newsfirstkannada.com

ಬೆಂಗಳೂರಲ್ಲಿ ಭಯಾನಕ ಹತ್ಯೆ.. ಮಚ್ಚಿನಿಂದ ತುಂಡು ತುಂಡಾಗಿ ಕತ್ತರಿಸಿದ ಸ್ನೇಹಿತ; ಕಾರಣವೇನು?

Share :

Published June 8, 2024 at 4:01pm

    ಥಣಿಸಂದ್ರದ ಅಂಜನಾದ್ರಿ ಲೇಔಟ್​ನಲ್ಲಿ ವಾಸವಿದ್ದ ಮೃತ ಕೆ.ವಿ.ಶ್ರೀನಾಥ್

    ಸಂಪಿಗೇಹಳ್ಳಿ ಪೊಲೀಸ್​ ಅಧಿಕಾರಿಗಳಿಂದ ಕೊಲೆಯ ಕೃತ್ಯ ಬಯಲಿಗೆ

    ರಾಮಮೂರ್ತಿನಗರ ಪೊಲೀಸರಿಂದ ಮೃತದೇಹ ತುಂಡುಗಳಿಗಾಗಿ ಹುಡುಕಾಟ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಭಯಾನಕ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೆ.ವಿ.ಶ್ರೀನಾಥ್ (34) ಎಂಬ ವ್ಯಕ್ತಿಯನ್ನು ಮನೆಯಲ್ಲೇ ತುಂಡು ತುಂಡಾಗಿ ಕತ್ತರಿಸಿ ಮೋರಿಗೆ ಎಸೆಯಲಾಗಿದೆ. ಮೂರು ದಿನದಿಂದ ಹುಡುಕಿದರೂ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಈ ಘಟನೆಯೂ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಧವ ರಾವ್ ಎಂಬಾತ ಈ ಕೊಲೆ ಮಾಡಿದ್ದಾನೆ. ಸದ್ಯ ಸಂಪಿಗೇಹಳ್ಳಿ ಪೊಲೀಸರಿಂದ ಭಯಾನಕ ಕೊಲೆಯ ಕೃತ್ಯ ಬೆಳಕಿಗೆ ಬಂದಿದೆ.

ಇದನ್ನೂ  ಓದಿ: 6 ತಿಂಗಳ ಹಿಂದೆಯೇ ಡಿವೋರ್ಸ್​ಗೆ ನಿರ್ಧಾರ, ರಾಜಿ ಪಂಚಾಯ್ತಿ ಮಾಡಿದ್ರು; ವಕೀಲೆ ಅನಿತಾ ಏನಂದ್ರು ಗೊತ್ತಾ?

ಆರೋಪಿ ಮಾಧವ್ ರಾವ್

ಅಷ್ಟಕ್ಕೂ ಆಗಿದ್ದೇನು..?

ಥಣಿಸಂದ್ರದ ಅಂಜನಾದ್ರಿ ಲೇಔಟ್​ನಲ್ಲಿ ಮೃತ ಕೆ.ವಿ.ಶ್ರೀನಾಥ್ ವಾಸವಾಗಿದ್ದ. ಬಸವೇಶ್ವರ ನಗರದಲ್ಲಿರೋ ಮಾರ್ಗದರ್ಶಿ ಚಿಟ್ ಫಂಡ್​ನಲ್ಲಿ ಡೆವಲಪ್ಮೆಂಟ್ ಆಫೀಸರ್ ಆಗಿದ್ದ. ಹೀಗೆ ಕೆಲಸಕ್ಕೆಂದು ಮೇ 28ರ ಬೆಳಗ್ಗೆ ಮನೆಯಿಂದ ಹೊರ ಹೋಗಿದ್ದ. ಆದರೆ ರಾತ್ರಿ ಎಷ್ಟೊತ್ತಾದರೂ ಶ್ರೀನಾಥ್ ಮನೆಗೆ ವಾಪಸ್ ಆಗಿರಲ್ಲ. ಈ ಸಂಬಂಧ ಶ್ರೀನಾಥ್ ಪತ್ನಿ ಮೇ.29ರಂದು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಕೆ.ವಿ.ಶ್ರೀನಾಥ್ ಮೇ.28ರಂದು ಕೆ.ಆರ್.ಪುರಂನ ವಿಜಿನಪುರದಲ್ಲಿರೋ ಮಾಧವರಾವ್ ಮನೆಗೆ ಹೋಗಿರೋದು ಪತ್ತೆಯಾಗಿದೆ. ಸಿಸಿಟಿವಿಯಲ್ಲಿ ಮಾಧವರಾವ್ ಮನೆಗೆ ಶ್ರೀನಾಥ್ ಎಂಟ್ರಿ ಆಗಿರುವುದು ಗೊತ್ತಾಗಿದೆ.

ಇದನ್ನೂ  ಓದಿ: ಉಪ್ಪಿನಕಾಯಿ ಮಾರಾಟದಿಂದ ಸಾಮ್ರಾಜ್ಯ ಕಟ್ಟಿದ ಧೀಮಂತ.. ರಾಮೋಜಿ ರಾವ್ ಬದುಕಿನ ರೋಚಕ ಕಥೆ ಇಲ್ಲಿದೆ

ಆದ್ರೆ ಕೆ.ವಿ.ಶ್ರೀನಾಥ್ ಮನೆಯಿಂದ ಹೊರಗೆ ಹೋಗುವುದು ರೆಕಾರ್ಡ್ ಆಗಿರಲಿಲ್ಲ. ಜೊತೆಗೆ ಮನೆಯ ಒಳಗಡೆ ಪರಿಶೀಲನೆ ಮಾಡಿದಾಗ ರಕ್ತದ ಕಲೆಗಳು ಪತ್ತೆಯಾಗಿದ್ವು. ಇದರಿಂದ ಮಾಧವರಾವ್ ಬಗ್ಗೆ ವಿಚಾರಿಸಿದಾಗ ಆತನೂ ನಾಪತ್ತೆಯಾಗಿದ್ದ. ಬಳಿಕ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಮಾಧವರಾವ್​ನನ್ನು ಪತ್ತೆ ಹಚ್ಚಿ ಕರೆ ತಂದಿದ್ದಾರೆ. ಬಳಿಕ ಪೊಲೀಸರ ವಿಚಾರಣೆ ವೇಳೆ ಮಾಧವರಾವ್ ಅಸಲಿ ವಿಚಾರ ಬಿಚ್ಚಿಟ್ಟಿದ್ದಾನೆ. ಮಾಧವರಾವ್ ಮತ್ತು ಕೆ.ವಿ.ಶ್ರೀನಾಥ್​ಗೆ ಎರಡು ವರ್ಷದಿಂದ ಪರಿಚಯ ಇತ್ತು.

ಶ್ರೀನಾಥ್ ಬಳಿ ಮಾಧವರಾವ್ 5 ಲಕ್ಷ ರೂಪಾಯಿ ಹಣದ ಚೀಟಿ ಹಾಕಿದ್ದ. ಈ ಚೀಟಿ ಹಣದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗುತ್ತಿತ್ತು. ಚೀಟಿ ಹಣ ವಾಪಸ್ ಕೊಡುವಂತೆ ಮಾಧವರಾವ್​ಗೆ ಶ್ರೀನಾಥ್​ ಒತ್ತಾಯ ಮಾಡುತ್ತಿದ್ದನಂತೆ. ಅಷ್ಟಲ್ಲದೇ ಮಾಧವ್ ರಾವ್ ಪತ್ನಿ ಜೊತೆ ಕೆ.ವಿ.ಶ್ರೀನಾಥ್​ಗೆ ಅಕ್ರಮ ಸಂಬಂಧ ಇತ್ತಂತೆ. ಹೀಗಿರುವಾಗ ಮೇ.28ರಂದು ಬೆಳಗ್ಗೆ ಮಾಧವರಾವ್ ಮನೆಗೆ ಕೆ.ವಿ.ಶ್ರೀನಾಥ್ ಬಂದಿದ್ದಾನೆ. ಇದೇ ವೇಳೆ ಮನೆಯಲ್ಲಿ ಇಬ್ಬರಿಗೂ ಹಣದ ವಿಚಾರಕ್ಕೆ ಗಲಾಟೆ ಆಗಿದೆ. ಬಳಿಕ ಮಾಧವರಾವ್ ಮನೆಯಲ್ಲಿದ್ದ ಜಾಕ್ ರಾಡ್​ನಿಂದ ಶ್ರೀನಾಥ್ ತಲೆಗೆ ಹೊಡೆದಿದ್ದಾನೆ. ಹೀಗಾಗಿ ಶ್ರೀನಾಥ್​​ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಬಳಿಕ ಮಾಧವರಾವ್ ದೇಹವನ್ನು ಮಚ್ಚಿನಿಂದ ತುಂಡು ತುಂಡಾಗಿ ಕತ್ತರಿಸಿ, ಸಾಕ್ಷಿ ನಾಶ ಮಾಡಲು ಮೃತದೇಹವನ್ನ ಮೂರು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದಾನೆ. ಬಳಿಕ ಮೊದಲು ಒಂದು ಬ್ಯಾಗ್​, ನಂತರ ಎರಡು ಬ್ಯಾಗ್​ಗಳಲ್ಲಿ ಮೃತದೇಹದ ತುಂಡುಗಳನ್ನ ಬೆಳತ್ತೂರು ಬಳಿಯ ಮೋರಿಯಲ್ಲಿ (ಪಿನಾಕಿನಿ ನದಿ) ಬಿಸಾಕಿದ್ದಾನೆ. ನಂತರ ತನ್ನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಮಾದವರಾವ್ ಆಂಧ್ರ ಪ್ರದೇಶಕ್ಕೆ ಎಸ್ಕೇಪ್ ಆಗಿದ್ದಾನೆ. ಸದ್ಯ ಈ ಪ್ರಕರಣ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಏಕೆಂದರೆ ಕೊಲೆ ಮಾಡಿದ ಘಟನಾ ಸ್ಥಳ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದೆ.

ಈ ಸಂಬಂಧ ರಾಮಮೂರ್ತಿನಗರ ಪೊಲೀಸರು ಕೊಲೆ (302) ಮತ್ತು ಸಾಕ್ಷಿ ನಾಶ (201)ಅಡಿ ಕೇಸ್ ದಾಖಲಿಸಿಕೊಂಡು ಪೊಲೀಸರಿಂದ ಶ್ರೀನಾಥ್​ ಮೃತದೇಹದ ತುಂಡುಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ. ಕಳೆದ ಮೂರು ದಿನದಿಂದ ಪೊಲೀಸರು ಶ್ರೀನಾಥ್​ ಮೃತದೇಹದ ತುಂಡಗಳಿಗಾಗಿ ಹುಡುಕಾಡ ನಡೆಸುತ್ತಿದ್ದಾರೆ. ಆದ್ರೆ ಮೃತದೇಹ ಹುಡುಕಲು ಮಂಗಳೂರಿನಿಂದ ನುರಿತರನ್ನ ಕರೆಸಿದರೂ ಸಿಕ್ಕಿಲ್ಲ. ಮೋರಿಯಲ್ಲಿ ಮೃತದೇಹದ ತುಂಡುಗಳು ಕೊಚ್ಚಿಕೊಂಡು ಹೋಗಿವೆ ಅಂತ ಶಂಕಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಭಯಾನಕ ಹತ್ಯೆ.. ಮಚ್ಚಿನಿಂದ ತುಂಡು ತುಂಡಾಗಿ ಕತ್ತರಿಸಿದ ಸ್ನೇಹಿತ; ಕಾರಣವೇನು?

https://newsfirstlive.com/wp-content/uploads/2024/06/bng-death2.jpg

Load More