Advertisment

ಅಲ್ಲು ಅರ್ಜುನ್ ಬಿಡುಗಡೆ ತಡ ಆಗಿದ್ದೇಕೆ? ಸೇಡು ತೀರಿಸಿಕೊಂಡ್ರಾ ತೆಲಂಗಾಣ ಸಿಎಂ? ಕಾರಣ ಆ ಘಟನೆ

author-image
admin
Updated On
ಐಕಾನ್​ ಸ್ಟಾರ್ ಬಂಧನದ ಹಿಂದೆ ರಾಜಕೀಯನಾ.. ಅಲ್ಲು ಅರ್ಜುನ್- CM ರೇವಂತ್ ರೆಡ್ಡಿ ಮಧ್ಯೆ ಆಗಿದ್ದೇನು?
Advertisment
  • ನಿನ್ನೆ ಬೆಳಗ್ಗೆ ಅರೆಸ್ಟ್.. ಮಧ್ಯಾಹ್ನ ಜೈಲು.. ಸಂಜೆ ಅಲ್ಲುಗೆ ಜಾಮೀನು
  • ನಿನ್ನೆ ರಾತ್ರಿವರೆಗೂ ಜಾಮೀನು ಆದೇಶ ಜೈಲು ಅಧಿಕಾರಿಗಳಿಗೆ ಸಿಗಲಿಲ್ಲ
  • ಅಂದು ನಡೆದ ಘಟನೆಗೆ ಬಂಧಿಸಿ ಸೇಡು ತೀರಿಸಿಕೊಂಡ್ರಾ ತೆಲಂಗಾಣ ಸಿಎಂ?

ಟಾಲಿವುಡ್‌ ನಟ ಅಲ್ಲು ಅರ್ಜುನ್‌ ಅವರಿಗೆ ನಿನ್ನೆಯೇ ಮಧ್ಯಂತರ ಜಾಮೀನು ಸಿಕ್ಕಿತ್ತು. ಆದರೆ ಸ್ಟಾರ್ ನಟನನ್ನ ತಕ್ಷಣವೇ ಬಿಡುಗಡೆ ಮಾಡಲಿಲ್ಲ. ತೆಲಂಗಾಣ ಪೊಲೀಸರು ತೆಗೆದುಕೊಂಡ ಈ ಕ್ರಮ ಈಗ ದೊಡ್ಡ ವಿವಾದಕ್ಕೆ ಗುರಿಯಾಗಿದೆ. ಜಾಮೀನು ಸಿಕ್ಕರೂ ತಕ್ಷಣ ಜೈಲಿನಿಂದ ಯಾಕೆ ಬಿಡುಗಡೆ ಮಾಡಲಿಲ್ಲ? ಅನ್ನೋ ಪ್ರಶ್ನೆ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಕಾಡುತ್ತಿದೆ.

Advertisment

ನಿನ್ನೆ ಜಾಮೀನು.. ಇಂದು ರಿಲೀಸ್‌!
ನಿನ್ನೆ ಬೆಳಗ್ಗೆ ಅಲ್ಲು ಅರ್ಜುನ್ ಮನೆಗೆ ತೆರಳಿದ್ದ ಪೊಲೀಸರು ಅಲ್ಲು ಅರ್ಜುನ್ ಅವರನ್ನ ಅರೆಸ್ಟ್​ ಮಾಡಿದ್ದರು. ಮಧ್ಯಾಹ್ನವೇ ಚಂಚಲಗೂಡ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಸಂಜೆ ತೆಲಂಗಾಣ ಹೈಕೋರ್ಟ್‌ನ ಅಲ್ಲು ಅರ್ಜುನ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿತ್ತು. ಆದರೆ ಜಾಮೀನು ಆದೇಶದ ಪ್ರತಿ ನಿನ್ನೆ ರಾತ್ರಿವರೆಗೂ ಜೈಲು ಅಧಿಕಾರಿಗಳಿಗೆ ಸಿಕ್ಕಿರಲಿಲ್ಲ. ಇದೇ ಈಗ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

ಅಲ್ಲು ಅರ್ಜುನ್‌ಗೆ ಹೈಕೋರ್ಟ್ ನೀಡಿದ ಮಧ್ಯಂತರ ಜಾಮೀನು ಆದೇಶದಲ್ಲಿ ಸ್ವಲ್ಪ ದೋಷ ಇತ್ತು. ಬಳಿಕ ಹೊಸದಾಗಿ ಮಧ್ಯಂತರ ಜಾಮೀನು ಆದೇಶ ಹೊರಡಿಸಿ, ಅದರಲ್ಲಿ ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಉಲ್ಲೇಖ ಮಾಡಲಾಗಿದೆ. ಈ ಹೊಸ ಜಾಮೀನು ಆದೇಶದ ಪ್ರತಿ ತಡರಾತ್ರಿ ಜೈಲು ಅಧಿಕಾರಿಗಳಿಗೆ ತಲುಪಿದೆ.

ಇದನ್ನೂ ಓದಿ: ಅಲ್ಲು ಅರ್ಜುನ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ.. ಮಾವ ಪವನ್​ ಕಲ್ಯಾಣ್​ಗೆ ಐಕಾನ್​ ಸ್ಟಾರ್ ಡಿಚ್ಚಿ? 

Advertisment

ಜಾಮೀನು ಆದೇಶದ ಪ್ರತಿಯನ್ನು ಜೈಲು ಅಧಿಕಾರಿಗಳು ಪರಿಶೀಲಿಸಬೇಕಾಗಿತ್ತು. ಹೀಗಾಗಿ ನಿನ್ನೆ ರಾತ್ರಿಯೇ ಅಲ್ಲು ಅರ್ಜುನ್ ಬಿಡುಗಡೆ ಮಾಡಲಿಲ್ಲ ಎನ್ನಲಾಗಿದೆ. ನಿನ್ನೆ ರಾತ್ರಿ 11 ಗಂಟೆ ವೇಳೆಗೆ ಚಂಚಲಗೂಡ ಜೈಲು ಅಧಿಕಾರಿಗಳು ಇಂದು ಬೆಳಗ್ಗೆ ಅಲ್ಲು ಅರ್ಜುನ್ ಅವರನ್ನ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಇಂದು ಬೆಳಗ್ಗೆ 6.40ಕ್ಕೆ ಅಲ್ಲು ಅರ್ಜುನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

publive-image

ಅಲ್ಲು ಅರ್ಜುನ್ ಬಂಧನದ ಹಿಂದೆ ರಾಜಕೀಯ?
ನಿನ್ನೆ ಇಡೀ ದಿನ ನಡೆದ ಬೆಳವಣಿಗೆ ಹಾಗೂ ಅಲ್ಲು ಅರ್ಜುನ್ ಬಂಧಿಸಿದ್ದರ ಹಿಂದೆ ರಾಜಕೀಯ ಇದ್ಯಾ ಅನ್ನೋ ಅನುಮಾನಗಳು ಕೇಳಿ ಬಂದಿದೆ. ನಟ ಅಲ್ಲು ಅರ್ಜುನ್ ಅವರ ಮೇಲೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರಿಗೆ ಕೋಪ ಇತ್ತು. ಹೀಗಾಗಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಅಲ್ಲು ಅರ್ಜುನ್ ಅವರ ಮೇಲೆ ಸೇಡು ತೀರಿಸಿಕೊಂಡ್ರಾ ಅನ್ನೋ ಮಾತುಗಳು ಕೇಳಿ ಬಂದಿದೆ.

ಸೇಡಿಗೆ ಕಾರಣ ಆ ಘಟನೆ!
ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ತಂಡ, ಸಿನಿಮಾ ಬಿಡುಗಡೆಗೂ ಮುನ್ನ ಹೈದರಾಬಾದ್‌ನಲ್ಲಿ ಕಾರ್ಯಕ್ರಮಗಳನ್ನ ಆಯೋಜಿಸಿದ್ದರು. ಪುಷ್ಪ 2 ಇವೆಂಟ್​ನಲ್ಲಿ ಅಲ್ಲು ಅರ್ಜುನ್ ಅವರು ಧನ್ಯವಾದ ಹೇಳುವಾಗ ಸಿಎಂ ಹೆಸರೇಳಲು ವಿಳಂಬ ಮಾಡಿದ್ದರು. ಸಿಎಂ ರೇವಂತ್ ರೆಡ್ಡಿ ಹೆಸರು ಹೇಳದೇ ಅವಮಾನ ಮಾಡಿದ್ದಾರೆ ಅನ್ನೋ ಆರೋಪವೂ ಕೇಳಿ ಬಂದಿತ್ತು. ಅಲ್ಲು ಅರ್ಜುನ್ ಆಡಿದ ಮಾತಿಗೆ ಸಿಎಂ ಕೋಪಗೊಂಡಿದ್ರಾ? ಅಂದು ನಡೆದ ಘಟನೆಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಬಂಧಿಸಿ ಸೇಡು ತೀರಿಸಿಕೊಂಡ್ರಾ ಅನ್ನೋ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಈಗ ಚರ್ಚೆ ಆಗುತ್ತಿದೆ.

Advertisment

publive-image

ಅಲ್ಲು ಅರ್ಜುನ್ ಹೇಳಿದ್ದೇನು?  
ಎಲ್ಲರಿಗೂ ಥ್ಯಾಂಕ್ಯೂ ಹೇಳೋದಕ್ಕಿಂತ ಹೆಚ್ಚೇನೂ ಇಲ್ಲ
ಎಲ್ಲರಿಗೂ ಥ್ಯಾಂಕ್ಯೂ.. ಥ್ಯಾಂಕ್ಯೂ.. ಥ್ಯಾಂಕ್ಯೂ..
ಮುಖ್ಯವಾಗಿ ತೆಲಂಗಾಣ ಸರ್ಕಾರಕ್ಕೆ ಧನ್ಯವಾದ ಹೇಳಲು ಬಯಸ್ತೇನೆ
ವಿಶೇಷ ಗಮನ ನೀಡಿದ್ದಕ್ಕಾಗಿ ಧನ್ಯವಾದ
ಸಿನಿಮಾ ಇಂಡಸ್ಟ್ರಿಯನ್ನ ಇಷ್ಟು ಸಪೋರ್ಟ್ ಮಾಡಿದ್ದಕ್ಕೆ ಧನ್ಯವಾದ
ಮುಖ್ಯಮಂತ್ರಿಗಳಾದ....
ಹೆಸರು ಮರೀಲಿಲ್ಲ.. ಸ್ವಲ್ಪ ನೀರು ಬೇಕಿತ್ತು.
ಕ್ಷಮಿಸಿ.. ಮಾತಾಡಿ ಮಾತಾಡಿ ಗಂಟಲು ಆರಿ ಹೋಗಿದೆ
ನಾನು ನಿಲ್ಲಿಸಿದ್ದಲಿಂದಲೇ ಮಾತು ಮುಂದುವರಿಸ್ತೀನಿ
ಕ್ಷಮಿಸಿ.. ನಾನು ನಿಲ್ಲಿಸಿದ್ದಲಿಂದಲೇ ಮಾತು ಮುಂದುವರಿಸುವೆ
ಮೊದಲಿಗೆ.. ತೆಲಂಗಾಣ ಸರ್ಕಾರಕ್ಕೆ ಧನ್ಯವಾದ ತಿಳಿಸುವೆ
ಮುಖ್ಯವಾಗಿ ಗೌರವಾನ್ವಿತ ಸಿಎಂ ರೇವಂತ್ ರೆಡ್ಡಿಯವರಿಗೆ ಧನ್ಯವಾದ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment