newsfirstkannada.com

ಆ ಕಾರಣಕ್ಕೆ ಡಿಪ್ರೆಷನ್​​ಗೆ ಹೋಗಿದ್ದ ನಟ ಅಕುಲ್​​ ಬಾಲಾಜಿ.. ಈ ಬಗ್ಗೆ ಸ್ಟಾರ್​​ ನಿರೂಪಕ ಏನಂದ್ರು?

Share :

Published June 8, 2024 at 6:13am

  ಚಟಪಟ ಅಂತ ಮಾತನಾಡೋ ಅಕುಲ್​ ಬಾಲಾಜಿ ಜೀವನದಲ್ಲಿ ಆಗಿದ್ದೇನು..?

  ನಗು ನಗುತ್ತಲೇ ಎಲ್ಲರನ್ನೂ ನಗಿಸುವ ಕಲೆ ಹೊಂದಿರೋ ನಟ, ನಿರೂಪಕ ಇವರು

  ನನ್ನ ಕೆಟ್ಟ ಸಮಯದಲ್ಲಿ ನನಗೆ ಜೀವ ತುಂಬಿದ್ದು ಆ ವ್ಯಕ್ತಿ ಮಾತ್ರ- ಅಕುಲ್​ ಬಾಲಾಜಿ

ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಅಕುಲ್ ಬಾಲಾಜಿ ಎಂದರೆ ಥಟ್​ ಅಂತ ನೆನಪಾಗೋದೆ ಆ ಜೋರಾದ ಮಾತು, ನಗುಮುಖ, ಟವರ ಹಾಸ್ಯ ಚಟಾಕಿ. ನಗು ನಗುತ್ತಲೇ ಎಲ್ಲರನ್ನೂ ತನ್ನತ್ತ ಸೆಳೆಯುವ ನಿರೂಪಕ ಅಕುಲ್ ಬಾಲಾಜಿ ಅವರ ಬಗ್ಗೆ ಅಚ್ಚರಿ ವಿಚಾರವೊಂದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಚಂದನ್ ಶೆಟ್ಟಿ, ನಿವೇದಿತಾ ಡಿವೋರ್ಸ್‌ಗೆ ಹೊಸ ಟ್ವಿಸ್ಟ್; ಬಿಗ್ ಶಾಕ್ ಕೊಟ್ಟ ಮಾಜಿ ಕಪಲ್ಸ್; ಏನಾಯ್ತು?

ಚಟಪಟ ಅಂತ ಮಾತನಾಡೋ ಅಕುಲ್​ ಬಾಲಾಜಿ ಅವರು ತಮ್ಮ ಖಡಕ್​​​ ಮಾತಿನಲ್ಲೇ ರಾಜ್ಯದ ಮನೆ ಮಾತಾಗಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅಕುಲ್ ಬಾಲಾಜಿ ಹೆಸರು ಹೇಳಿದ್ರೆ ಸಾಕು ಇವರು ಆ್ಯಂಕರ್ ಅಂತಾ ಥಟ್ ಅಂತ ಹೇಳಿ ಬಿಡ್ತಾರೆ. ಅಷ್ಟರ ಮಟ್ಟಿಗೆ ಅಕುಲ್ ಬಾಲಾಜಿ ಫೇಮಸ್​​ ಆಗಿದ್ದಾರೆ. ಕನ್ನಡ, ತೆಲುಗು ಭಾಷೆಗಳಲ್ಲಿ ನಿರೂಪಕರಾಗಿ ಗುರುತಿಸಿಕೊಂಡಿದ್ದ ಅಕುಲ್ ಬಾಲಾಜಿ ಅವರು ಕೆಲವು ವರ್ಷಗಳ ಹಿಂದೆ ಡಿಪ್ರೆಷನ್​​ಗೆ ಹೋಗಿದ್ದರಂತೆ. ಈ ಬಗ್ಗೆ ಖುದ್ದು ಅಕುಲ್​ ಬಾಲಾಜಿ ಅವರೇ ಹೇಳಿಕೊಂಡಿದ್ದಾರೆ.

ಇತ್ತೀಚೆಗೆಷ್ಟೇ ಡಾಲಿ‌ ಧನಂಜಯ ಅಭಿನಯದ ‘ಕೋಟಿ’ ಸಿನಿಮಾದ ವಿಶೇಷ ಪ್ರೀ-ರಿಲೀಸ್ ಕಾರ್ಯಕ್ರಮ ನಡೆದಿತ್ತು. ಇದೇ ಕಾರ್ಯಕ್ರಮದಲ್ಲಿ ನಟ, ನಿರೂಪಕ ಅಕುಲ್​ ಬಾಲಾಜಿ ಅವರು ತಮ್ಮ ಜೀವನದಲ್ಲಾದ ಕಹಿ ಘಟನೆ ಬಗ್ಗೆ ಕಲರ್ಸ್‌ ಕನ್ನಡದಲ್ಲಿ ಬ್ಯುಸಿನೆಸ್ ಹೆಡ್ ಆಗಿದ್ದ ಪರಮೇಶ್ವರ್‌ ಗುಂಡ್ಕಲ್ ಅವರ ಮುಂದೆ ಹೇಳಿದ್ದಾರೆ.

ಕೆಲವು ವರ್ಷಗಳ ಹಿಂದೆ ತುಂಬಾ ಕುಗ್ಗಿ ಹೋಗಿದ್ದೆ. ಯಾವ ರೀತಿ ಎಂದರೆ ಡಿಪ್ರೆಷನ್  ಹಂತಕ್ಕೂ ಹೋಗಿ ಬಿಟ್ಟಿದೆ. ಅದೇ ಸಂದರ್ಭದಲ್ಲಿ ನನಗೆ ಪರಂ ಅವರ ಕಡೆಯಿಂದ ಒಂದು ಕರೆ ಬರುತ್ತೆ. ಆಗ ನಾನು ಕಾಲ್​ ಪಿಕ್​ ಮಾಡ್ಲಾ ಬೇಡ್ವಾ ಅಂತ ಯೋಚನೆ ಮಾಡಿದ್ದೇ. ಆನಂತರ ಫೋನ್​ ಪಿಕ್​ ಮಾಡಿಬಿಟ್ಟೆ. ಆಗ ಪರಂ ಬಾಯಿಂದ ಬಂದ ಮೊದಲನೇ ಪದ ಅನುಬಂಧ ಬರ್ತಿದೆ ರೆಡಿ ಇದ್ಯಾ ಅಂತ. ಆ ಒಂದು ಮಾತು ನನಗೆ ಎಷ್ಟು ಶಕ್ತಿ ತುಂಬಿದೆ ಅಂದ್ರೆ, ಇವತ್ತಿಗೂ ನಾನು ಏನೇ ಸಂಬಂರ್ಧ ಬಂದರೂ ಯಾರನ್ನೇ ಮರೆತರೂ ನಿಮ್ಮ ಆ ಮಾತನ್ನು ಮರೆಯೋದಿಲ್ಲ. ಎಷ್ಟೋ ಜನ ಅಕುಲ್​ ಬೇಡ ಅಂತ ಅದ್ರು, ಆ ವೇಳೆ ನೀವು ಈ ಕಾರ್ಯಕ್ರಮಕ್ಕೆ ಅಕುಲ್​ ಬೇಕೇ ಬೇಕು ಅಂತ ಕರೆಸಿದ್ದೀರಿ. ನಿಮಗೆ ಎಷ್ಟೂ ಥ್ಯಾಂಕ್ಸ್​ ಹೇಳಿದ್ರೂ ಕಡಿಮೆ ಅಂತ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆ ಕಾರಣಕ್ಕೆ ಡಿಪ್ರೆಷನ್​​ಗೆ ಹೋಗಿದ್ದ ನಟ ಅಕುಲ್​​ ಬಾಲಾಜಿ.. ಈ ಬಗ್ಗೆ ಸ್ಟಾರ್​​ ನಿರೂಪಕ ಏನಂದ್ರು?

https://newsfirstlive.com/wp-content/uploads/2024/06/akul-balaji.jpg

Load More