newsfirstkannada.com

ಕೊಲೆ ನಂತ್ರ ಪೆಡಿಕ್ಯೂರ್‌, ಮೆಡಿಕ್ಯೂರ್‌ ಮಾಡಿಸಿಕೊಂಡ ಪವಿತ್ರಾ; ಪಶ್ಚಾತ್ತಾಪವೇ ಇರಲಿಲ್ವಾ?

Share :

Published June 12, 2024 at 2:57pm

Update June 12, 2024 at 3:35pm

  ರೇಣುಕಾಸ್ವಾಮಿ ಕೊಲೆ ನಂತ್ರ ಸಲೂನ್‌ಗೆ ಹೋಗಿದ್ದ ಪವಿತ್ರಾಗೌಡ

  2ರಿಂದ 3 ಗಂಟೆಗಳ ಕಾಲ ಸಲೂನ್‌ನಲ್ಲೇ ಇದ್ದ ಆರೋಪಿ ಪವಿತ್ರಾಗೌಡ

  ರೇಣುಕಾಸ್ವಾಮಿ ಸಾವಿನ ಬಳಿಕ ಪವಿತ್ರಾ ಅವರಿಗೆ ಪಶ್ಚಾತ್ತಾಪವೇ ಇರಲಿಲ್ವಾ?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾಗೌಡ ಕಂಬಿ ಹಿಂದೆ ಲಾಕ್ ಆಗಿದ್ದಾರೆ. ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ರೇಣುಕಾಸ್ವಾಮಿ ಅವರ ಕ್ರೂರ ಕೊಲೆ ಕೇಸ್‌ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ.

ಕಳೆದ ಶನಿವಾರ ಸಂಜೆ ರೇಣುಕಾಸ್ವಾಮಿ ಅವರ ಕೊಲೆ ನಡೆದಿದೆ ಎನ್ನಲಾಗಿದೆ. ಅಂದು ರೇಣುಕಾಸ್ವಾಮಿ ಕೊಲೆ ನಂತ್ರ ಎ1 ಆರೋಪಿ ಪವಿತ್ರಾಗೌಡ ಅವರು ಸಲೂನ್‌ಗೆ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಪವಿತ್ರಾಗೌಡ ಅವರು ಕೊಲೆಯಾದ ಬಳಿಕ ಕೋರಮಂಗದಲ್ಲಿರುವ ಸಲೂನ್‌ಗೆ ಭೇಟಿ ನೀಡಿದ್ದರು. ಸೋಮವಾರ ಮಧ್ಯಾಹ್ನ 2ರಿಂದ 3 ಗಂಟೆಗಳ ಕಾಲ ಸಲೂನ್‌ನಲ್ಲೇ ಇದ್ದ ಪವಿತ್ರಾಗೌಡ ಅವರು ಪೆಡಿಕ್ಯೂರ್‌, ಮೆಡಿಕ್ಯೂರ್‌ ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮೃತದೇಹ ಬಿಸಾಡುವಾಗ ನಡೆಯಿತು ಯಡವಟ್ಟು.. ಪ್ಲಾನ್ ಉಲ್ಟಾ ಹೊಡೆದಿದ್ದೇ ಇಲ್ಲಿ..! 

ರೇಣುಕಾಸ್ವಾಮಿ ಅವರ ಕೊಲೆಯಾದ ಬಳಿಕ ಆರೋಪಿ ಪವಿತ್ರಾ ಗೌಡ ಅವರಿಗೆ ಯಾವುದೇ ಪಶ್ಚಾತ್ತಾಪ ಇರಲಿಲ್ವಾ ಅನ್ನೋ ಪ್ರಶ್ನೆ ಮೂಡಿದೆ. ಭೀಕರ ಘಟನೆ ನಡೆದ ನಂತರವೂ ಸಲೂನ್‌ಗೆ ಹೋಗಿ ಪವಿತ್ರಾ ಗೌಡ ಬಂದಿದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ.

ಬಂಧನದ ಬಳಿಕ ಪವಿತ್ರಾ ಕಣ್ಣೀರು!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿ ಅರೆಸ್ಟ್ ಆಗಿರುವ ಪವಿತ್ರಾ ಗೌಡ ಅವರನ್ನು ಪೊಲೀಸರು ಮೆಡಿಕಲ್ ಚೆಕಪ್​ಗೆಂದು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ವೈದ್ಯರ ಮುಂದೆಯೇ ಪವಿತ್ರಾ ಗೌಡ ಕಣ್ಣೀರು ಹಾಕಿದ್ದಾರೆ. ಬೌರಿಂಗ್ ಆಸ್ಪತ್ರೆಯ ವೈದ್ಯರೇ ಪವಿತ್ರಾ ಗೌಡ ಕಣ್ಣೀರು ಹಾಕಿರುವ ಬಗ್ಗೆ ಮಾಹಿತಿ ನೀಡಿದ್ದು ಈ ಸಂಬಂಧದ ವಿಡಿಯೋ ಕೂಡ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

ಇದನ್ನೂ ಓದಿ: ದರ್ಶನ್‌ಗೆ ಚಿಕ್ಕಪೇಟೆ ದೊನ್ನೆ ಬಿರಿಯಾನಿ ತಂದು ಕೊಟ್ಟಿದ್ದು ನಿಜಾನಾ? ರಾಜಾತಿಥ್ಯಕ್ಕೆ ಭಾರೀ ವಿರೋಧ! 

ಪವಿತ್ರಾ ಗೌಡ ಕಣ್ಣೀರು ಒರೆಸುತ್ತಾ, ತನ್ನ ವೇಲ್‌ನಲ್ಲಿ ‌ಮುಖ ಒರೆಸುತ್ತಾ ಬರುತ್ತಿದ್ದರು. ಈ ವೇಳೆ ದರ್ಶನ್ ಅಲ್ಲೇ ಇದ್ದರೂ ಪವಿತ್ರಾ ಗೌಡರನ್ನ ಮುಖವೆತ್ತಿ ನೋಡದೇ ಹಾಗೇ ಹೋದರು. ರೇಣುಕಾಸ್ವಾಮಿ ಕೊಲೆಯಾದ ಮೇಲೆ ಪವಿತ್ರಾಗೌಡ ದರ್ಶನ್ ಮುನಿಸಿಕೊಂಡಿದ್ರಂತೆ. ನಿನ್ನಿಂದಾಗಿ ಈ ಕೊಲೆ ಮಾಡುವಂತೆ ಆಯಿತೆಂದು ಅಂದು ಬೆಳಗ್ಗೆಯೇ ಕಿಡಿ ಕಾರಿದ್ರಂತೆ. ಅಲ್ಲದೇ ಇದೇ ವಿಚಾರವಾಗಿ ಪವಿತ್ರಾಗೌಡ ಮೇಲೆ ರೇಗಾಡಿದ್ದರು. ಆದರೆ ಇದೀಗ ಎದುರಗಡೆ ಪವಿತ್ರಾ ಗೌಡ ಕಣ್ಣೀರು ಒರೆಸುತ್ತಾ ಹೋಗುತ್ತಿದ್ದರೂ ತನ್ನ ಪಾಡಿಗೆ ಲಾಯರ್ ಜೊತೆ ದರ್ಶನ್ ಬ್ಯುಸಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಲೆ ನಂತ್ರ ಪೆಡಿಕ್ಯೂರ್‌, ಮೆಡಿಕ್ಯೂರ್‌ ಮಾಡಿಸಿಕೊಂಡ ಪವಿತ್ರಾ; ಪಶ್ಚಾತ್ತಾಪವೇ ಇರಲಿಲ್ವಾ?

https://newsfirstlive.com/wp-content/uploads/2024/06/DARSHAN_PAVITRA_GOWDA_1.jpg

Load More