/newsfirstlive-kannada/media/post_attachments/wp-content/uploads/2025/07/harshika-poonacha-baby.jpg)
ಸ್ಯಾಂಡಲ್ವುಡ್ ಸ್ಟಾರ್ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಸಖತ್ ಖುಷಿಯಲ್ಲಿದ್ದಾರೆ. ಎರಡು ತಿಂಗಳ ಹಿಂದೆ ಚೊಚ್ಚಲ ಮಗುವಿಗೆ ಮುದ್ದಾದ ಹೆಸರನ್ನು ಇಟ್ಟಿದ್ದರು ನಟಿ ಹರ್ಷಿಕಾ ಪೂಣಚ್ಚ ದಂಪತಿ. ಇದೀಗ ತಮ್ಮ 8 ತಿಂಗಳ ಮುದ್ದಾದ ಮಗಳ ಜೊತೆ 2 ವಾರಗಳಲ್ಲಿ 3 ದೇಶ ಸುತ್ತಿ ಖುಷಿ ಪಟ್ಟಿದ್ದಾರೆ. ವಿಯೆಟ್ನಾಂ, ಶ್ರೀಲಂಕಾ, ಥೈಲ್ಯಾಂಡ್ ದೇಶಗಳಲ್ಲಿ ಈ ಪುಟಾಣಿ ಜೊತೆ ಭರ್ಜರಿ ಮಜಾ ಮಾಡಿದ್ದಾರೆ.
ಇದನ್ನೂ ಓದಿ: ರಾಶಿ ರಾಶಿ ಚಿನ್ನಾಭರಣದ ಗೊಂಚಲು.. ಲೋಕಾಯುಕ್ತ ಅಧಿಕಾರಿಗಳೇ ಬೆರಗಾದ್ರು..
ಸಾಮಾನ್ಯವಾಗಿ ಪೋಷಕರಿಗೆ ಮಗುವಾದ ಬಳಿಕ ಆಚೆ ಸುತ್ತಾಡೋಕೆ ಆಗೋದಿಲ್ಲ. ಅದರಲ್ಲೂ ಸಾಕಷ್ಟು ಮಂದಿ ಮನೆಯಿಂದ ಹೊರಗಡೆ ಬರಲು ಯೋಚನೆ ಮಾಡುತ್ತಾರೆ. ಅಂತಹದ್ದರಲ್ಲಿ 8 ತಿಂಗಳ ಪುಟಾಣಿ ಜೊತೆಗೆ ದೇಶ ಸುತ್ತೋದು ಅಂದ್ರೆ ಸಾಮಾನ್ಯ ಮಾತಲ್ಲ. ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
ನನ್ನ ಪುಟ್ಟ ಪ್ರಯಾಣಿಕ ಪುಟ್ಟ ರಾಜಕುಮಾರಿ. ಈ 8 ತಿಂಗಳ ಮಗುವಿನೊಂದಿಗೆ 2 ವಾರಗಳು, 3 ದೇಶಗಳು, 8 ವಿಮಾನಗಳು ಮತ್ತು ಲೆಕ್ಕವಿಲ್ಲದಷ್ಟು ನೆನಪುಗಳು. ನಾವು ಅರ್ಧದಷ್ಟು ಪ್ರಪಂಚವನ್ನು ಪ್ರಯಾಣಿಸಿದ್ದೇವೆ ಆದರೆ ತ್ರಿದೇವಿ ಪೊನ್ನಕ್ಕ ಮತ್ತು ಪತಿ ಅವರೊಂದಿಗಿನ ಈ ರಜೆಯು ನಮ್ಮ ಜೀವನದ ಅತ್ಯುತ್ತಮ ಮತ್ತು ಅತ್ಯಂತ ಸ್ಮರಣೀಯವಾಗಿತ್ತು ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಈ ಪುಟ್ಟ ಮಗುವಿನೊಂದಿಗೆ ವಿಯೆಟ್ನಾಂ + ಶ್ರೀಲಂಕಾ + ಥೈಲ್ಯಾಂಡ್ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಕೆತ್ತಲ್ಪಡುತ್ತದೆ. ನಮ್ಮ ಅತ್ಯುತ್ತಮ ಪ್ರಯಾಣ ಸಂಗಾತಿಯಾಗಿದ್ದಕ್ಕಾಗಿ ಧನ್ಯವಾದಗಳು ಮಗು ಎಂದು ಬರೆದುಕೊಂಡಿದ್ದಾರೆ.
View this post on Instagram
2023, ಆಗಸ್ಟ್ 24ರಂದು ನಟ ಭುವನ್ ಪೊನ್ನಣ್ಣ ಜೊತೆ ಹರ್ಷಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹರ್ಷಿಕಾ ಮತ್ತು ಭುವನ್ ಪೊನ್ನಣ್ಣ ಅನೇಕ ವರ್ಷಗಳ ಸ್ನೇಹಿತರು. ಈ ಸ್ನೇಹ ಪ್ರೀತಿಗೆ ತಿರುಗಿ ಕಳೆದ ವರ್ಷ ಹಸೆಮಣೆ ಏರಿದರು. ವಿರಾಜಪೇಟೆಯ ಅಮ್ಮತ್ತಿಯಲ್ಲಿ ಹರ್ಷಿಕಾ ಮತ್ತು ಭುವನ್ ಕೊಡವ ಶೈಲಿಯಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರ ಮದುವೆಗೆ ಸ್ಯಾಂಡಲ್ನ ಅನೇಕ ಗಣ್ಯರು ಕೂಡ ಸಾಕ್ಷಿಯಾಗಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ