Advertisment

ಪುಷ್ಪ 2 ಕಾಲ್ತುಳಿತ ಕೇಸ್‌.. ಸಿಎಂ ರೇವಂತ್ ರೆಡ್ಡಿ ಆರೋಪಕ್ಕೆ ಅಲ್ಲು ಅರ್ಜುನ್ ತಿರುಗೇಟು; ಹೇಳಿದ್ದೇನು?

author-image
Gopal Kulkarni
Updated On
ಪುಷ್ಪ 2 ಕಾಲ್ತುಳಿತ ಕೇಸ್‌.. ಸಿಎಂ ರೇವಂತ್ ರೆಡ್ಡಿ ಆರೋಪಕ್ಕೆ ಅಲ್ಲು ಅರ್ಜುನ್ ತಿರುಗೇಟು; ಹೇಳಿದ್ದೇನು?
Advertisment
  • ಆಂಧ್ರದಲ್ಲಿ ಮುಗಿಯದ ಸಂಧ್ಯಾ ಥಿಯೇಟರ್ ಘಟನೆಯ ವಿವಾದ
  • ಸದನದಲ್ಲಿ ಅಲ್ಲು ಅರ್ಜುನ್ ವಿರುದ್ಧ ಸಿಎಂ ರೇವಂತ್​ ರೆಡ್ಡಿ ಆರೋಪ
  • ಸಿಎಂ ಎಲ್ಲಾ ಆರೋಪಗಳಿಗೆ ಏನು ಉತ್ತರ ಕೊಟ್ಟರು ಅಲ್ಲು ಅರ್ಜುನ್?

ಪುಷ್ಪಾ 2 ಸಿನಿಮಾದ ವಿವಾದಗಳು ದಿನದಿಂದ ದಿನಕ್ಕೆ ಬೇರೆಯದ್ದೇ ಕಾವು ಪಡೆದುಕೊಳ್ಳುತ್ತಿದೆ. ಸಂಧ್ಯಾ ಥಿಯೇಟರ್​ನಲ್ಲಿ ನಡೆದ ಕಾಲ್ತುಳಿದದ ಬಗ್ಗೆ ಈಗಾಗಲೇ ಸಿನಿಮಾ ಹೀರೋ ಅಲ್ಲು ಅರ್ಜುನ್ ಜೈಲಿನ ಮೆಟ್ಟಿಲನ್ನು ಏರಿ ಬಂದು ಈಗ ಮಧ್ಯಂತರ ಜಾಮೀನಿನ ಮೇಲೆ ಈಗ ಈಚೆ ಬಂದಿದ್ದಾರೆ. ಇಷ್ಟೆಲ್ಲಾ ಆದಮೇಲೆ ಈಗ ಆಂಧ್ರಪ್ರದೇಶದ ಸಿಎಂ ರೇವಂತ್ ರೆಡ್ಡಿ ಅಲ್ಲು ಅರ್ಜುನ್ ಮೇಲೆ ಸದನದಲ್ಲಿ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ಈ ಒಂದು ಭೀಕರ ಕಾಲ್ತುಳಿತದಲ್ಲಿ ಮಹಿಳೆಯೊಬ್ಬಳು ಜೀವ ಕಳೆದುಕೊಂಡಿದ್ದಾಳೆ. ಆ ಸಮಯದಲ್ಲಿ ಪೊಲೀಸರು ಹೇಳುವವರೆಗೂ ಅಲ್ಲು ಅರ್ಜುನ್ ಥಿಯೇಟರ್​ನಿಂದ ಹೊರಗೆ ಹೋಗಲಿಲ್ಲ ಎಂದು ರೇವಂತ್ ರೆಡ್ಡಿ ಆರೋಪಿಸಿದ್ದಾರೆ.

Advertisment

ವಿಧಾನಸಭೆಯಲ್ಲಿ ಈ ಬಗ್ಗೆ ಅಕ್ಬರುದ್ಧಿನ್ ಓವೈಸಿ ಈ ಬಗ್ಗೆ ಪ್ರಶ್ನೆಯನ್ನು ಎತ್ತಿದಾಗ ಉತ್ತರಿಸಿದ ರೇವಂತ್ ರೆಡ್ಡಿ ಅಲ್ಲು ರ್ಜುನ್ ರೋಡ್​ ಶೋಗಳನ್ನೆಲ್ಲಾ ಮಾಡಿಕೊಂಡು ಕೈ ಬೀಸಿಕೊಂಡು ಬಂದಿದ್ದಕ್ಕೆ ಅಂದು ಅಷ್ಟೊಂದು ಜನ ಸೇರಿದ್ದಕ್ಕೆ ಅಷ್ಟೆಲ್ಲಾ ಅವ್ಯವಸ್ಥೆಯಾಗಿದೆ. ಥಿಯೇಟರ್​ನವರು ಡಿಸೆಂಬರ್ 2ನೇ ತಾರಿಖಿನಂದೇ ಪೊಲೀಸ್ ಭದ್ರತೆ ಬೇಕು ಎಂದು ಹೇಳಿದ್ದರು ಆದ್ರೆ ಪೊಲೀಸರು ಆ ಮನವಿಯನ್ನು ನಿರಾಕರಿಸಿ ಆಡಳಿತ ಮಂಡಳಿಗೆ ಭದ್ರತೆಯನ್ನು ನೋಡಿಕೊಳ್ಳಿ ಎಂದಿದ್ದರು.

ಇದನ್ನೂ ಓದಿ:ಇಂದು ಉಪೇಂದ್ರ ಹೊಸ ಸಿನಿಮಾ ರಿಲೀಸ್​​; ಬುಕಿಂಗ್​​ನಲ್ಲಿ ಹೊಸ ದಾಖಲೆ ಬರೆದ UI

ಥಿಯೇಟರ್​ಗೆ ಹೋಗುವ ಮುನ್ನ ಅಲ್ಲು ಅರ್ಜುನ್​ ಜೋಶ್​ನಲ್ಲಿ ಕಾರ್​ನ ಸನ್​ರೂಫ್​ ಮೇಲೆ ನಿಂತು ಜನಸಮೂಹದತ್ತ ಕೈ ಬೀಸಿಕೊಂಡು ಹೋದಾಗ ಜನರು ಮತ್ತಷ್ಟು ಹೆಚ್ಚು ಸೇರಿ ಈ ಒಂದು ಕಾಲ್ತುಳಿತ ಆಗಿದೆ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ. ಅದು ಮಾತ್ರವಲ್ಲದೇ ಅಲ್ಲು ಅರ್ಜುನ್ ನಡವಳಿಕೆಯ ಬಗ್ಗೆಯೂ ಮಾತನಾಡಿದ ಸಿಎಂ ಅರೆಸ್ಟ್ ಆಗಿ ರಿಲೀಸ್ ಆದ ಬಳಿಕ ನೇರವಾಗಿ ತನ್ನ ಮನೆಗೆ ನಡೆದ ಅಲ್ಲು ಅರ್ಜುನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನನ್ನು ಹೋಗಿ ಭೇಟಿಯಾಗಿಲ್ಲ. ಆ ಒಂದು ಸಂವೇದನೆಯೂ ಕೂಡ ಆತನಲ್ಲಿ ಇಲ್ಲ ಎಂದು ಹೇಳಿದ್ದಾರೆ.

Advertisment

ಇದನ್ನೂ ಓದಿ: Pushpa2; 2ನೇ ವಾರದ ಕಲೆಕ್ಷನ್ ಎಷ್ಟು ಸಾವಿರ ಕೋಟಿ.. ಪ್ರಭಾಸ್ ರೆಕಾರ್ಡ್ ಬ್ರೇಕ್ ಮಾಡಿದ್ರಾ ಅಲ್ಲು ಅರ್ಜುನ್?

ಆದ್ರೆ ಈ ಒಂದು ಕಾಲ್ತುಳಿತಕ್ಕೆ ಯಾರೆಲ್ಲಾ ಕಾರಣರಾಗಿದ್ದಾರೋ ಅವರೆಲ್ಲರಿಗೂ ಕಠಿಣ ಶಿಕ್ಷೆ ಆಗುವವರೆಗೂ ಬಿಡುವ ಮಾತೆ ಇಲ್ಲ. ಎಲ್ಲರಿಗೂ ತಕ್ಕ ಶಾಸ್ತಿಯಾಗಲಿದೆ ಎಂದಿದ್ದಾರೆ.

ಇನ್ನು ಸಿಎಂ ರೇವಂತ್ ರೆಡ್ಡ ಮಾಡಿದ ಆರೋಪಗಳಿಗೆ ಉತ್ತರಿಸಲು ಇಂದು ಅಲ್ಲು ಅರ್ಜುನ್ ಮಾಧ್ಯಮಗೋಷ್ಠಿಯನ್ನು ಕರೆದಿದ್ದರು. ಮಾಧ್ಯಮಗಳ ಮುಂದೆ ಮಾತನಾಡಿದ ಅಲ್ಲು ಅರ್ಜುನ್, ಡಿಸೆಂಬರ್ 4 ರಂದು ಏನು ನಡೆಯಿತೋ ಅದೆಲ್ಲವೂ ಕೂಡ ಒಂದು ದುರಾದೃಷ್ಟಕರ ಘಟನೆ. ಇದೊಂದು ಅಪಘಾತ. ನಾನು ಜೀವ ಕಳೆದುಕೊಂಡ ಕುಟುಂಬಕ್ಕೆ ಸಾಂತ್ವನವನ್ನು ಹೇಳಬಯಸುತ್ತೇನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆ ಮಗುವಿನ ಮಾಹಿತಿಯನ್ನು ಪ್ರತಿ ಗಂಟೆಗೊಮ್ಮೆ ಪಡೆಯುತ್ತಿದ್ದೇನೆ. ಬಾಲಕನ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಈ ಒಂದ ಘಟನೆಯಲ್ಲಿ ಅನೇಕ ತಪ್ಪು ಮಾಹಿತಿಗಳು, ಸುಳ್ಳು ಆರೋಪಗಳನ್ನು ಮಾಡಲಾಗಿದೆ. ನಾನು ಪೊಲೀಸರನ್ನೋ, ರಾಜಕರಣಿಗಳನ್ನು ಈ ಬಗ್ಗೆ ದೂಷಿಸಲು ಇಷ್ಟಪಡುವುದಿಲ್ಲ. ಆದ್ರೆ ಈ ವಿಚಾರದಲ್ಲಿ ನನ್ನ ತೇಜೋವಧೆಯನ್ನು ಮಾಡಲಾಗುತ್ತಿದೆ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment