ಹುಟ್ಟೂರಿಗೆ ದ್ರೋಹ.. ರೈಸ್ ಪುಲ್ಲಿಂಗ್, ಟ್ಯಾಕ್ಸ್​​ ಹೆಸರಲ್ಲಿ ಇಡೀ ಊರಿಗೆ ಪಂಗನಾಮ, ಕೋಟಿ ಕೋಟಿ ಹಣ ವಂಚನೆ!

author-image
Bheemappa
Updated On
ಹುಟ್ಟೂರಿಗೆ ದ್ರೋಹ.. ರೈಸ್ ಪುಲ್ಲಿಂಗ್, ಟ್ಯಾಕ್ಸ್​​ ಹೆಸರಲ್ಲಿ ಇಡೀ ಊರಿಗೆ ಪಂಗನಾಮ, ಕೋಟಿ ಕೋಟಿ ಹಣ ವಂಚನೆ!
Advertisment
  • ಮನಿ ಡಬ್ಲಿಂಗ್ ಆಮಿಷವೊಡ್ಡಿ ನೂರಾರು ಜನರಿಗೆ ಮೋಸ
  • ಕೋಟ್ಯಂತರ ರೂಪಾಯಿ ವಂಚಿಸಿ ಜನರಿಗೆ ಮಕ್ಮಲ್​ ಟೋಪಿ
  • ಇನ್​ಕಮ್ ಟ್ಯಾಕ್ಸ್​ ಹೆಸರಲ್ಲಿ ವಂಚಿಸಿದ್ದ ಖತರ್ನಾಕ್ ಕಿಲಾಡಿ

ಬೆಳಗ್ಗೆ ಎದ್ದರೇ ಸಾಕು ಒಂದಲ್ಲ ಒಂದು ವಂಚನೆ ಪ್ರಕರಣವನ್ನ ಕೇಳ್ತಾನೆ ಇರುತ್ತೇವೆ. ಮೋಸದ ಜಾಲಗಳ ಬಗ್ಗೆ ಎಚ್ಚರಿಸುತ್ತಲೇ ಇರುತ್ತೇವೆ. ಆದ್ರೆ ಮೋಸ ಹೋಗುವ ಜನರ ಸಂಖ್ಯೆ ಮಾತ್ರಾ ಕಡಿಮೆ ಆಗುತ್ತಿಲ್ಲ. ಹೀಗೆ ಮಂಡ್ಯದ ವಂಚಕನೊಬ್ಬ ಮನಿ ಡಬ್ಲಿಂಗ್ ಹೆಸರಲ್ಲಿ 250ಕ್ಕೂ ಹೆಚ್ಚು ಜನರಿಗೆ ಉಂಡೆನಾಮ ಹಾಕಿದ್ದಾನೆ.

ಮಂಡ್ಯದಲ್ಲಿ ರೈಸ್ ಪುಲ್ಲಿಂಗ್ ಹೆಸರಲ್ಲಿ ಮಕ್ಮಲ್ ಟೋಪಿ

ಸಾಲ ಮಾಡಿಯಾದರೂ ತುಪ್ಪ ತಿನ್ನು ಅನ್ನೋ ಮಾತು ಇಲ್ಲಿ ನಿಜ ಅನಿಸುತ್ತೆ. ಆದ್ರೆ ಇಲ್ಲೊಬ್ಬ ಆಸಾಮಿ ಮೋಸ ಮಾಡಿಯಾದರೂ ದುಡ್ಡು ಮಾಡೋ ಅನ್ನೋದನ್ನು ತನ್ನ ಮನೆ ದೇವರು ಮಾಡ್ಕೊಂಡಿದ್ದಾನೆ. ಮುಗ್ದ ಜನರನ್ನ ಟಾರ್ಗೆಟ್ ಮಾಡಿದ್ದ ಆರೋಪಿ ನಾಗರಾಜು ಜನರಿಗೆ ನೀವು ಹಣ ಕೊಟ್ರೆ ಡಬಲ್​ ಮಾಡಿ ಕೊಡ್ತೀನಿ ಅಂತಾ ಕೋಟ್ಯಾಂತರ ರೂಪಾಯಿ ವಂಚಿಸಿ ಮಕ್ಮಲ್​ ಟೋಪಿ ಹಾಕಿದ್ದಾನೆ.

publive-image

ಒಂದು ಚೊಂಬಿನ ಕತೆ!

  • ಮಂಡ್ಯ ಜಿಲ್ಲೆಯ ದ್ಯಾಪಸಂದ್ರ ಗ್ರಾಮದ ಆರೋಪಿ ನಾಗರಾಜು
  • ಸದ್ಯ, ಮೈಸೂರಿನಲ್ಲಿ ವಾಸ, ಆದ್ರೆ ಹುಟ್ಟೂರಿನೊಂದಿಗೆ ಸಂಪರ್ಕ
  • ಕೆರಗೋಡು, ಬಸರಾಳು ವ್ಯಾಪ್ತಿ ಗ್ರಾಮಸ್ಥರೇ ಈತನ ಟಾರ್ಗೆಟ್
  • 1 ಲಕ್ಷ ಕೊಟ್ರೆ ಎರಡು ಲಕ್ಷ ಹಣ ಡಬಲ್ ಮಾಡ್ತೀನಿ ನಂಬಿಸಿದ್ದ
  • ಇನ್‌ಕಮ್ ಟ್ಯಾಕ್ಸ್‌ನಿಂದ 240 ಕೋಟಿಯಷ್ಟು ಹಣ ಬರಬೇಕಿದೆ
  • ಟ್ಯಾಕ್ಸ್ ಪಾವತಿ ಮಾಡಿದ್ರೆ ಆ ಹಣ ನನ್ನ ಖಾತೆಗೆ ಜಮೆ ಆಗುತ್ತೆ
  • ನಕಲಿ ಇನ್‌ಕಮ್ ಟ್ಯಾಕ್ಸ್ ಪತ್ರ ತೋರಿಸಿ ನಂಬಿಸಿ ಹಣ ಪೀಕಿದ್ದ
  • 250ಕ್ಕೂ ಅಧಿಕ ಜನರಿಂದ ಒಟ್ಟು 2.5 ಕೋಟಿ ಹಣ ಪಡೆದಿದ್ದನು
  • ಹಣ ವಾಪಸ್​​ ಕೇಳ್ದಾಗ ನಾಗರಾಜು ರೈಸ್​​ ಪುಲ್ಲಿಂಗ್​ ಕತೆ ಹೇಳಿದ್ದ
  • ರೈಸ್‌ ಪುಲ್ಲಿಂಗ್ ಚೊಂಬು ತೋರಿಸಿ ಕೋಟಿಗಟ್ಟಲೇ ಬೆಲೆ ಇದೆ
  • ಇದನ್ನ ಮಾರಾಟ ಮಾಡಿ ದುಪ್ಪಟ್ಟು ಹಣ ಕೊಡೋದಾಗಿ ಹೇಳಿದ್ದ
  • ನಕಲಿ ವಿಜ್ಞಾನಿಗಳಿಂದ ನಕಲಿ ಚೊಂಬು ಪ್ರದರ್ಶಿಸಿ ಪಂಗನಾಮ
  • ನಾಗರಾಜ್ ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ಜನ

ಇದನ್ನೂ ಓದಿ: ಕಪಿಲ್ ಶರ್ಮಾ ಕೇವಲ ಕಾಮಿಡಿಯನ್ ಅಷ್ಟೇ ಅಲ್ಲ.. ನೂರಾರು ಕೋಟಿ ರೂಪಾಯಿಗಳ ಒಡೆಯ!​

publive-image

‘ಇನ್​​ಕಮ್​ ಟ್ಯಾಕ್ಸ್​​ ಪತ್ರ ತೋರಿಸಿ ವಂಚನೆ’

ಸದ್ಯ ವಂಚಕನ ಮಾತು ನಂಬಿ ಮೋಸಹೋದ ಜನರು. ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಆರೋಪಿ ನಾಗರಾಜ್‌ನನ್ನ ಬಂಧಿಸಿರುವ ಪೊಲೀಸರೇ ಆತನ ಮೋಸದಾಟದ ಕಥೆ ಕೇಳಿ ಅಕ್ಷರಶಃ ಶಾಕ್ ಆಗಿದ್ದಾರೆ. ಅದೇನ್​​ ಇರಲಿ ಜನ ಎಲ್ಲಿವರೆಗೂ ಮೋಸ ಹೋಗ್ತಾರೋ ಅಲ್ಲಿಯವರೆಗೂ ಇಂಥ ನಾಗರಾಜ್​ ನಂತವರು ಮೋಸ ಮಾಡ್ತಾರೆ. ಸೋ ಬಿ ಅಲರ್ಟ್.​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment