/newsfirstlive-kannada/media/post_attachments/wp-content/uploads/2025/03/GaganBhoomi.jpg)
ಭೂಮಿಕಾ ರಮೇಶ್ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಚಲುವೆ. ಮುದ್ದು ಮುದ್ದಾಗಿರೋ ಭೂಮಿಕಾ ಡ್ಯಾನ್ಸ್ನಲ್ಲೂ ಪ್ರವೀಣೆ. ಹೀಗಾಗಿ ಸಾಕಷ್ಟು ಪರ ಭಾಷೆಯ ಆಫರ್ಗಳು ಬಂದಿವೆ. ಸದ್ಯ ತೆಲುಗಿನಲ್ಲಿ 'ಮೇಘ ಸಂದೇಶಂʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ:65 ವರ್ಷದ ಹಳೇ ಸಿನಿಮಾ.. ಒಂದು ಹಾಡನ್ನು 105 ಬಾರಿ ಬರೆಯಲಾಯ್ತು; ಶೂಟಿಂಗ್ ಮಾಡಲು ತೆಗೆದುಕೊಂಡಿದ್ದು 2 ವರ್ಷ!
ಈ ಧಾರಾವಾಹಿಗೆ ನಾಯಕ ಅಭಿನವ್ ವಿಶ್ವನಾಥನ್. ನನ್ನರಸಿ ರಾಧೆ, ತ್ರಿಪುರ ಸುಂದರಿ ಧಾರಾವಾಹಿ ಮೂಲಕ ಅಭಿನವ್ ಜನಪ್ರಿಯತೆ ಪಡೆದಿದ್ದಾರೆ. ಭೂಮಿಕಾ ಹಾಗೂ ಅಭಿನವ್ ತೆಲುಗಿನಲ್ಲಿ ಸೂಪರ್ ಹಿಟ್ ಜೋಡಿ. ಇಬ್ಬರಿಗೂ ದೊಡ್ಡ ಅಭಿಮಾನಿ ಬಳಗ ಇದೆ. ಈ ಜೋಡಿ ಕೆಮೆಸ್ಟ್ರಿ ನೋಡಿದ ಅಭಿಮಾನಿಗಳು, ಸಮ್ಥಿಂಗ್.. ಸಮ್ಥಿಂಗ್ ಇದ್ಯಾ? ನೀವಿಬ್ಬರೂ ರಿಯಲ್ ಆಗಿಯೇ ಲವ್ ಮಾಡ್ತಿದ್ದೀರಾ? ಅಂತಲ್ಲ ಪ್ರಶ್ನೆ ಮಾಡ್ತಿದ್ದಾರೆ. ಹೀಗಾಗಿ ತೆಲುಗು ಕಿರುತೆರೆಯಲ್ಲಿ ಗುಸು ಗುಸು ಚರ್ಚೆ ನಡಿತಿದೆ.
ಈ ಬಗ್ಗೆ ತೆಲುಗು ರಿಯಾಲಿಟಿ ಶೋ ಒಂದರಲ್ಲಿ ನೇರವಾಗಿ ಕೇಳಿದ್ದಾರೆ. ಇಬ್ಬರ ನಡುವೆ ಗಾಢ ಸ್ನೇಹ ಇದೆ ಅಂತ ಕೇಳಿದ್ದೀವಿ. ಸ್ನೇಹ ಮೀರಿದ ಬಂಧ ಇದೆ ಅಂತ ನೋಡಿದವ್ರಿಗೆ ಅನ್ಸತಿದೆ. ಇಷ್ಟು ಕ್ಲೂಸ್ ಬಾಂಡಿಂಗ್ ಹಿಂದಿನ ಗುಟ್ಟೇನು? ಅಂತ ನೇರವಾಗಿಯೇ ಪ್ರಶ್ನೆ ಮಾಡ್ತಾರೆ. ಈ ವಿಚಾರ ಕಿವಿಗೆ ಬಿಳುತ್ತಿದ್ದಂತೆ, ಕೊಂಚ ಸಂಕೋಚದಲ್ಲಿ ಉತ್ತರಿಸಿದ್ದಾರೆ. ಇನ್ಫ್ಯಾಕ್ಟ್ ಭೂಮಿಕಾ ಅವರ ತಾಯಿ ಕೂಡ ಅಲ್ಲೇ ಇರ್ತಾರೆ. ಅಭಿನವ್‌ಗೆ ಭೂಮಿಕಾ ಇಷ್ಟ ಆಗೋಕೆ ಕಾರಣ, ಅವರಲ್ಲಿರೋ ಕೇರಿಂಗ್ ನೇಚರ್ ಅಂತೆ. ಎಲ್ಲರನ್ನೂ ಅಷ್ಟೇ ಪ್ರೀತಿಯಿಂದ ಮಾತ್ನಾಡಿಸ್ತಾರೆ ಕೇರ್ ಮಾಡ್ತಾರೆ. ಈ ಥರಹದ ಹುಡುಗಿನ ನಾನ್ ಎಲ್ಲಿಯೋ ನೋಡಿಲ್ಲ. ಅದಕ್ಕೆ ನಂಗೆ ಭೂಮಿ ಸಿಕ್ಕಾಪಟ್ಟೆ ಇಷ್ಟ ಆಗೋದು. ನಂಗೆ ಭೂಮಿ ಸ್ನೇಹಿತೆಗಿಂತ ಹೆಚ್ಚು. ಆದ್ರೇ ನೀವೂ ಅನ್ಕೊಂಡ ರೀತಿಯಲ್ಲ ಅಂತಾರೆ ಅಭಿನವ್.
View this post on Instagram
ಇನ್ನೂ, ಭೂಮಿಕಾ ಅಭಿನವ್ ಸ್ನೇಹವನ್ನು ಕೊಂಡಾಡಿದ್ದಾರೆ. ಅಭಿನವ್‌ಗೆ ಸಾಕಷ್ಟು ಫ್ರೆಂಡ್ಸ್ ಇದ್ದಾರೆ, ಯಾವಾಗ್ಲೂ ಹ್ಯಾಪಿ ಆಗಿರೋ ವ್ಯಕ್ತಿತ್ವ ಇವ್ರದ್ದು. ನಂಗೆ ಸ್ನೇಹಿತರಿಲ್ಲ. ಸ್ನೇಹಿತರ ಜೊತೆ ಮಾತನಾಡುವಾಗ ಏನಾದರೂ ಮನಸ್ತಾಪ ಬಂದ್ರೆ, ಭಿನ್ನಾಭಿಪ್ರಾಯ ಬಂದರೆ ಮಾತ್ ಬಿಟ್ಟು ಬಿಡ್ತೀವಿ. ಆದರೆ ಅಭಿನವ್ ವಿಚಾರದಲ್ಲಿ ಹಂಗಲ್ಲ. ಆ ತರಹದ ಜಗಳ ಏನಾದ್ರೂ ಆದ್ರೆ ಅವರೇ ಮುಂದೆ ಬಂದು ಮೊದಲು ಕ್ಷಮೆ ಕೇಳ್ತಾರೆ. ಈ ಗುಣ ನನಗೆ ತುಂಬಾ ಇಷ್ಟ. ಈ ರೀತಿ ಸ್ನೇಹಿತ ನನಗೆ ಸಿಕ್ಕೇ ಇರಲಿಲ್ಲ ಎಂದು ಮನದ ಮಾತು ಹೇಳಿದ್ದಾರೆ ಭೂಮಿಕಾ. ಅದೇನೆ ಇರಲಿ ಈ ಜೋಡಿ ಒಂದಾದ್ರೇ ಚನ್ನಾಗಿರುತ್ತೆ ಅನ್ನೋದು ತೆಲುಗು ವೀಕ್ಷಕರ ಆಸೆ. ಜೊತೆಗೆ ಕೆಲಸ ಮಾಡ್ತಿರೋ ಅದೇಷ್ಟೋ ಕಲಾವಿದರು ಇದೇ ಮಾತು ಹೇಳ್ತಿದ್ದಾರೆ. ಆದ್ರೆ ಪ್ರೀತಿ ವಿಚಾರ ತಳ್ಳಿ ಹಾಕಿದ್ದಾರೆ ಅಭಿನವ್ -ಭೂಮಿಕಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ