/newsfirstlive-kannada/media/post_attachments/wp-content/uploads/2024/12/abhishek-bachchan-1.jpg)
ಬಾಲಿವುಡ್ ತಾರಾ ದಂಪತಿ ಐಶ್ವರ್ಯ ರೈ- ಅಭಿಷೇಕ್ ಬಚ್ಚನ್ ಡಿವೋರ್ಸ್ ವದಂತಿ ಇಂದು ನಿನ್ನೆಯದಲ್ಲ. ಬಹಳ ವರ್ಷಗಳಿಂದಲೂ ಈ ಸುದ್ದಿ ಬಿಟೌನ್‌ನಲ್ಲಿ ಸದ್ದು ಮಾಡುತ್ತಲೇ ಬಂದಿದೆ. ತಮ್ಮ ದಾಂಪತ್ಯ ಜೀವನದ ಬಗ್ಗೆ ಐಶ್ವರ್ಯ ರೈ- ಅಭಿಷೇಕ್ ಬಚ್ಚನ್ ಇದುವರೆಗೂ ಯಾವುದೇ ಮಾತನಾಡದೆ ಇರೋದು ಪ್ರಮುಖ ಕಾರಣವಾಗಿದೆ.
ಇದನ್ನೂ ಓದಿ:ಐಶ್ವರ್ಯಾ ರೈ ಸೆಲ್ಫಿಗೆ ಅಭಿಷೇಕ್ ಬಚ್ಚನ್ ಸ್ಮೈಲ್.. ಬಹುಕಾಲದ ಡಿವೋರ್ಸ್ ವದಂತಿಗೆ ಹೊಸ ಟ್ವಿಸ್ಟ್!
/newsfirstlive-kannada/media/post_attachments/wp-content/uploads/2024/12/abhishek-bachchan.jpg)
ಡಿವೋರ್ಸ್ ಗಾಸಿಪ್‌ಗಳ ಮಧ್ಯೆ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಬಾರಿ ಎಲ್ಲಾ ಗೊಂದಲಕ್ಕೂ ತೆರೆ ಎಳೆದಿರುವ ಈ ಸ್ಟಾರ್ ಜೋಡಿ ಇದೀಗ ಮತ್ತೆ ಬಚ್ಚನ್​ ಕುಟುಂಬದ ಜೊತೆಗೆ ಕಾಣಿಸಿಕೊಂಡಿದ್ದಾರೆ. ಹೌದು, ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಮಗಳಾದ ಆರಾಧ್ಯ ಶಾಲೆಗೆ ಜೊತೆಯಾಗಿ ದಂಪತಿ ಎಂಟ್ರಿ ಕೊಟ್ಟಿದ್ದಾರೆ. ಶಾಲೆಗೆ ಹೋಗುತ್ತಿರೋ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
View this post on Instagram
ಮಗಳು ಆರಾಧ್ಯಳ ಶಾಲೆಯ ಕಾರ್ಯಕ್ರಮಕ್ಕೆ ಬಿಗ್ ಬಿ ಜೊತೆ ಅಭಿಷೇಕ್, ಐಶ್ವರ್ಯಾ ಒಟ್ಟಾಗಿ ತೆರಳಿದ್ದಾರೆ. ಆರಾಧ್ಯ ಧೀರುಭಾಯ್ ಅಂಬಾನಿ ಸ್ಕೂಲ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಶಾಲೆಗೆ ಆಗಮಿಸಿದ್ದ ವೇಳೆ, ಇಬ್ಬರು ನಗು ನಗುತ್ತಾ ಬರುತ್ತಿದ್ದು, ಪತ್ನಿಯನ್ನು ಅಭಿಷೇಕ್ ಕೇರ್ ಮಾಡುತ್ತಿದ್ದ ಪರಿ ಕಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇದು ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us