ತಂಗಿ ಬೆನ್ನಲ್ಲೇ ಅಣ್ಣ.. 'ಲಕ್ಷ್ಮಿ ನಿವಾಸ' ಸೀರಿಯಲ್​ನಿಂದ ಹೊರ ನಡೆದ ಸ್ಟಾರ್​ ನಟ?

author-image
Veena Gangani
Updated On
ತಂಗಿ ಬೆನ್ನಲ್ಲೇ ಅಣ್ಣ.. 'ಲಕ್ಷ್ಮಿ ನಿವಾಸ' ಸೀರಿಯಲ್​ನಿಂದ ಹೊರ ನಡೆದ ಸ್ಟಾರ್​ ನಟ?
Advertisment
  • ಲಕ್ಷ್ಮೀ ನಿವಾಸ ಸೀರಿಯಲ್​ನಿಂದ ಆಚೆ ಬಂದ ನಟ
  • ಒಬ್ಬರಾದ ಮೇಲೆ ಒಬ್ಬರು ಸೀರಿಯಲ್​ನಿಂದ ಔಟ್​!
  • ಲಕ್ಷ್ಮೀ ನಿವಾಸ ಸೀರಿಯಲ್​ನಿಂದ ಆಚೆ ಬಂದಿದ್ದೇಕೆ?

ಕನ್ನಡ ಕಿರುತೆರೆಯಲ್ಲಿ ಇತ್ತೀಚೆಗೆ ಲಾಂಚ್ ಆದ ಧಾರಾವಾಹಿಗಳಲ್ಲಿ ಲಕ್ಷ್ಮೀ ನಿವಾಸ ಕೂಡ ಒಂದು. ಬಹುದೊಡ್ಡ ತಾರಗಣ ಹೊಂದಿರೋ ಈ ಧಾರಾವಾಹಿಯ ವೀಕ್ಷಕರ ನೆಚ್ಚಿನ ಸೀರಿಯಲ್​ನಲ್ಲಿ ಒಂದಾಗಿದೆ. ಆದ್ರೆ, ಇದರ ಮಧ್ಯೆ ಸೀರಿಯಲ್​ ತಂಡ ವೀಕ್ಷಕರಿಗೆ ಶಾಕ್​ ಮೇಲೆ ಶಾಕ್ ಕೊಡುತ್ತಿದೆ.

ಇದನ್ನೂ ಓದಿ:ಗುಡ್​​ನ್ಯೂಸ್​ ಎಂದ ಭಾವನಾ ರಾಮಣ್ಣ.. 40ನೇ ವಯಸ್ಸಲ್ಲಿ ಅಮ್ಮ ಆಗ್ತಿದ್ದಾರೆ ಸ್ಯಾಂಡಲ್​ವುಡ್ ನಟಿ

publive-image

ಹೌದು, ಮೊದಲು ಲಕ್ಷ್ಮೀ ನಿವಾಸ ಸೀರಿಯಲ್​ನಿಂದ ತನು ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಯುಕ್ತಾ ಅವರು ಹೊರಬಂದಿದ್ದರು. ಇದಾದ ಬಳಿಕ ಧಾರಾವಾಹಿ ಶುರುವಾದಾಗಿನಿಂದಲೂ ಲಕ್ಷ್ಮೀ ಪಾತ್ರದಲ್ಲಿ ಅಭಿನಯಿಸುತ್ತಿದ್ದ ನಟಿ ಶ್ವೇತಾ ಅವರು ಹೊರಗಡೆ ಬಂದಿದ್ದರು. ಇದೀಗ ಮತ್ತೊಂದು ಸ್ಟಾರ್ ನಟ ಲಕ್ಷ್ಮೀ ನಿವಾಸ ಸೀರಿಯಲ್​ನಿಂದ ಆಚೆ ಬಂದು ವೀಕ್ಷಕರಿಗೆ ಶಾಕ್​ ಕೊಟ್ಟಿದ್ದಾರೆ.

ಹೌದು, ಲಕ್ಷ್ಮೀ ನಿವಾಸ ಸೀರಿಯಲ್ ಆರಂಭವಾದಾಗಿನಿಂದ ನರಸಿಂಹ ಪಾತ್ರದಲ್ಲಿ ನೀನಾಸಂ ಅಶ್ವಥ್ ನಟಿಸುತ್ತಿದ್ದರು. ರಂಗಭೂಮಿ ಕಲಾವಿದರಾಗಿರುವ ನೀನಾಸಂ ಅಶ್ವಥ್ ಧಾರಾವಾಹಿಯ ಹಿರಿಯ ಕಲಾವಿದರಾಗಿದ್ದರು. ಇದೀಗ ನೀನಾಸಂ ಅಶ್ವಥ್ ಧಾರಾವಾಹಿಯಿಂದ ಹೊರಗೆ ಬಂದಿದ್ದಾರೆ. ಆದರೆ ನಟ ನೀನಾಸಂ ಅಶ್ವಥ್ ಸೀರಿಯಲ್‌ನಿಂದ ಹೊರ ಬಂದಿದ್ದು ಏಕೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment