/newsfirstlive-kannada/media/post_attachments/wp-content/uploads/2024/12/Allu-arjun-4.jpg)
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಂಧನ ಈಗ ತೆಲುಗು ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದೆ. ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಸ್ಟಾರ್ ಅಲ್ಲು ಅರ್ಜುನ್ನನ್ನು ಬಂಧಿಸಲಾಗಿದೆ. ಜೊತೆಗೆ ಥಿಯೇಟರ್ ಮಾಲೀಕ ಹಾಗೂ ಮ್ಯಾನೇಜರ್ ಅವರನ್ನು ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಅಲ್ಲು ಅರ್ಜುನ್ ಅರೆಸ್ಟ್; ನಿನ್ನೆಯೂ ಪುಷ್ಪ -2 ಕಮಾಲ್.. 8 ದಿನದ ಕಲೆಕ್ಷನ್ ಎಷ್ಟು ಕೋಟಿ..?
ಪತಿ ಅಲ್ಲು ಅರ್ಜುನ್ನನ್ನು ಪೊಲೀಸರು ಬಂಧಿಸುತ್ತಿದ್ದಂತೆಯೇ ಪತ್ನಿ ಸ್ನೇಹಾ ರೆಡ್ಡಿ ಕಣ್ಣೀರು ಇಟ್ಟಿದ್ದಾರೆ. ಪೊಲೀಸರು ಮನೆಗೆ ಬಂದಾಗ ಸ್ನೇಹಾರೆಡ್ಡಿ ಉದ್ವಿಗ್ನಗೊಂಡರು. ಆಗ ಅಲ್ಲು ಅರ್ಜುನ್ ಪತ್ನಿಯ ಭುಜ ತಟ್ಟಿ ಧೈರ್ಯ ನೀಡಿದರು. ಜೊತೆಗೆ ಮುತ್ತಿಟ್ಟು ಅಳದಂತೆ ಸೂಚಿಸಿದರು. ಅಲ್ಲು ಅರ್ಜುನ್ ಪತ್ನಿಗೆ ಧೈರ್ಯ ನೀಡ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪುಷ್ಪ-2 ಪ್ರಿಮಿಯರ್ ಶೋ ವೇಳೆ ನೂಕುನುಗ್ಗಲು ಉಂಟಾಗಿ ರೇವತಿ ಎಂಬ ಮಹಿಳೆ ಪ್ರಾಣ ಕಳೆದುಕೊಂಡಿದ್ದಾಳೆ. ಈ ಘಟನೆ ಬಗ್ಗೆ ಅಲ್ಲು ಅರ್ಜುನ್ ಪ್ರತಿಕ್ರಿಯಿಸಿದ್ದಾರೆ. ರೇವತಿ ಕುಟುಂಬಕ್ಕೆ ಅಲ್ಲು ಅರ್ಜುನ್ ಸಾಂತ್ವನ ಹೇಳಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ 25 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದಾರೆ. ಆದರೆ ಸಂಧ್ಯಾ ಮ್ಯಾನೇಜ್‌ಮೆಂಟ್ ಹಾಗೂ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಾಗಿದೆ. ಬಿಎನ್ಎಸ್ ಅಡಿಯಲ್ಲಿ 105, 118(1)r/w3(5) ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ಅಲ್ಲು ಅರ್ಜುನ್ ಅರೆಸ್ಟ್; ನಿನ್ನೆಯೂ ಪುಷ್ಪ -2 ಕಮಾಲ್.. 8 ದಿನದ ಕಲೆಕ್ಷನ್ ಎಷ್ಟು ಕೋಟಿ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ