/newsfirstlive-kannada/media/post_attachments/wp-content/uploads/2024/12/Allu-arjun-3.jpg)
ಹೈದರಾಬಾದ್: ಪುಷ್ಪ ಅಂದ್ರೆ ಫ್ಲವರ್ ಅಲ್ಲ. ವೈಲ್ಡ್ ಫೈರ್. ಆದ್ರೀಗ ಇದೇ ಬ್ಯಾಕ್‌ಫೈರ್ ಆಗಿದೆ. ಪುಷ್ಪ-2 ಚಿತ್ರದ ಅಬ್ಬರ, ಆರ್ಭಟ ಅಲ್ಲು ಅರ್ಜುನ್‌ಗೆ ಮುಳುವಾಗಿದೆ. ಅಪಾರ ಸಂಖ್ಯೆಯ ಅಭಿಮಾನವೇ ಟಾಲಿವುಡ್ ನಟನಿಗೆ ಸಂಕಷ್ಟ ತಂದಿಟ್ಟಿದೆ. ಪುಷ್ಪ-2 ಚಿತ್ರದ ಪ್ರೀಮಿಯರ್ ಶೋ ವೇಳೆ ನೂಕು ನುಗ್ಗಲು ಉಂಟಾಗಿ ಮಹಿಳೆ ಸಾವನ್ನಪ್ಪಿದ ಕೇಸ್‌ನಲ್ಲಿ ಸ್ಟೈಲ್ ಐಕಾನ್ ಅರೆಸ್ಟ್ ಆಗಿದ್ರು. ಆದ್ರೀಗ ತೆಲಂಗಾಣ ಹೈಕೋರ್ಟ್ ಪುಷ್ಪರಾಜ್‌ಗೆ ಜಾಮೀನು ನೀಡಿದೆ.
ಅಲ್ಲು ಅರ್ಜುನ್ ಅಂದ್ರೆ ಹೆಸರಲ್ಲ. ಅದೊಂದು ಬ್ರಾಂಡ್. ಪುಷ್ಪಾ ಅಂದ್ರೆ ಫ್ಲವರ್ ಅಲ್ಲ. ವೈಲ್ಡ್ ಫೈರ್. ಹೀಗೆ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಚಿತ್ರ ಪುಷ್ಪಾ-2. ದೇಶದ ಥಿಯೇಟರ್‌ಗಳಲ್ಲಿ ರೂಲ್ ಮಾಡ್ತಿರೋ ಸಿನಿಮಾ. ಆದ್ರೀಗ ಪುಷ್ಪಾ-2 ಅಲೆಯಲ್ಲಿ ತೇಲ್ತಿರೋ ಸ್ಟೈಲ್ ಐಕಾನ್‌ಗೆ ಸಂಕಷ್ಟ ಎದುರಾಗಿದೆ. ಅಭಿಮಾನವೇ ಅಲ್ಲು ಅರ್ಜುನ್‌ಗೆ ಕಂಟಕವಾಗಿದೆ.
ಪುಷ್ಪ-2 ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಪ್ರಕರಣ!
ಪುಷ್ಪ-2 ಚಿತ್ರ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನ ಚಿಂದಿ ಉಡಾಯಿಸುತ್ತಿದೆ. ಸಾವಿರ ಕೋಟಿ ಗಡಿ ಮುಟ್ಟಿ ಮುನ್ನುಗ್ಗುತ್ತಿದೆ. ಸಿನಿಮಾ ಇಂಡಸ್ಟ್ರಿಯಲ್ಲಿ ಚಿತ್ರತಂಡ ರೂಲ್ ಮಾಡುತ್ತಿದೆ. ಅಲ್ಲು ನಟನೆ. ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಎಲ್ಲೆಲ್ಲೂ ಥಿಯೇಟರ್‌ಗಳು ಹೌಸ್ ಫುಲ್ ಆಗುತ್ತಿದೆ. ಈ ಹೊತ್ತಲ್ಲಿ ಪುಷ್ಪ-2 ಪ್ರೀಮಿಯರ್ ಶೋ ವೇಳೆ ಸಂಭವಿಸಿದ್ದ ದುರಂತಕ್ಕೆ ಅಲ್ಲು ಅರ್ಜುನ್ ಬಂಧನವಾಗಿದೆ.
ತಗ್ಗಿದ ‘ಪುಷ್ಪ’!
ಪುಷ್ಪ-2 ಚಿತ್ರದ ಪ್ರೀಮಿಯರ್ ಶೋ ವೇಳೆ ನೂಕುನುಗ್ಗಲು ಉಂಟಾಗಿತ್ತು. ಡಿಸೆಂಬರ್ 5ರಂದು ಹೈದ್ರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ಈ ಘಟನೆ ನಡೆದಿತ್ತು. ನೂಕು ನುಗ್ಗಲಿನಿಂದ ಕಾಲ್ತುಳಿತ ಉಂಟಾಗಿ ಮೂವರಿಗೆ ಗಾಯವಾಗಿತ್ತು. ಈ ಘಟನೆಯಲ್ಲಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ರೆ, ಆಕೆಯ ಇಬ್ಬರು ಮಕ್ಕಳಿಗೆ ಗಂಭೀರ ಗಾಯಗೊಂಡಿದ್ರು. ಬಳಿಕ ಯಾವುದೇ ಮಾಹಿತಿ ನೀಡದೆ ಅಲ್ಲು ಅರ್ಜುನ್ ಥಿಯೇಟರ್ಗೆ ವಿಸಿಟ್ ಕೊಟ್ಟಿದ್ದೇ ಇದಕ್ಕೆ ಕಾರಣ ಎಂಬ ಆರೋಪ ಬಂದಿತ್ತು. ಹೀಗಾಗಿ ಥಿಯೇಟರ್ ಮಾಲಿಕ ಹಾಗೂ ಅಲ್ಲು ಅರ್ಜುನ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. BNS 115ರ ಅಡಿ ಚಿಕ್ಕಡಪಲ್ಲಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಬೆಡ್‌ರೂಂನಲ್ಲೇ ಅರೆಸ್ಟ್.. ಡ್ರೆಸ್ ಚೇಂಜ್‌ಗಿಲ್ಲ ಅವಕಾಶ
ಎಫ್ಐಆರ್ ದಾಖಲಿಸಿದ್ದ ಚಿಕ್ಕಡಪಲ್ಲಿ ಪೊಲೀಸರು ಇವತ್ತು ಹೈದ್ರಾಬಾದ್‌ನಲ್ಲಿರೋ ಅಲ್ಲು ಅರ್ಜುನ್ ಮನೆಗೆ ದೌಡಾಯಿಸಿದ್ರು. ಸೀದಾ ಅಲ್ಲು ಅರ್ಜುನ್ ಬೆಡ್‌ರೂಮ್‌ಗೆ ಎಂಟ್ರಿ ಕೊಟ್ಟು ಯು ಆರ್ ಅಂಡರ್ ಅರೆಸ್ಟ್ ಎಂದಿದ್ರು. ಈ ವೇಳೆ ಡ್ರೆಸ್ ಚೇಂಜ್ ಮಾಡ್ತೀನಿ ಅಂತ ಅಲ್ಲು ಅರ್ಜುನ್ ಮನವಿ ಮಾಡಿದ್ರು. ಆದ್ರೆ, ಇದಕ್ಕೆ ಅವಕಾಶ ನೀಡದೇ ಪೊಲೀಸರು ಕರೆದೊಯ್ದರು.
ಪುಷ್ಪರಾಜ್‌ಗೆ 14 ದಿನಗಳ ನ್ಯಾಯಾಂಗ ಬಂಧನ
ಬಳಿಕ ಅಲ್ಲು ಅರ್ಜುನ್‌ರನ್ನ ನಾಂಪಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಅಲ್ಲು ಅರ್ಜುನ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಅಲ್ಲು ಅರ್ಜುನ್‌ಗೆ ಹೈಕೋರ್ಟ್ ಮಧ್ಯಂತರ ಬೇಲ್
ಇದ್ರ ಬೆನ್ನಲ್ಲೇ ಅಲ್ಲು ಅರ್ಜುನ್ ಕೇಸ್‌ನ ರದ್ದು ಮಾಡುವಂತೆ ಹೈಕೋರ್ಟ್ ಮೊರೆ ಹೋಗಿದ್ರು. ಪ್ರಕರಣದ ವಿಚಾರಣೆ ನಡೆಸಿದ ತೆಲಂಗಾಣ ಹೈಕೋರ್ಟ್ ನಟ ಅಲ್ಲು ಅರ್ಜುನ್‌ಗೆ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ. ಜೈಲು ಸೇರಿದ ಕೆಲ ಹೊತ್ತಲ್ಲೇ ಜಾಮೀನು ಸಿಕ್ಕಿದೆ.
ಅಲ್ಲು ಅರ್ಜುನ್ ತಪ್ಪಿಲ್ಲ ಎಂದ ರೇವತಿ ಪತಿ
ಅಲ್ಲು ಅರ್ಜುನ್ ಅರೆಸ್ಟ್ ಆಗ್ತಿದ್ದಂತೆ ಮೃತ ರೇವತಿ ಪತಿ ಕೇಸ್‌ಗೆ ಟ್ವಿಸ್ಟ್ ಕೊಟ್ಟಿದ್ದಾರೆ. ನನ್ನ ಪತ್ನಿ ಸಾವಿನಲ್ಲಿ ಅಲ್ಲು ಅರ್ಜುನ್ ತಪ್ಪಿಲ್ಲ. ಬೇಕಿದ್ರೆ ಕೇಸ್ ವಾಪಸ್ ತೆಗೆದುಕೊಳ್ಳಲು ಸಿದ್ಧ ಅಂತ ಭಾಸ್ಕರ್ ಅಚ್ಚರಿಯ ಮಾತನ್ನಾಡಿದ್ದಾರೆ.
ಈಗಾಗಲೇ ಮೃತ ರೇವತಿ ಮನೆಗೆ ಅಲ್ಲು ಅರ್ಜುನ್ ಭೇಟಿ ನೀಡಿದ್ರು. ಮೃತಳ ಕುಟುಂಬಕ್ಕೆ ಸಾಂತ್ವನ ಹೇಳಿ 25 ಲಕ್ಷ ರೂಪಾಯಿ ಪರಿಹಾರವನ್ನೂ ಘೋಷಿಸಿದ್ರು. ಇದ್ರ ಮಧ್ಯೆ ಅಲ್ಲು ಅರ್ಜುನ್ ಬಂಧನವಾಗಿದೆ. ಆದ್ರೆ, ಬೆಳಗ್ಗೆ ಅರೆಸ್ಟ್ ಆಗಿ ಸಂಜೆಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಜೈಲಿನ ಸಂಕಷ್ಟದಿಂದ ಪುಷ್ಪ-2 ಚಿತ್ರದಂತೆ ಸ್ಟೈಲ್ ಐಕಾನ್ ಪಾರಾಗಿದ್ದಾರೆ. ಬೇಲ್ ಸಿಕ್ಕಿದ್ರೂ ಇನ್ನೂ ಅಲ್ಲು ಅರ್ಜುನ್ ರಿಲೀಸ್ ಆಗಿಲ್ಲ. ನಾಳೆ ಬೆಳಗ್ಗೆ ರಿಲೀಸ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ:ಜಾಮೀನು ಸಿಕ್ರೂ ನಟ ದರ್ಶನ್ಗೆ ಕಾದಿದೆ ಕಾನೂನು ಕಂಟಕ; ಅಚ್ಚರಿ ಮೂಡಿಸಿದ ಪೊಲೀಸರ ನಡೆ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ