/newsfirstlive-kannada/media/post_attachments/wp-content/uploads/2025/06/tiger1.jpg)
- ಆರೋಪಿಗಳನ್ನ ಪತ್ತೆಹಚ್ಚಿ ಹೆಡೆಮುರಿ ಕಟ್ಟಿದ ಅರಣ್ಯ ಇಲಾಖೆ ಅಧಿಕಾರಿಗಳು
- ನಾಲ್ಕು ಮರಿ ಹುಲಿಗಳ ಮಾರಣ ಹೋಮ ಮಾಡಿದ್ದ ಪಾಪಿಗಳು ಜೈಲಿಗೆ
- ತನಿಖೆ ವೇಳೆ ಹುಲಿಗಳನ್ನ ಕೊಂದಿದ್ದು ಹೇಗೆ ಸತ್ಯ ಬಾಯ್ಬಿಟ್ಟ ಆರೋಪಿಗಳು
ತಾಯಿ ಹುಲಿ, ನಾಲ್ಕು ಮರಿ ಹುಲಿಗಳ ಮಾರಣ ಹೋಮ ಮಾಡಿದ್ದ ಪಾಪಿಗಳನ್ನ ಪೊಲೀಸರು ಜೈಲಿಗಟ್ಟಿದ್ದಾರೆ. ಹಸುಗಳ ಮಾಲೀಕರ ಸೇಡಿಗೆ ವ್ಯಾಘ್ರನ ಇಡೀ ಕುಟುಂಬವೇ ಸರ್ವನಾಶವಾಗಿದೆ. ತನಿಖೆ ವೇಳೆ ಹುಲಿಗಳನ್ನ ಕೊಂದಿದ್ದು ಹೇಗೆ ಅನ್ನೋ ಸತ್ಯವನ್ನ ಹಂತಕರು ಬಾಯ್ಬಿಟ್ಟಿದ್ದಾರೆ.
ಇದನ್ನೂ ಓದಿ:ಶೆಫಾಲಿ ಜೀವಬಿಟ್ಟಿದ್ದು ಹೃದಯಾಘಾತದಿಂದ ಅಲ್ವಾ? ನಟಿಯ ಸಾವಿನ ಹಿಂದೆ ಹಲವು ಅನುಮಾನ..!
ಹುಲಿಗಳ ಸಂತತಿ ಕ್ಷೀಣಿಸ್ತಿರೋ ಹೊತ್ತಲ್ಲೇ ರಾಜ್ಯದಲ್ಲಿ ಐದು ಹುಲಿಗಳ ಮಾರಣ ಹೋಮ ನಡೆದಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿತ್ತು. ಸತ್ತ ವ್ಯಾಘ್ರಗಳ ಅಂತ್ಯಕ್ರಿಯೆಯ ಬೆಂಕಿ ಆರೋಕು ಮೊದಲೇ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಗಳನ್ನ ಪತ್ತೆಹಚ್ಚಿ ಹೆಡೆಮುರಿ ಕಟ್ಟಿದ್ರು.
ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದ್ದ ಹುಲಿಗಳ ಮಾರಣಹೋಮ ರಾಜ್ಯದ ಜನತೆಯನ್ನ ಬೆಚ್ಚಿ ಬೀಳಿಸಿತ್ತು. ತನಿಖೆ ಕೈತ್ತಿಕೊಂಡ ಪೊಲೀಸರು ವ್ಯಾಘ್ರಗಳ ಹಂತಕರನ್ನ ಹೆಡೆಮುರಿಕಟ್ಟಿದ್ರು. ಆರೋಪಿಗಳಾದ ಕೋನಪ್ಪ, ನಾಗರಾಜು, ಮಾದರಾಜುನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ತನಿಖೆ ವೇಳೆ ಹಂತಕರು ಸಾವಿಗೆ ಸೇಡಿನ ಕಾರಣವನ್ನ ಬಾಯ್ಬಿಟ್ಟಿದ್ದಾರೆ.
ಆರೋಪಿ ಕೋನಪ್ಪ, ಶಿವಣ್ಣ 250ಕ್ಕೂ ಹೆಚ್ಚು ಹಸುಗಳನ್ನ ಸಾಕಿದ್ದಾರೆ. ಆ ಹಸುಗಳನ್ನ ಕಾಡಿನಲ್ಲಿ ಮೇಯಿಸಲು ಇಬ್ಬರು ಯುವಕರನ್ನ ನೇಮಿಸಿದ್ದರು. ಆದರೆ, ಕಳೆದ ಭಾನುವಾರ ಹಸು ಮೇಯಿಸಲು ಯುವಕರು ಬಂದಿರಲಿಲ್ಲ. ಈ ಹಿನ್ನಲೆ ಕೋನಪ್ಪ ಮತ್ತು ಮಾದುರಾಜು ಹಸು ಮೇಯಿಸಲು ತೆರಳಿದ್ರು. ಅದೇ ವೇಳೆ ಹುಲಿಗಳ ದಾಳಿಯಿಂದ ಹಸುಗಳು ದಿಕ್ಕಪಾಲಾಗಿ ಓಡಿದ್ವು. ಹುಲಿಗಳ ದಾಳಿಯಿಂದ ಕೋನಪ್ಪ, ಮಾದುರಾಜು ಕೆರಳಿ ಕೆಂಡವಾಗಿದ್ದ. ಜೊತೆಗೆ ವಾರದ ಹಿಂದೆ ಮಾದನ ಗೂಳಿ ಮೇಲೆ ಹುಲಿ ದಾಳಿ ಮಾಡಿತ್ತು. ಆ ಕೋಪಕ್ಕೆ ಹುಲಿ ಸಾಯಿಸಿ ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡಿದ್ರು.
ಇದೆ ವೇಳೆ ಸಂಬಳ ಆಗದ್ದಕ್ಕೆ ವಾಚರ್​ಗಳು ಪ್ರತಿಭಟನೆ ಮಾಡ್ತಿರೋ ಬಗ್ಗೆ ತಿಳಿದು, ಯಾರು ಇಲ್ಲದ್ದನ್ನ ಗಮನಿಸಿ ಸತ್ತ ಹಸುವಿನ ತೊಡೆ ಭಾಗಕ್ಕೆ ವಿಷಪ್ರಾಶನ ಮಾಡಿದ್ರು. ಹಸುವಿನ ಮಾಂಸಕ್ಕೆ ಅರಿಶಿನ ಬೆಳೆಗೆ ಹಾಕುವ ಫ್ಲೋರೈಡ್ ಕ್ರಿಮಿನಾಶಕ ಸಿಂಪಡಿಸಿದ್ದರು. ಬಳಿಕ ಮಾದುರಾಜು ಹುಲಿಗಳಿಗೆ ವಿಷವಿಟ್ಟ ಬಗ್ಗೆ ಬಗ್ಗೆ ಕೋನಪ್ಪನಿಗೆ ತಿಳಿಸಿದ್ದ. ಐದು ಹುಲಿಗಳು ಸಾವನಪ್ಪಿದ್ದ ವಿಚಾರ ತಿಳಿದು ಮಾದುರಾಜು ಖುಷಿ ಪಟ್ಟಿದ್ದ.
ವ್ಯಾಘ್ರಗಳಿರೋ ಬಗ್ಗೆ ಗೊತ್ತಿದ್ರೂ ಕಾಡಿಗೆ ದನಗಳನ್ನ ಮೇಯಿಸಲು ಹೋಗಿದ್ದು ಮೊದಲ ತಪ್ಪು. ನಂತರ ಹಸುವನ್ನ ಬೇಟೆಯಾಡಿದ ಕೋಪಕ್ಕೆ ಹುಲಿಗಳಿಗೆ ವಿಷಹಾಕಿದ್ದು, ಎರಡನೇ ತಪ್ಪು. ಒಟ್ನಲ್ಲಿ, ಸೇಡು ತೀರಿಸಿಕೊಳ್ಳಲು ಹುಲಿಯ ಒಂದು ಕುಟುಂಬವನ್ನೇ ಸರ್ವನಾಶ ಮಾಡಿದ್ದು ಯಾವ ನ್ಯಾಯ ಅಲ್ವಾ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ