/newsfirstlive-kannada/media/post_attachments/wp-content/uploads/2024/12/Allu-Arjun-Police-Station-1.jpg)
ಹೈದರಾಬಾದ್: ಡಿಸೆಂಬರ್ 4ರಂದು ಸಂಧ್ಯಾ ಥಿಯೇಟರ್ ಬಳಿ ನಡೆದ ಕಾಲ್ತುಳಿತ ಪ್ರಕರಣ ಸದ್ದು ಮಾಡುತ್ತಲೇ ಇದೆ. ಇಂದು ವಿಚಾರಣೆಗೆ ಹಾಜರಾಗುವಂತೆ ಅಲ್ಲು ಅರ್ಜುನ್‌ಗೆ ಚಿಕ್ಕಡಪಲ್ಲಿ ಪೊಲೀಸರು ಬುಲಾವ್ ನೀಡಿದ್ದು, ಪುಷ್ಪ 2 ಸ್ಟಾರ್ ಅಲ್ಲು ಅರ್ಜುನ್ ಅವರು ವಿಚಾರಣೆ ಎದುರಿಸಿದ್ದಾರೆ.
ತಮ್ಮ ನಿವಾಸದಿಂದ ಪೊಲೀಸ್ ಠಾಣೆಗೆ ತೆರಳುವಾಗ ನಟ ಅಲ್ಲು ಅರ್ಜುನ್ ಅವರು ಮೊದಲಿಗೆ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು. ಪತ್ನಿ ಹಾಗೂ ಮಕ್ಕಳಿಗೆ ಧೈರ್ಯ ಹೇಳಿದ ಅಲ್ಲು ಅರ್ಜುನ್ ಅವರು ತಂದೆ ಹಾಗೂ ಆಪ್ತರ ಜೊತೆ ಪೊಲೀಸ್ ಠಾಣೆ ಕಡೆಗೆ ಹೆಜ್ಜೆ ಹಾಕಿದರು.
ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಎಸಿಪಿ ರಮೇಶ್ ಕುಮಾರ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ನಾಯಕ್ ಅವರಿಂದ ಅಲ್ಲು ಅರ್ಜುನ್ ಅವರ ವಿಚಾರಣೆ ನಡೆಸಲಾಗಿದೆ. ಡಿಸೆಂಬರ್ 4 ರಂದು ಸಂಭವಿಸಿದ ಕಾಲ್ತುಳಿತ ದುರಂತದ ಬಗ್ಗೆ ಪ್ರಶ್ನೆ ಮಾಡಲಾಗಿದ್ದು, ಅಗತ್ಯ ಬಿದ್ದಲ್ಲಿ ಘಟನೆ ನಡೆದ ಸ್ಥಳಕ್ಕೂ ನಿಮ್ಮನ್ನು ಕರೆದೊಯ್ಯುತ್ತೇವೆ ಎಂದು ನೊಟೀಸ್‌ನಲ್ಲಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: BREAKING: ಅಲ್ಲು ಅರ್ಜುನ್ ಮನೆಗೆ ನುಗ್ಗಿ ದಾಂಧಲೆ; ಕಲ್ಲು ತೂರಾಟ; 8 ಮಂದಿ ಅರೆಸ್ಟ್
ಪೊಲೀಸರು ಕೇಳಿದ 10 ಪ್ರಶ್ನೆಗಳು
1. ಸಂಧ್ಯಾ ಥಿಯೇಟರ್‌ಗೆ ಭೇಟಿ ನೀಡಿದಾಗ ನಿಮ್ಮ ಜೊತೆಗೆ ಎಷ್ಟು ಮಂದಿ ಬೌನ್ಸರ್‌ಗಳು ಇದ್ದರು
2. ಥಿಯೇಟರ್‌ಗೆ ಭೇಟಿ ನೀಡಲು ಪೊಲೀಸ್ ಇಲಾಖೆಯ ಬಂದೋಬಸ್ತ್ ಅನುಮತಿ ಪಡೆಯಲಾಗಿತ್ತೇ?
3. ಥಿಯೇಟರ್ ಹೊರಗೆ ಎಷ್ಟು ಮಂದಿ ಸೇರಿದ್ದಾರೆ ಎಂಬುದು ನಿಮಗೆ ಗೊತ್ತಿತ್ತಾ?
4. ಕಾಲ್ತುಳಿತ ಸಂಭವಿಸಿದ್ದು ಯಾವಾಗ, ಯಾರಿಂದ ನಿಮಗೆ ಗೊತ್ತಾಯಿತು?
5. ಕಾಲ್ತುಳಿತ ಸಂಭವಿಸಿದ್ದು ಗೊತ್ತಾದರೂ, ಥಿಯೇಟರ್‌ನಿಂದ ಯಾಕೆ ನೀವು ಹೊರಗೆ ಹೋಗಲಿಲ್ಲ?
6. ಪೊಲೀಸರು ರಕ್ಷಣೆ ನೀಡುವ ಅನುಮತಿಯನ್ನೇ ನೀಡದೇ ಇದ್ದರೂ ಥಿಯೇಟರ್‌ಗೆ ಭೇಟಿ ಕೊಟ್ಟಿದ್ದು ತಪ್ಪಾಲ್ಲವೇ?
7. ಪೊಲೀಸರು ನೀವು ಥಿಯೇಟರ್‌ಗೆ ಭೇಟಿ ನೀಡಲು ಅನುಮತಿ ನೀಡಿದ್ದಾರೆ ಎಂಬುದನ್ನು ಸಮರ್ಥಿಸಲು ಸಾಕ್ಷ್ಯ, ಆಧಾರ ಇದೆಯೇ?
8. ಥಿಯೇಟರ್‌ಗೆ ಭೇಟಿ ನೀಡಲು ಪೊಲೀಸರ ಅನುಮತಿ ಪಡೆದಿದ್ದಿರಾ?
9. ನಿಮ್ಮ ಟೀಮ್ ಥಿಯೇಟರ್ ಬಳಿ ಇದ್ದ ಪರಿಸ್ಥಿತಿಯನ್ನು ನಿಮಗೆ ಮುಂಚೆಯೇ ತಿಳಿಸಿದ್ರಾ?
10. ಪೊಲೀಸರು ನಿಮ್ಮ ಭೇಟಿಗೆ ಅನುಮತಿ ನೀಡಿಲ್ಲ ಎಂಬುದು ನಿಮಗೆ ಗೊತ್ತಿತ್ತಾ?
ಪುಷ್ಪ 2 ಸ್ಟಾರ್ ಅಲ್ಲು ಅರ್ಜುನ್‌ಗೆ ಪೊಲೀಸರು ನೋಟಿಸ್ ನೀಡಿದ್ದು, ವಿಚಾರಣೆ ಬಳಿಕ ಸಂಧ್ಯಾ ಥಿಯೇಟರ್ ಬಳಿ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡುವ ಸಾಧ್ಯತೆ ಇದೆ. ಅಲ್ಲು ಅರ್ಜುನ್ ಮತ್ತು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಸಮರ ಮತ್ತೊಂದು ಹಂತ ತಲುಪಿದ್ದು, ಮುಂದಿನ ಬೆಳವಣಿಗೆಗಳು ಕುತೂಹಲಕ್ಕೆ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ