newsfirstkannada.com

ಪ್ರೇಯಸಿ ಮೇಲೆ ಆ್ಯಸಿಡ್​ ಹಾಕಿ ಮಾರಣಾಂತಿಕ ಹಲ್ಲೆ ಮಾಡಿದ ಪ್ರೇಮಿ; ಅಸಲಿಗೆ ಆಗಿದ್ದೇನು..?

Share :

Published May 29, 2024 at 10:14pm

Update May 29, 2024 at 11:28pm

  ಇಬ್ಬರಿಗೂ ಮದುವೆಯಾದ್ರೂ ಲಿವಿಂಗ್​ ಟುಗೆದರ್​ನಲ್ಲಿದ್ದ ಜೋಡಿ

  8 ವರ್ಷದ ಮಗಳ ಮುಖಕ್ಕೂ ಅಲ್ಪ ಪ್ರಮಾಣದಲ್ಲಿ ಸಿಡಿದ ಆಸಿಡ್

  ಈ ಇಬ್ಬರು ಪ್ರತ್ಯೇಕ ಬೇರೆ ಬೇರೆಯವರನ್ನು ಮದುವೆಯಾದವರು

ಬಾಗಲಕೋಟೆ: ಪ್ರೀತಿ ಅನ್ನೋದು ಕುರುಡು ಅಂತಾರೆ. ಆದ್ರೆ ಪ್ರೀತಿ ಮಾಡೋರು ಕುರಡಾದ್ರೆ ಬದುಕು ನರಕವಾಗುತ್ತೆ. ಇಲ್ಲೂ ಪ್ರಿಯಕರನನ್ನ ನಂಬಿ ಆಕೆ ತಾಳಿ ಕಟ್ಟಿದ ಗಂಡನನ್ನೇ ಬಿಟ್ಟು ಬಂದಿದ್ಳು. ಆದ್ರೀಗ ನಂಬಿ ಬಂದವನು ಮಾಡಿದ್ದು ಘೋರಾತಿ ಘೋರ ಕೃತ್ಯ. ಪರಿಣಾಮ ಪುಟ್ಟ ಮಗುವಿನೊಂದಿಗೆ ಆಕೆ ಆಸ್ಪತ್ರೆಯಲ್ಲಿ ನರಳಾ ಅನುಭವಿಸ್ತಿದ್ದಾಳೆ. ಪರಿಸ್ಥಿತಿ ಒತ್ತಡಕ್ಕೂ ಅಥವಾ ಅನಿವಾರ್ಯಕ್ಕೂ ಜೀವನದಲ್ಲಿ ತೆಗೆದುಕೊಳ್ಳುವ ಕೆಲ ನಿರ್ಧಾರಗಳು ಬದುಕನ್ನ ದುಸ್ಥಿತಿಗೆ ತಳ್ಳಿ ಬಿಡುತ್ತವೆ. ಹೀಗೆ ಈ ಮಹಿಳೆ ಮಾಡಿದ್ದ ಅದೊಂದು ನಿರ್ಧಾರ ಈಗ ಆಸ್ಪತ್ರೆಯಲ್ಲಿ ನರಳಾಡುವಂತೆ ಮಾಡಿದೆ.

ಇದನ್ನೂ ಓದಿ: ವಿದೇಶದಿಂದ ಬರೋ ಮುನ್ನವೇ ಪ್ರಜ್ವಲ್​ ರೇವಣ್ಣ ಮಾಸ್ಟರ್​ ಪ್ಲಾನ್​​.. ಜಾಮೀನಿಗಾಗಿ ಕೋರ್ಟ್​ ಮೊರೆ!

ಮೌನೇಶ್ ಪತ್ತಾರ ಎಂಬಾತ ಲಕ್ಷ್ಮೀ ಬಡಿಗೇರ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾರೆ. ಇದರಿಂದ ಆ ಮಹಿಳೆ ನರಕಯಾತನೆ ಅನುಭವಿಸುಂತೆ ಮಾಡಿದ್ದಾನೆ. ರಾಕ್ಷಸನ ಅಟ್ಟಹಾಸಕ್ಕೆ ಪಾಪ ಈಕೆ ಆಸ್ಪತ್ರೆ ಬೆಡ್​ ಮೇಲೆ ನರಳಾಡ್ತಿದ್ದಾಳೆ. ಮಹಿಳೆ ಮೇಲೆ ಮಾತ್ರವಲ್ಲ ಆಕೆ ಮಗುವಿಗೂ ಆ್ಯಸಿಡ್ ಸಿಡಿದಿದ್ದು, ಮಗುವಿಗೆ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿವೆ. ಈ ಹಿಂದೆ ಮೌನೇಶ್ ಮತ್ತು ಲಕ್ಷ್ಮೀ ಇಬ್ಬರಿಗೂ ಮದುವೆಯಾಗಿತ್ತು. ವಿಜಯಪುರದ ಮೂರನಕೇರಿಯವರು. ಆದ್ರೆ, ವಿಜಯಪುರ ಬಿಟ್ಟು ಬಾಗಲಕೋಟೆಯ ಗದ್ದನಕೇರಿಯಲ್ಲಿ ಬಂದು ವಾಸವಿದ್ರು. ಇಬ್ಬರಿಗೂ ಮದುವೆಯಾಗಿದ್ರೂ ಲಕ್ಷ್ಮೀ ಗಂಡನನ್ನ ಬಿಟ್ಟು ಬಂದಿದ್ರೆ, ಮೌನೇಶ್ ಹೆಂಡತಿಯನ್ನ ಬಿಟ್ಟು ಬಂದಿದ್ದ. ಹಾಗಂತ ಇಬ್ಬರು ಅಧಿಕೃತವಾಗಿ ಡಿವೋರ್ಸ್ ಏನೂ ಪಡೆದಿರಲಿಲ್ಲ. ವಿಚ್ಛೇದನ ಪಡೆಯದೇ ಮೌನೇಶ್ ಮತ್ತು ಲಕ್ಷ್ಮೀ ಲಿವಿಂಗ್​ ಟುಗೆದರ್​ನಲ್ಲಿದ್ರು. ಗದ್ದನಕೇರಿ ಕ್ರಾಸ್​ನಲ್ಲಿರುವ ಮನೆಯಲ್ಲಿ ಇಬ್ಬರು ವಾಸವಾಗಿದ್ರು. ಲಕ್ಷ್ಮೀ ಮೌನೇಶ್​ನನ್ನ ನಂಬಿ ಬಂದಿದ್ದಳೂ. ಆದ್ರೆ ದಿನ ಕಳೆದಂತೆ ಈ ಮೌನೇಶ್​ಗೆ ಲಕ್ಷ್ಮೀ ಮೇಲೆ ಅನುಮಾನ ಶುರುವಾಗಿದಿಯಂತೆ. ಈಗ ಇದೇ ಅನುಮಾನದ ಭೂತಕ್ಕೆ ಲಕ್ಷ್ಮೀ ಮೇಲೆ ಆ್ಯಸಿಡ್ ದಾಳಿ ಮಾಡಿ ಅಟ್ಟಹಾಸ ತೋರಿದ್ದಾನೆ.

ಮೌನೇಶನ ಬಣ್ಣದ ಮಾತಿಗೆ ಮರುಳಾಗಿ ಲಕ್ಷ್ಮೀ ಗಂಡನ ಮನೆ ತವರು ಮನೆ ಎರಡನ್ನ ಬಿಟ್ಟು ಬಂದಿದ್ದಳು. ಆದ್ರೆ, ಈ ಮೌನೇಶ್ ನಂಬಿ ಬಂದವಳ ಬಂಗಾರ, ಹಣ ಎಲ್ಲವನ್ನು ಪಡೆದು ಮಾರಿ ಬಿಟ್ಟಿದ್ದನಂತೆ. ಇದಲ್ಲದೇ ಲಕ್ಷ್ಮೀ ಮೇಲೆ ಇನ್ನಿಲ್ಲದ ಅನುಮಾನ ಪಡುತ್ತಿದ್ದನಂತೆ. ಇದೇ ವಿಚಾರಕ್ಕೆ ಪದೇ ಪದೇ ಜಗಳ ಆಗಿದೆ. ಹೀಗಾಗಿ ಮೌನೇಶ್ ಒಂದು ವಾರದ ಹಿಂದೆ ಮನೆ ಬಿಟ್ಟು ಹೋಗಿದ್ನಂತೆ. ಆದ್ರೆ ವಾಪಸ್ ಮನೆಗೆ ಬಂದಾಗ ಲಕ್ಷ್ಮೀ ಬಾಗಿಲು ತೆರೆದಿಲ್ಲವಂತೆ ಪರಿಣಾಮ ಕಿಟಕಿಯಿಂದ ಲಕ್ಷ್ಮೀ ಮೇಲೆ ಆ್ಯಸಿಡ್ ದಾಳಿ ಮಾಡಿಬಿಟ್ಟಿದ್ದಾನೆ. ರಾತ್ರಿ ಮನೆಗೆ ಬಂದವನೇ ಸಾಯ್ತೀನಿ ಬಾಗಿಲು ತೆಗಿ ಅಂದಿದ್ದ. ಆದ್ರೆ ಲಕ್ಷ್ಮೀ ಬಾಗಿಲು ತೆರೆದಿರಲಿಲ್ಲ. ಆ್ಯಸಿಡ್ ಬಾಟಲಿ ಹಿಡ್ಕೊಂಡು ಬಂದಿದ್ದ ಪಾಪಿ ಕಿಟಕಿಯಿಂದ ದಾಳಿ ಮಾಡಿಬಿಟ್ಟಿದ್ದ. ಈ ವೇಳೆ ಲಕ್ಷ್ಮೀ ಮಗಳಿಗೆ ಎಲ್ಲಿ ಆ್ಯಸಿಡ್ ಸಿಡಿಯುತ್ತೆ ಅಂತ ದೂರ ತಳ್ಳಿದ್ದಾರೆ. ಆ್ಯಸಿಡ್ ದಾಳಿಯಿಂದ ಲಕ್ಷ್ಮೀ ಮೈಮೇಲಿದ್ದ ಬಟ್ಟೆಯೆಲ್ಲ ಸುಟ್ಟು ಹೋಗಿ ಅಕ್ಷರಶಹ ನರಕವನ್ನೇ ಅನುಭವಿಸಿಬಿಟ್ಟಿದ್ದಾರೆ. ಬಳಿಕ ಸ್ಥಳೀಯರು ಸೇರಿ ಲಕ್ಷ್ಮೀಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಸಂತ್ರಸ್ತೆ ಕಿಡ್ನಾಪ್​ ಕೇಸ್​​.. ಬಂಧನ ಭೀತಿಯಲ್ಲಿರೋ ಭವಾನಿ ರೇವಣ್ಣಗೆ ಬಿಗ್​ ಶಾಕ್

ಸದ್ಯ ಆ್ಯಸಿಡ್ ದಾಳಿಗೊಳಾದ ಲಕ್ಷ್ಮೀಯನ್ನ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಲಕ್ಷ್ಮೀ ಎಡಗಣ್ಣು ಮತ್ತು ಮುಖದ ಮೇಲೆ ಸುಟ್ಟ ಗಾಯಗಳಾಗಿದ್ದು, ಎಂಟು ವರ್ಷದ ಮಗುವಿಗೂ ಅಲ್ಪ ಪ್ರಮಾಣದಲ್ಲಿ ಆ್ಯಸಿಡ್ ಸಿಡಿದಿದೆ. ಇದೀಗ ಲಕ್ಷ್ಮೀ ತನ್ನ ಈ ಪರಿಸ್ಥಿತಿಗೆ ಕಾರಣವಾದ ಮೌನೇಶ್​ಗೆ ತಕ್ಕ ಶಿಕ್ಷೆಯಾಗ್ಬೇಕು ಅಂತ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಪಾಪಿ ಮಾಡಿದ ಹೇಯ ಕೃತ್ಯಕ್ಕೆ ಬಡಪಾಯಿ ಮಹಿಳೆ ಬದುಕು ಮಾತ್ರ ನರಕವಾಗಿದೆ. ನಂಬಿ ಬಂದವಳನ್ನ ಚೆನ್ನಾಗಿ ನೋಡಿಕೊಳ್ಳಬೇಕಾದವನು ಆಕೆ ಜೀವನವನ್ನೆ ದುಸ್ಥಿತಿಗೊಳಿಸಿರೋದು ನಿಜಕ್ಕೂ ದುರಂತವೇ ಸರಿ. ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮೌನೇಶ್​ನನ್ನ ಪೊಲೀಸರು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ. ಇನ್ನಾದ್ರು ಹೆಣ್ಮಕಳು ಇಂತಾ ದುರುಳರ ಬಣ್ಣದ ಮಾತುಗಳನ್ನ ನಂಬು ಮುನ್ನ ಹುಷಾರಾಗಿರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೇಯಸಿ ಮೇಲೆ ಆ್ಯಸಿಡ್​ ಹಾಕಿ ಮಾರಣಾಂತಿಕ ಹಲ್ಲೆ ಮಾಡಿದ ಪ್ರೇಮಿ; ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2023/06/Crime-News-3.jpg

Load More