್ಲಿಗೂ ಇಂದಿಗೂ ಬೆಸ್ಟ್ ಪ್ಲೇಯರ್​​​. ಈಗಲೂ ಆಂಗ್ರಿಯಂಗ್​ಮ್ಯಾನ್​​​​​ನಂತೆ ಬ್ಯಾಟ್ ಬೀಸಿ ರನ್​ ಗುಡ್ಡೆಹಾಕ್ತಿದ್ದಾರೆ. ಟೆಸ್ಟ್​​​ ಕ್ರಿಕೆಟ್​​ನಲ್ಲಿ ಕನ್ಸಿಸ್ಟನ್ಸಿ ಕಾಯ್ದುಕೊಂಡಿದ್ದೆ ಆದಲ್ಲಿ ವಿರಾಟ್​ ವೈಟ್​ ಜರ್ಸಿಯಲ್ಲಿ ಮತ್ತೆ ರಾರಾಜಿಸೋದು ಗ್ಯಾರಂಟಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಕೊಹ್ಲಿ ಬೆಸ್ಟ್​ ಬ್ಯಾಟ್ಸ್​​ಮನ್ ಅಲ್ವಾ, ಅಶ್ವಿನ್​​​ ಬೆಸ್ಟ್​ ಬೌಲರ್​​ ಅಲ್ವಾ?; ಹರ್ಭಜನ್‌ ಸಿಂಗ್‌ ಪ್ರಕಾರ ಫೈವ್​​ ಬೆಸ್ಟ್​​​ ಕ್ರಿಕೆಟರ್‌ಗಳ್ಯಾರು?

https://newsfirstlive.com/wp-content/uploads/2023/07/Harbhajan-Singh.jpg

Load More