/newsfirstlive-kannada/media/post_attachments/wp-content/uploads/2024/12/Dk-Suresh-Actor-Dharma-Case.jpg)
ಬೆಂಗಳೂರು: ಕಾಂಗ್ರೆಸ್ ನಾಯಕ ಡಿ.ಕೆ ಸುರೇಶ್ ತಂಗಿ ಅಂತ ನಂಬಿಸಿ ಖತರ್ನಾಕ್ ದಂಪತಿ ಚಿನ್ನದ ವ್ಯಾಪಾರಿಗಳಿಗೆ ಕೋಟಿ ಕೋಟಿ ನಾಮ ಹಾಕಿರುವ ಆರೋಪ ಕೇಳಿ ಬಂದಿದೆ. ಸುಮಾರು 10 ಕೋಟಿ ಮೌಲ್ಯದ 14 ಕೆಜಿಗೂ ಅಧಿಕ ಚಿನ್ನ ಪಡೆದು ವಂಚಿಸಿದ್ದಾರೆ ಎಂದು ದೂರು ದಾಖಲಿಸಲಾಗಿದೆ. ಸ್ಯಾಂಡಲ್‌ವುಡ್ ನಟ ಧರ್ಮೇಂದ್ರ ಹೆಸರು ಕೂಡ ಈ ಕೇಸ್‌ನಲ್ಲಿ ತಗ್ಲಾಕ್ಕೊಂಡಿದೆ.
ನೋಡೋಕೆ ಹೈ-ಫೈ ಫ್ಯಾಮಿಲಿಯಂತೆ ಪೋಸ್ ಕೊಡುವ ಈಕೆಯ ಹೆಸರು ಐಶ್ವರ್ಯ ಗೌಡ @ ನವ್ಯಶ್ರೀ. ಆರ್ ಆರ್ ನಗರದ ನಿವಾಸಿ. ಕತ್ತಲ್ಲಿರುವ ರಾಶಿ, ರಾಶಿ ಚಿನ್ನದ ಒಡವೆ ನೋಡಿದ್ರೆ ಸಾಕು ಯಾರೇ ಆದ್ರೂ ಯಾಮಾರ್ತಾರೆ. ಅಂತದ್ರಲ್ಲಿ ಈಕೆಯ ಜೊತೆ ಮಾಜಿ ಸಂಸದ ಡಿ.ಕೆ ಸುರೇಶ್ ಹೆಸರು ಸೇರಿದ್ರೆ ಏನೆಲ್ಲಾ ಮಾಡಬಹುದು ಅನ್ನೋದಕ್ಕೆ ಈ ಕೇಸ್ ಬೆಸ್ಟ್ ಎಕ್ಸಾಂಪಲ್.
ಡಿ.ಕೆ ಸುರೇಶ್ ಸಹೋದರಿ ಎಂದು ನಂಬಿಸಿ ಕೋಟಿ ಕೋಟಿ ವಂಚನೆ
9 ಕೋಟಿ 82 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಖರೀದಿಸಿ ಪಂಗನಾಮ
ಮಾಜಿ ಸಂಸದ ಡಿ.ಕೆ ಸುರೇಶ್ ತಂಗಿ ಹಾಗೂ ಉದ್ಯಮಿ ಅಂತ ಹೇಳಿಕೊಂಡು ಈ ಐಶ್ವರ್ಯ ಗೌಡ ವಾರಾಹಿ ಚಿನ್ನಾಭರಣ ಮಳಿಗೆ ಮಾಲೀಕರಿಗೆ 9 ಕೋಟಿ ರೂಪಾಯಿಗೂ ಅಧಿಕ ಹಣ ವಂಚಿಸಿರೋ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ ಮಾಲೀಕರಾದ ವನಿತಾ ಐತಾಳ್, ವಂಚಕಿ ಐಶ್ವರ್ಯ ಹಾಗೂ ಹರೀಶ್ ಕೆ ಎಂಬ ದಂಪತಿ ವಿರುದ್ಧ ದೂರು ನೀಡಿದ್ದಾರೆ.
ಕೋಟಿ ಕೋಟಿ ಪಂಗನಾಮ!
ಅಂದ ಹಾಗೆ ಈ ಐಶ್ವರ್ಯ 2023ರ ಅಕ್ಟೋಬರ್ನಿಂದ 2024 ಏಪ್ರಿಲ್ವರೆಗೆ ಹಂತ ಹಂತವಾಗಿ ಒಟ್ಟು 9 ಕೋಟಿ 82 ಲಕ್ಷ ಮೌಲ್ಯದ 14 ಕೆಜಿ 660 ಗ್ರಾಂ ಚಿನ್ನ ಪಡೆದು ವಂಚಿಸಿದ್ದಾರಂತೆ. ರಾಜಕಾರಣಿಗಳ ಮೂಲಕ ಹೆಚ್ಚಿನ ಚಿನ್ನದ ವ್ಯಾಪಾರ ಮಾಡಿಸ್ತೀನಿ ಅಂತ ನಂಬಿಸಿ ಮೋಸ ಮಾಡಿದ್ದಾರೆ. ಚಿನ್ನದ ಹಣ ಪಾವತಿಗೆ ಕೇಳಿದಾಗ ಡಿ.ಕೆ ಸುರೇಶ್ ಧ್ವನಿಯಂತೆ ಕರೆ ಮಾಡಿಸಿ ಕಾಲಾವಕಾಶ ಕೋರಿದ್ದರಂತೆ. ಆದ್ರೆ ಮತ್ತೆ ಹಣ ಕೇಳಿದಾಗ ಕೊಟ್ಟಾಗ ತಗೋಬೇಕು ಅಂತ ಧಮ್ಕಿ ಹಾಕಿದ್ದಾಳೆ ಅಂತ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಇಡೀ ಇಂಡಿಯಾದಲ್ಲೇ ನನಗೆ ನ್ಯಾಯ ಬೇಕು; ಜೈಲಿನಿಂದ ಹೊರ ಬರ್ತಿದ್ದಂತೆ ಕೆರಳಿದ ಡ್ರೋನ್ ಪ್ರತಾಪ್!
ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಮಳಿಗೆ ಮಾಲಕಿ ವನಿತಾ, ನಾವು ಕೇಸ್ ಸಂಬಂಧ ಡಿ.ಕೆ ಸುರೇಶ್ ಬಳಿ ಹೋದಾಗ ಅವರು ಕ್ರಮ ವಹಿಸುತ್ತೇವೆ ಎಂದಿದ್ದರು. ಆದ್ರೆ ಈವರೆಗೆ ಏನೂ ಆಗಿಲ್ಲ. ಪೊಲೀಸರು ರಿಕವರಿ ಮಾಡಿಕೊಡುತ್ತಾರೆ ಎಂಬ ಭರವಸೆ ಇದೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಪಾರ್ಟ್ನರ್ ಅಭಿನಯ್ ಮಾತನಾಡಿ, ಆರೋಪಿ ಐಶ್ವರ್ಯ ಲುಲು ಮಾಲ್ ಮಾಲೀಕೆ ಎಂದಿದ್ದರು. ಕೆಲ ಪೊಲೀಸರು ಹಾಗೂ ಪ್ರಭಾವಿಗಳ ಜೊತೆಗಿನ ಫೋಟೋ ತೋರಿಸಿದಾಗ ನಾವು ನಂಬಿ ಮೋಸ ಹೋದೆವು ಎಂದಿದ್ದಾರೆ.
ಡಿ.ಕೆ ಸುರೇಶ್ ಧ್ವನಿಯಲ್ಲಿ ಮಾತನಾಡಿದ್ರಾ ನಟ ಧರ್ಮೇಂದ್ರ?
ಚಿನ್ನದ ಮಳಿಗೆ ಮಾಲಕಿ ವನಿತಾ, ನಟ ಧರ್ಮೇಂದ್ರ ವಿರುದ್ಧವೂ ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲದೇ ಧರ್ಮೇಂದ್ರರಿಂದ ಡಿ.ಕೆ ಸುರೇಶ್ ಅಂತ ಕರೆ ಮಾಡಿಸಿದ್ದರು. ಬಳಿಕ ಅವರಿಂದಲೇ ಕೊಲೆ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಆದ್ರೆ ನಟ ಧರ್ಮೇಂದ್ರ ಈ ಆರೋಪ ನಿರಾಕರಿಸಿದ್ದಾರೆ.
ಡಿ.ಕೆ ಸುರೇಶ್ ಹೆಸರಿನಲ್ಲಿ ಐಶ್ವರ್ಯ ಕೋಟಿ ಕೋಟಿ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಮಾಡಿ ಕಳೆದುಕೊಂಡ ಚಿನ್ನವನ್ನ ವಾಪಸ್ ಕೊಡಿಸಬೇಕಿದೆ. ಅಲ್ಲದೇ ಇನ್ಮುಂದೆ ಯಾರಾದ್ರೂ ಪ್ರಭಾವಿಗಳ ಹೆಸರಲ್ಲಿ ನಿಮ್ಮ ಹತ್ತಿರ ವ್ಯವಹಾರಕ್ಕೆ ಬಂದ್ರೆ ಕೊಂಚ ಜಾಗರೂಕಾದ್ರೆ ಉತ್ತಮ.
ಧರ್ಮೇಂದ್ರ ಸ್ಪಷ್ಟನೆ ಏನು?
ವಾರಾಹಿ ಗೋಲ್ಡ್ ಶಾಪ್‌ನ ವನಿತಾ ಐತಾಳ್ ಅವರು ನಮ್ಮಂತಹ ಪಬ್ಲಿಕ್ ಫಿಗರ್‌ನ ಅವಮಾನ ಮಾಡೋದಕ್ಕೆ ಇಂತಹ ಕೆಲಸ ಮಾಡಿದ್ದಾರೆ. ನಾನು ಗೋಲ್ಡ್ ಖರೀದಿ ಮಾಡಿದಾಗ ಐಶ್ವರ್ಯ ಅವರ ಹತ್ರ ಹೇಳಿದೆ. ನನ್ನ ಹತ್ರ 5 ಲಕ್ಷ ರೂಪಾಯಿ ಮಾತ್ರ ಇದೆ ಮಿಕ್ಕಿದ್ದು ನಾನು ಹೇಳುತ್ತೇನೆ ನೀವು ಹೋಗಿ ತಗೊಳಿ ಅಂತ ಹೇಳಿದ್ರು. ಐಶ್ವರ್ಯ ಅವರ ಮಾತಿನಂತೆ ವನಿತಾ ಅವರು ನನಗೆ ಗೋಲ್ಡ್ ಕೊಟ್ಟು ಕಳುಹಿಸಿದ್ದಾರೆ.
ನಾನು ನನ್ನ ಗೋಲ್ಡ್‌ಗೆ ಹಣ ಕೊಡಲು ಟೈಮ್ ತೆಗೆದುಕೊಳ್ಳಲು ಐಶ್ವರ್ಯ ಗೌಡ ಅವರಿಂದ ಫೋನ್ ಮಾಡಿಸಿದ್ದೇನೆ. ನಾನು ಐಶ್ವರ್ಯ ಗೌಡ ಅವರಿಗೆ ಉಳಿದ ಹಣವನ್ನು ಕೊಟ್ಟಿದ್ದೇನೆ. ನನ್ನದು 9 ಲಕ್ಷ ರೂಪಾಯಿ ಒಡವೆ ತೆಗೆದುಕೊಂಡ ವ್ಯವಹಾರ ಮಾತ್ರ ನನಗೆ ಗೊತ್ತಿರೋದು. ವನಿತಾ ಹಾಗೂ ಐಶ್ವರ್ಯ ಅವರು ಕ್ಲೋಸ್ ಇರೋದಕ್ಕೆ ನನಗೆ ಚಿನ್ನ ಕೊಟ್ಟು ಕಳುಹಿಸಿದ್ದಾರೆ.
ಐಶ್ವರ್ಯ ಅವರಿಗೆ ದುಡ್ಡು ಕೊಟ್ಟಿದ್ದು ಅದು ಕ್ಲಿಯರ್ ಆಗಿದೆ. ವನಿತಾ ಅವರು ಈ ಮಾತನ್ನು ಹೇಳಿದ್ದಾರೆ. ಈ ಮಧ್ಯೆ ವನಿತಾ ಅವರು ನನಗೆ ಫೋನ್ ಮಾಡಿದ್ದರು. ಆಗ ನಾನು ಒಂದು ಚೂರು ಟೈಮ್ ಕೊಡಿ. ಎಲೆಕ್ಷನ್ ಟೈಮ್ ಇದು ಅಡ್ಜೆಸ್ಟ್ ಮಾಡಿಕೊಳ್ಳಿ ಅಂತ ಹೇಳಿದ್ದೇನೆ. ಒಂದು ತಿಂಗಳ ಹಿಂದೆ ಫೋನ್ ಮಾಡಿದ್ದು ನೀವು ಡಿ.ಕೆ ಸುರೇಶ್ ಅವರು ಅಂತ ತಿಳಿದುಕೊಂಡು ಗೋಲ್ಡ್ ಕೊಟ್ಟಿದ್ದು ಅಂದಿದ್ದಾರೆ.
ಇದನ್ನೂ ಓದಿ: ಡಿ.ಕೆ ಸುರೇಶ್ ತಂಗಿ ಎಂದು ₹9 ಕೋಟಿ ‘ಚಿನ್ನ’ ವಂಚನೆ.. ನಟ ಧರ್ಮೇಂದ್ರ ವಿರುದ್ಧ FIR; ಏನಿದು ಐಶ್ವರ್ಯ?
ನಾನು ಡಿ.ಕೆ ಸುರೇಶ್ ಅಂತ ಫೋನ್‌ನಲ್ಲಿ ಮಾತನಾಡಿಲ್ಲ. ದಾಖಲೆಗಳೆಲ್ಲಾ ತೆಗೆದು ನೋಡಲಿ. ಏನೇ ಸಾಕ್ಷಿ ಇದ್ರೂ ರಿಲೀಸ್ ಮಾಡಲಿ. ನನ್ನ ಫೋನ್ ನಂಬರ್‌ನಲ್ಲಿ ನಾನು ಮಾತನಾಡಿದ್ದೇನೆ. ಯಾವುದೇ ವಂಚನೆ ನಾನು ಮಾಡಿಲ್ಲ. ನಾನು ತೆಗೆದುಕೊಂಡ ಚಿನ್ನಕ್ಕೆ ಹಣ ಕೊಟ್ಟಿದ್ದೇನೆ. ಅವರು ಬೇರೆ ವ್ಯವಹಾರ ಮಾಡಿದ್ದಾರೆ. ಅದು ನನಗೆ ಗೊತ್ತಿಲ್ಲ. ಇವರ ವ್ಯವಹಾರ ನನಗೇನೂ ಗೊತ್ತಿಲ್ಲ. ನನ್ನ 25 ವರ್ಷದ ಸಿನಿಮಾ ಜೀವನದಲ್ಲಿ ಇದ್ದಾಗ ಯುಗಾದಿ ಇಲ್ಲದೆ ಇದ್ದಾಗ ಶಿವರಾತ್ರಿ ನನ್ನ ಜೀವನ. ಸಿನಿಮಾದಲ್ಲಿ ಆ್ಯಕ್ಟಿಂಗ್ ಮಾಡ್ತೀನಿ. ಬಂದ ದುಡ್ಡಲ್ಲಿ ಮನೆ ಬಾಡಿಗೆ ಕಟ್ಟುತ್ತಾ ಜೀವನ ಮಾಡುತ್ತಾ ಇದ್ದೀನಿ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ