Advertisment

ಆರೋಪಿ ಪ್ರದೂಶ್​ ಜೊತೆ ಶೆಡ್​ಗೆ ಪದೇ ಪದೆ ಬರ್ತಿದ್ದ ಇನ್ನೊಬ್ಬ ವ್ಯಕ್ತಿ.. ವಿಐಪಿನಾ..? ಮತ್ತೊಬ್ಬ ನಟನಾ?

author-image
Ganesh
Updated On
ದರ್ಶನ್​ ಜೊತೆಗೆ ಮತ್ತೊರ್ವ ನಟ ಅರೆಸ್ಟ್​.. ರೇಣುಕಾಸ್ವಾಮಿ ಹತ್ಯೆಯಲ್ಲಿ ಈತನ ಕೈವಾಡವೇನಿತ್ತು?
Advertisment
  • ಪ್ರದೂಶ್​ ಜೊತೆ ಶೆಡ್​ಗೆ ಪದೇ ಪದೇ ಬರ್ತಿದ್ದ ವ್ಯಕ್ತಿ ಯಾರು?
  • ಪ್ರದೂಶ್​ಗೆ ಮಾತ್ರ ಆತ ಗೊತ್ತು ಎಂದು​ ಅರ್ಜಿಯಲ್ಲಿ ಉಲ್ಲೇಖ
  • ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇನ್ನೂ ಹಲವರ ಕೈವಾಡ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ನಟ ದರ್ಶನ್​​ಗೆ ಪ್ರತ್ಯಕ್ಷ ಸಾಕ್ಷಿಗಳು ಕಂಟಕವಾಗಲಿದೆಯಾ ಎಂಬ ಪ್ರಶ್ನೆಗಳು ಶುರುವಾಗಿವೆ. ಟೆಕ್ನಿಕಲ್ ಎವಿಡೆನ್ಸ್​ಗಿಂತ ಪ್ರತ್ಯಕ್ಷ ಸಾಕ್ಷಿಗಳಿಗೆ ಮಹತ್ವ ಜಾಸ್ತಿ ಇದೆ.

Advertisment

ಪೊಲೀಸರಿಗೆ ದರ್ಶನ್ ಅ್ಯಂಡ್ ಗ್ಯಾಂಗ್ ವಿರುದ್ಧ ಐ ವಿಟ್ನೆಸ್​ಗಳು ಸಿಕ್ಕಿದೆ. ನಟ ದರ್ಶನ್ ಹಲ್ಲೆ ಮಾಡಿರುವುದನ್ನ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ. ಶೆಡ್ ಸೆಕ್ಯೂರಿಟಿ ಗಾರ್ಡ್​ನಿಂದ crpc 164 ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಇಬ್ಬರು ಸಾಕ್ಷಿಗಳೇ ರೇಣುಕಾ ಹತ್ಯೆ ಕೇಸ್​ನಲ್ಲಿ ಐ ವಿಟ್ನೆಸ್ ಎಂದು ತನಿಖಾಧಿಕಾರಿಗಳು ಪರಿಗಣಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಕೊನೆಯ 10 ಓವರ್​ಗಳಲ್ಲಿ ರನ್​ ಹೊಳೆ.. ಬೂಮ್ ಬೂಮ್ ಬಿರುಗಾಳಿ ಹೆಂಗಿತ್ತು ಗೊತ್ತಾ..

publive-image

ಕೇಸ್​ ಮುಚ್ಚಿ ಹಾಕಲು ಪ್ರಯತ್ನ?
ರೇಣುಕಾ ಕೊಲೆ ಮಾಡಿದ ಬಳಿಕ ಕೇಸ್​ ಮುಚ್ಚಿಹಾಕಲು ಪ್ರಯತ್ನ ನಡೆದಿದೆಯಂತೆ. ಐ ವಿಟ್ನೆಸ್​ಗಳಿಗೆ ಹಣದ ಆಮಿಷ ಒಡ್ಡಿದ್ದಾರೆ. ಅದಕ್ಕೂ ಮೊದಲು ಎಸ್​ಪಿ ಬದಲಾವಣೆಗೂ ಭಾರೀ ಒತ್ತಡ ಹೇರಿದ್ದರು. ಸರ್ಕಾರದ ಮಟ್ಟದಲ್ಲಿ ಪ್ರಕರಣ ಮುಚ್ಚಿ ಹಾಕಲು ನಡೆಸಿದ ಪ್ರಯತ್ನ ವಿಫಲ ಆಗಿದೆ. ಇದೀಗ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಇನ್ನಿಲ್ಲದ ಸರ್ಕಸ್ ಮಾಡ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಪ್ರತ್ಯಕ್ಷ ಸಾಕ್ಷಿಗಳಿಗೆ ಹಣದ ಆಮೀಷ ಒಡ್ಡುತ್ತಿರೋರು ಯಾರು ಅನ್ನೋದ್ರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisment

ಇದನ್ನೂ ಓದಿ:ನಟ ದರ್ಶನ್​ಗೆ ಆ 2 ಪ್ರತ್ಯಕ್ಷ ಸಾಕ್ಷಿಗಳ ಕಂಟಕ..! ಐ ವಿಟ್ನೆಸ್​​ಗೆ ಭಾರೀ ಹಣದ ಆಮೀಷ..!

publive-image

ಮತ್ತೊಂದು ಕಡೆ ಆರೋಪಿ ಪ್ರದೂಶ್​ ಜೊತೆ ಮತ್ತೊಬ್ಬ ವ್ಯಕ್ತಿ ಶೆಡ್​ಗೆ ಪದೇ ಪದೆ ಬರ್ತಿದ್ದ ಅನ್ನೋ ವಿಚಾರ ಕೂಡ ಪೊಲೀಸರಿಗೆ ಸಿಕ್ಕಿದೆ. ಆದರೆ ಆ ವ್ಯಕ್ತಿ ಯಾರು ಅನ್ನೋದನ್ನು ಪೊಲೀಸರು ಎಷ್ಟೇ ಕೇಳಿದ್ರೂ ಹೇಳಿಲ್ಲ. ಈ ಬಗ್ಗೆ ನ್ಯಾಯಾಲಯಕ್ಕೆ ಪೊಲೀಸರು ಮಾಹಿತಿ ನೀಡಿದ್ದಾರೆ. ಆ ವ್ಯಕ್ತಿ ಯಾರೆಂದು ಪ್ರದೂಶ್​ಗೆ ಮಾತ್ರ ಆತ ಗೊತ್ತು ಎಂದು​ ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ. ಹಾಗಿದ್ರೆ ಆ ಅಪರಿಚಿತ ವ್ಯಕ್ತಿ ಯಾರು ನಟನಾ? ವಿಐಪಿಯಾ? ಎಂಬ ಪ್ರಶ್ನೆ ಶುರುವಾಗಿದೆ.

ಇದನ್ನೂ ಓದಿ:ಅಗಲಿದ ಕನ್ನಡಿಗನ ಮರೆಯದ ಟೀಂ ಇಂಡಿಯಾ.. ಅಫ್ಘಾನ್ ವಿರುದ್ಧ ಕಪ್ಪು ಪಟ್ಟಿ ಕಟ್ಟಿ ಆಡಿದ ರೋಹಿತ್ ಪಡೆ..

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment