ಈಕೆ ASI, ಆತ CRPC ಯೋಧ.. ಒಟ್ಟಿಗೆ ವಾಸವಿದ್ದರು, ರಾತ್ರಿ ನಡೆದ ಗಲಾಟೆಯಲ್ಲಿ ದುರಂತ ಅಂತ್ಯ

author-image
Ganesh
Updated On
ಈಕೆ ASI, ಆತ CRPC ಯೋಧ.. ಒಟ್ಟಿಗೆ ವಾಸವಿದ್ದರು, ರಾತ್ರಿ ನಡೆದ ಗಲಾಟೆಯಲ್ಲಿ ದುರಂತ ಅಂತ್ಯ
Advertisment
  • ಪಾರ್ಟ್ನರ್​ ಕತ್ತು ಹಿಸುಕಿ ಜೀವ ತೆಗೆದ ಯೋಧ
  • ಬೆಳ್ಳಂಬೆಳಗ್ಗೆ ಠಾಣೆಗೆ ಬಂದು ಶರಣಾದ ಜವಾನ
  • ಪೊಲೀಸರಿಂದ ಕೇಸ್, ತನಿಖೆ ಮುಂದುವರಿದಿದೆ

ಈಕೆ ಅಸಿಸ್ಟೆಂಟ್ ಸಬ್ ಇನ್​ಸ್ಪೆಕ್ಟರ್. ಆತ ಸಿಆರ್​ಪಿಎಫ್ ಯೋಧ. ಕಳೆದ ಎರಡು ವರ್ಷಗಳಿಂದ ಇಬ್ಬರೂ ಲೀವ್-ಇನ್ ಪಾರ್ಟ್ನರ್ ಆಗಿದ್ದರು. ಕಳೆದ ಶುಕ್ರವಾರ ರಾತ್ರಿ ಅದೇನು ಆಯ್ತೋ ಗೊತ್ತಿಲ್ಲ. ಇಬ್ಬರ ಮಧ್ಯೆ ಶುರುವಾದ ಜಗಳಲ್ಲಿ ಮಹಿಳಾ ಪೊಲೀಸ್​ ಅಧಿಕಾರಿ ಜೀವ ಕಳೆದುಕೊಂಡಿದ್ದಾಳೆ.

ಅರುಣಾ ನಟುಭಾಯಿ ಜಾಧವ್ ಜೀವ ಕಳೆದುಕೊಂಡ ಮಹಿಳಾ ಪೊಲೀಸ್ ಅಧಿಕಾರಿ. ಇವರು ಗುಜರಾತ್ ರಾಜ್ಯದ ಕಚ್ ಜಿಲ್ಲೆಯಲ್ಲಿ ASI ಆಗಿ ನಿಯೋಜನೆಗೊಂಡಿದ್ದರು. ದಿಲೀಪ್ ದಂಗ್ಚಿಯಾ, ಆರೋಪಿತ ಸಿಆರ್​ಪಿಸಿ (Central Reserve Police Force) ಜವಾನ್.

ಇದನ್ನೂ ಓದಿ: 20 ವರ್ಷಗಳಿಂದ ಕೋಮಾದಲ್ಲಿದ್ದ ಸೌದಿ ರಾಜಕುಮಾರ ಇನ್ನಿಲ್ಲ.. ಸ್ಲೀಪಿಂಗ್ ಪ್ರಿನ್ಸ್​ಗೆ ಏನಾಗಿತ್ತು?

ಇವರಿಬ್ಬರು ಗುಜರಾತ್​​ನ ಸುರೇಂದ್ರ ನಗರದ ಗಂಗೋತ್ರಿ ಸೊಸೈಟಿ-2ಯಲ್ಲಿ ವಾಸವಿದ್ದರು. ಕಳೆದ ಶುರುಕ್ರವಾರ ರಾತ್ರಿ ಇಬ್ಬರ ಮಧ್ಯೆ ಗಲಾಟೆ ಆಗಿದೆ. ಗಲಾಟೆ ಜೋರಾಗಿ, ದಿಲೀಪ್ ತಾಳ್ಮೆ ಕಳೆದುಕೊಂಡಿದ್ದಾನೆ. ಏಕಾಏಕಿ ಅರಣಾ ಅವರು ಕತ್ತು ಹಿಸುಕಿದ್ದಾರೆ. ಪರಿಣಾಮ ಅರುಣಾ ಜೀವಕಳೆದುಕೊಂಡಿದ್ದಾಳೆ.

ಮಾರನೇಯ ದಿನ ದಿಲೀಪ್ ಅಂಜರ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸ್ತಿದ್ದಾರೆ.

ಇದನ್ನೂ ಓದಿ: ‘ಇಲ್ಲ, ಇಲ್ಲ ಇನ್ನೂ ಉಸಿರು ಇದೆ..’ ಪ್ರಿಯಕರ ಬಾವನಿಗೆ ಚಾಟ್ ಮಾಡುತ್ತಲೇ ಪತಿಯನ್ನ ಮುಗಿಸಿದ ಪತ್ನಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment