Advertisment

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ದಿಢೀರ್ ಶಿಫ್ಟ್

author-image
Ganesh
Updated On
ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ದಿಢೀರ್ ಶಿಫ್ಟ್
Advertisment
  • ಕಾಟನ್ ಪೇಟೆ ಪೊಲೀಸರಿಂದ ಪುನೀತ್ ಕೆರೆಹಳ್ಳಿ ಬಂಧನ
  • ನಾಯಿ ಮಾಂಸ ಸಾಗಾಟದ ಆರೋಪ ಮಾಡಿದ್ದ ಪುನೀತ್ ಕೆರೆಹಳ್ಳಿ
  • ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಂಧನ

ಬೆಂಗಳೂರು: ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ (ಬಿಎನ್ಎಸ್ 132) ಪಡಿಸಿದ ಆರೋಪದ ಅಡಿಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದರು. ಪೊಲೀಸ್ ಕಸ್ಟಡಿಯಲ್ಲಿರುವ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥಗೊಂಡಿದ್ದಾರೆ.

Advertisment

ರಾಜಸ್ಥಾನದಿಂದ ರಾಜ್ಯಕ್ಕೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ನೂರಾರು ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದಿರುವ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿಯನ್ನು ಮಧ್ಯರಾತ್ರಿ ಬಂಧಿಸಿದ್ದರು.

ಇದನ್ನೂ ಓದಿ:ಬೆಂಗಳೂರಲ್ಲಿ ನಾಯಿ ಮಾಂಸ ಮಾರಾಟ ಆರೋಪ; ಪುನೀತ್​​ ಕೆರೆಹಳ್ಳಿ ತಂಡದಿಂದ ದಾಳಿ; ಮುಂದೇನಾಯ್ತು?

publive-image

ಪೊಲೀಸ್ ಠಾಣೆಯಲ್ಲಿದ್ದ ಪುನೀತ್ ಅಸ್ವಸ್ಥಗೊಂಡು ಮಲಗಿದ್ದಾರೆ. ಕೂಡಲೇ ಕಾಟನ್​ಪೇಟೆ ಪೊಲೀಸರು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಠಾಣೆಯಲ್ಲಿ ಸುಸ್ತಾಗಿ ಮಲಗಿದ್ದ ಪುನೀತ್​ನನ್ನು ಪೊಲೀಸ್ ಸಿಬ್ಬಂದಿ ಕರೆದುಕೊಂಡು ಬಂದಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪುನೀತ್​​ನನ್ನು ವ್ಹೀಲ್ ಚೇರ್ ಮೂಲಕ ಕರೆದುಕೊಂಡು ಹೋಗಿದ್ದಾರೆ.

Advertisment

ಇದೀಗ ಕೆಸಿ ಜನರಲ್ ಆಸ್ಪತ್ರೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಿನ ಜಾವ 4.45 ಕ್ಕೆ ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಕೆ.ಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಪುನೀತ್ ಕೆರೆಹಳ್ಳಿಯನ್ನು ಕರೆದುಕೊಂಡು ಬಂದಿದ್ದಾರೆ.

ಇದನ್ನೂ ಓದಿ:ಬ್ಯಾಂಕ್ ಕೆಲಸ ಐದು ದಿನದಲ್ಲಿ ಮುಗಿಸಿಕೊಳ್ಳಿ.. ಆಗಸ್ಟ್​ನಲ್ಲಿ ಬ್ಯಾಂಕ್​ಗಳಿಗೆ ಭರ್ಜರಿ ರಜೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment